ಕಾಗವಾಡ

ಮಹಿಳೆಯರಿಗೆ ಕೌದಿ ನಿರ್ಮಿಸುವ ತರಬೇತಿಯಿಂದ ಅನುಕೂಲ: ಸ್ಮಿತಾ ಖಮ್ಕರ್

ಮಹಿಳೆಯರಿಗೆ ಕೌದಿ ನಿರ್ಮಿಸುವ ತರಬೇತಿಯಿಂದ ಅನುಕೂಲ:  ಸ್ಮಿತಾ ಖಮ್ಕರ್

ಲೋಕದರ್ಶನ ವರದಿ 

ಕಾಗವಾಡ 05: ಮಹಿಳೆಯರಿಗೆ ಕೈಯಿಂದ “ಕೌದಿ” ನಿರ್ಮಿಸುವ ಬಗ್ಗೆ ಒಳ್ಳೆ ತರಬೇತಿ ನೀಡಿದರೆ ಮನೆಯಲ್ಲಿ ಉಳಿದು ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಕೊಲ್ಲಾಪುರದ ಸಂಸ್ಕಾರ ತರಬೇತಿ ಕೇಂದ್ರದ ಮುಖ್ಯಸ್ಥೆ ಸ್ಮಿತಾ ಖಮ್ಕರ್ ಉಗಾರದಲ್ಲಿ ಹೇಳಿದರು. 

ಗುರುವಾರ ದಿ. 4ರಂದು ಉಗಾರ ಖುರ್ದ್‌ ವಿಹಾರ ಸಭಾಭವನದಲ್ಲಿ ಉಗಾರ್ ಮಹಿಳಾ ಮಂಡಳದ ವತಿಯಿಂದ ಆಯೋಜಿಸಿದ ಸಮಾರಂಭದಲ್ಲಿ  ಕೌದಿ ನಿರ್ಮಿಸುವ ತರಬೇತಿಯಲ್ಲಿ ಪಾಲ್ಗೊಂಡು ಮಾತನಾಡಿದರು. 

ಸ್ಮಿತಾ ಖಮ್ಕರ್‌ವರು ಕಳೆದ ಎರಡು ವರ್ಷದ ಕರೋನಾ ಕಾಲದಲ್ಲಿ ಅನೇಕ ಮಹಿಳೆಯರು ಕೈಗೆ ಕೆಲಸ ಇಲ್ಲದೆ ಮನೆಯಲ್ಲಿ ಖಾಲಿಯಾಗಿ ಉಳಿದಿದ್ದರು. ಇವರ ಆರ್ಥಿಕ ತೊಂದರೆ ಗಮನದಲ್ಲಿ ತೆಗೆದುಕೊಂಡು ಮನೆಯಲ್ಲಿ ಉಳಿದು ಬೇರೆ ಬೇರೆ ಬಟ್ಟೆಗಳನ್ನು ಒಂದುಗೂಡಿಸಿ ಕೈಯಿಂದ ಕೌದಿ ಹೊಲಿದು ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರು ನಿರ್ಮಿಸಿದ ಕೌದಿ ಭಾರತದಲ್ಲಿ ಅಷ್ಟೇ ಅಲ್ಲ ಜರ್ಮನಿ ಮತ್ತು ಇತರ ದೇಶಗಳಲ್ಲಿ ರಫ್ತು ಮಾಡುತ್ತಿದ್ದಾರೆ. 

ಸ್ಮಿತಾ ಖಮ್ಕರ್ ಇವರು ಮತ್ತು ಇತರ ಮಹಿಳೆಯರು ಒಂದುಗೂಡಿ 50 ಅಡಿ ಉದ್ದದ ಕೌದಿ ನಿರ್ಮಿಸುವ ಗುರಿ ಇಟ್ಟುಕೊಂಡಿದ್ದಾರೆ. ಇದನ್ನು ನಿರ್ಮಿಸಿ ಕೊಲ್ಲಾಪುರದ ಮಹಾಲಕ್ಷ್ಮಿ ಮಂದಿರಕ್ಕೆ ಅರೆ​‍್ಣ ಮಾಡುವ ಗುರಿಯಾಗಿದೆ. 50 ಅಡಿ ಉದ್ದದ ಕೌದಿ ನಿರ್ಮಿಸಿದರೆ. ಅದು ಒಂದು ವರ್ಲ್ಡ್‌ ರೆಕಾರ್ಡ್‌ ಆಗಲಿದೆ ಎಂದು ಅವರು ಹೇಳಿದರು. 

ತರಬೇತಿಯಲ್ಲಿ ಬೆಳಗಾವಿ, ಐನಾಪುರ್, ಉಗಾರ್, ಕಾಗವಾಡ ಸೇರಿದಂತೆ ಅನೇಕ ಗ್ರಾಮಗಳಿಂದ ಸುಮಾರು 40 ಮಹಿಳೆಯರು ಪಾಲ್ಗೊಂಡಿದ್ದರು. ಅಲ್ಲದೆ ಮಹಾವಿದ್ಯಾಲಯ ಮತ್ತು ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಾಯಿತು. 

ಉಗಾರ ಮಹಿಳಾ ಮಂಡಳ ಅಧ್ಯಕ್ಷ ಸ್ಮಿತಾ ತಾಯಿ ಶಿರಗಾಂವ್ಕರ್, ರಾಧಿಕಾ ತಾಯಿ ಶಿರಗಾಂವ್ಕರ್ ಮತ್ತು ಸದಸ್ಯರು ಇವರ ತರಬೇತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಮಹಿಳಾ ಮಂಡಳ ಕಾರ್ಯದರ್ಶಿ ಅನಿತಾ ಪೂಜಾರಿ ಸ್ವಾಗತಿಸಿ ಸ್ಮಿತಾ ಖಮ್ಕರ್ ಸೇವೆ ಬಗ್ಗೆ ಮಾಹಿತಿ ನೀಡಿದರು. ರೋಹಿಣಿ ಮುತಾಲಿಕ್ ನಿರೂಪಿಸಿ ಹೊಂದಿಸಿದರು. 


ಸುದ್ದಿ ಓದಿ