ರಾಣೆಬೆನ್ನೂರ

3ನೇ ದಿನವೂ ಮುಂದುವರಿದ ಮಹಿಳೆಯರ ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹ

3ನೇ  ದಿನವೂ  ಮುಂದುವರಿದ ಮಹಿಳೆಯರ ಅಹೋರಾತ್ರಿ ಧರಣಿ ಉಪವಾಸ ಸತ್ಯಾಗ್ರಹ

ರಾಣೇಬೆನ್ನೂರ  05: ಇಲ್ಲಿಯ  ಮಿನಿವಿಧಾನ  ಸಭೆಯ  ಮುಂದೆ  ವಿನಃ ಕಾರಣ  ಗರ್ಭ  ಕೋಶ  ಶಸ್ತ್ರ  ಚಿಕಿತ್ಸೆ ಗೋಳಗಾದ  ಮಹಿಳೆಯರು  ನ್ಯಾಯಕ್ಕಾಗಿ  ನೆಡೆಸುತ್ತಿರುವ  ಅಹೋರಾತ್ರಿ  ಉಪವಾಸ  ಸತ್ಯಾಗ್ರಹ   ಇಂದು  3 ನೇ  ದಿನವೂ  ಮುಂದುವೆರೆದಿದ್ದು. 

ನಿನ್ನೆ  ರಾತ್ರಿ  ಶಾಸಕರು  ಬಂದು  ಭರವಸೆ  ನೀಡಿದರೂ  ಕೂಡಾ ನಮಗೆ  ಇಲ್ಲಿಯೇ  ಪರಿಯಾರ  ಘೋಷಣೆಯಾಗಲಿ ಅಲ್ಲಿಯವರೆಗೂ  ನಾವು  ಈ  ಜಾಗ  ಬಿಟ್ಟು  ಕಾದಲೋದಿಲ್ಲ ಎಂದು  ಪಟ್ಟು  ಹಿಡಿದಿದ್ದಾರೆ. ನಾಳೆ  ಜಿಲ್ಲಾ  ಉಸ್ತುವಾರಿ  ಮಂತ್ರಿ  ಶಿವಾನಂದ್  ಪಾಟೀಲ. ಜಿಲ್ಲೆಗೆ  ಬರಲಿದ್ದು. ಜಿಲ್ಲಾಧಿಕಾರಿ  ಮತ್ತು   ಉಸ್ತುವಾರಿ  ಮಂತ್ರಿಗಳನ್ನ  ಶಾಸಕರು  ಇಲ್ಲಿಗೆ  ಕರೆಯಿಸಿ ಪರಿಯಾರ  ಘೋಷಿಸಬೇಕೆಂದು ವಿನಂತಿಸಿದ್ದಾರೆ.

ಉಪವಾಸ ಸತ್ಯಾಗ್ರಹ ನಿರತ ಮಹಿಳೆಯರು ಲಲಿತವ್ವ ಲಮಾಣಿ ಶೈಲ ರಂಗರೆಡ್ಡಿ, ಪಾರವ್ವ ಲಮಾಣಿ, ಮಂಜಕ್ಕ ಚೌಡಕ್ಕವರ,  ಗುತ್ಯವ್ವ ಹರಿಜನ, ನಿರ್ಮಲ ಹರಿಜನ. ಗಂಗವ್ವ ಲಮಾಣಿ, ಶಾಂತವ್ವ ಕುರಬರ, ಗಿರಿಜವ್ವ ಶಿದೇನೋರ, ನಾಗವ್ವ ತಳವಾರ, ಮಂಜವ್ವ ಲಮಾಣಿ, ಗಂಗವ್ವ ಲಮಾಣಿ, ಪ್ರೇಮಕ್ಕ ಕೆರೇಮಲ್ಲಾಪೋರ, ಗಿರಿಜವ್ವ ಲಮಾಣಿ, ನೀಲವ್ವ ಬೋಳಹೊಳೆಯಪ್ಪವರ ಮತ್ತಿತರರು ಇಂದಿನ ಸತ್ಯಗ್ರಹದಲ್ಲಿ ಭಾಗವಹಿಸಿದ್ದರು.  


ಸುದ್ದಿ ಓದಿ