ಇಂಡಿ

ಮಹಿಳಾ ದಿನಾಚರಣೆ ಮಹಿಳೆಯ ಬದುಕು ಕಟ್ಟಿಕೊಡುವ ಆಚರಣೆಯಾಗಬೇಕು: ಕುಂಬಾರ

ಮಹಿಳಾ ದಿನಾಚರಣೆ ಮಹಿಳೆಯ ಬದುಕು ಕಟ್ಟಿಕೊಡುವ ಆಚರಣೆಯಾಗಬೇಕು: ಕುಂಬಾರ

ಇಂಡಿ08: ಮೌಲ್ಯಗಳ ಸಾರಥಿಯಾಗಿ, ತನ್ನ ಮಕ್ಕಳನ್ನು ಸಮಾಜದ ಉತ್ತಮ ನಾಗರಿಕರನ್ನಾಗಿ ಮಾಡುವ ಮೂಲಕ ದೇಶಕ್ಕೆ ಉನ್ನತ ಮಾನವ ಸಂಪನ್ಮೂಲ ನೀಡುವ ಮಹಿಳೆಗೆ ಎಷ್ಟು ಹೊಗಳಿದರೂ ಕಡಿಮೆಯೇ ಎಂದು ಸಹಕಾರಿ ಸಂಘಗಳ ಸಹಾಯಕ ನಿಬಂಧಕಿ ಭಾಗ್ಯಶ್ರೀ ಕುಂಬಾರ ಹೇಳಿದರು.    

ಮಂಗಳವಾರ ಪಟ್ಟಣದ ಜಿ.ಆರ್‌. ಗಾಂಧಿ ಕಲಾ,  ವಾಯ್‌.ಎ.ಪಾಟೀಲ ವಾಣಿಜ್ಯ ಹಾಗೂ  ಎಮ್‌.ಎಫ್‌.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  

ಮಹಿಳಾ ದಿನಾಚರಣೆ  ಮಹಿಳೆಯ ಬದುಕು ಕಟ್ಟಿಕೊಡುವ ಆಚರಣೆಯಾಗಬೇಕು. ಇಂದಿನ ಸಮಾಜದಲ್ಲಿ ಪ್ರೋತ್ಸಾಹ,  ಪ್ರೇರಣೆ ಎಲ್ಲವೂ ಇದೆ. ಅದಕ್ಕಾಗಿ ಮೌಲ್ಯಯುತವಾದ ಶಿಕ್ಷಣ ಬೇಕು. ಈಗ ಅದರ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.  

ಎಸ್‌.ಎಸ್‌.ವ್ಹಿ.ವ್ಹಿ ಸಂಘದ ಗೌರವ ಕಾರ್ಯದರ್ಶಿ ಪ್ರಭಾಕರ ಎಸ್‌. ಬಗಲಿ , ಪ್ರಾಚಾರ್ಯ ಎಸ್‌.ಬಿ.ಜಾಧವ ಮಾತನಾಡಿ  ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣುಮಕ್ಕಳು ಪ್ರತಿಯೊಂದು ರಂಗದಲ್ಲಿ ಮುಂದೆ ಇದ್ದಾರೆ. ಹೀಗಾಗಿ ಅವರಿಗೆ ಗೌರವಿಸುವ ನಿಟ್ಟಿನಲ್ಲಿ ಪುರುಷ ಸಮಾಜ ಮನಸ್ಸು ಮಾಡಬೇಕಾಗಿದೆ ಎಂದರು.  

ಸಂಸ್ಥೆಯ ಉಪಾಧ್ಯಕ್ಷ ನೀಲಕಂಠಗೌಡ  ಪಾಟೀಲ, ಲಕ್ಷ್ಮೀ ಬನಸೊಡೆ,  ಶ್ವೇತಾ ಕಾಂತ, ಪ್ರಾಧ್ಯಾಪಕರಾದ ಡಾ.ಸುರೆಂದ್ರ ಕೆ., ಕುಮಾರಿ ನಿಖತ್ ತೆನ್ನಿಹಳ್ಳಿ ಮಾತನಾಡಿದರು.  

ವಿವಿಧ ಸ್ಪರ್ಧೆಗಳಾದ ಹೇರ್ ಸ್ಟೈಲ್, ಮೆಹೇಂದಿ, ಪೇಂಟಿಂಗ್, ಕ್ಲೇ ಮಾಡಲಿಂಗ್ ಮತ್ತು ಆಹಾರ ಮೇಳ ಮುಂತಾದ ಸ್ಪರ್ಧೆಗಳನ್ನು ಎರಿ​‍್ಡಸಿ ಬಹುಮಾನಗಳನ್ನು ವಿತರಿಸಲಾಯಿತು. 

ಡಾ.ಆನಂದ ನಡುವಿನಮನಿ, ಡಾ.ಪಿ.ಕೆ.ರಾಠೋಡ,  ಶ್ರೀಶೈಲ ಕೆ, ಡಾ.ಸಿ.ಎಸ್‌.ಬಿರಾದಾರ, ಡಾ.ಜಯಪ್ರಸಾದ.ಡಿ, ಎಮ್‌.ಆರ್‌.ಕೋಣದೆ, .ಆರ್‌.ಪಿ.ಇಂಗನಾಳ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು. 


ಸುದ್ದಿ ಓದಿ