ಹೂವಿನ ಹಡಗಲಿ

ಮಹಿಳೆಯರಿಂದ ಸಹಕಾರಿ ದಿನಾಚರಣೆ

ಮಹಿಳೆಯರಿಂದ  ಸಹಕಾರಿ ದಿನಾಚರಣೆ

ಹೂವಿನ ಹಡಗಲಿ 02: ಸಮಾಜದ ಮಹಿಳೆಯರ ಸಾಮಾಜಿಕ ಆರ್ಥಿಕ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ ಎಂದು ಗಿರಿಮಲ್ಲಿಗೆ ಮಹಿಳಾ ಸಹಕಾರಿ ನಿಯಮಿತ ಅಧ್ಯಕ್ಷೆ ಸವಿತಾ ಅಂಗಡಿ ಹೇಳಿದರು. 

ಪಟ್ಟಣದ ಗಿರಿಮಲ್ಲಿಗೆ ಮಹಿಳಾ ಸಹಕಾರಿ ನಿಯಮಿತ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಹಕಾರಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಥಿಕ ಸ್ವಾವಲಂಬನೆಯ ಪಾಠ ಮಹಿಳೆಯರಲ್ಲಿ ವಿಶ್ವಾಸಾರ್ಹತೆ ಮೂಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಸಾಲ ನೀಡುವುದು, ಹೊಸ ಠೇವಣಿ ಸಂಗ್ರಹ ಯೋಜನೆ, ಸಾಲ ಮರುಪಾವತಿ ಮೊದಲಾದ ವಿಷಯಗಳ ಬಗ್ಗೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. ಕರಕುಶಲ ಕಲೆಗಳು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಕೆಲಸ ನಿರ್ವಹಿಸಲು ಸಹಕಾರಿ ಪ್ರೇರಣೆ ಆಗಬೇಕು ಎಂದು ಅಭಿಪ್ರಾಯಪಟ್ಟರು. ಉಪಾಧ್ಯಕ್ಷೆ ನರ್ಮದಾ ಯಲಗಚ್ಚಿನ ನಿರ್ದೇಶಕರಾದ ನಾಗರತ್ನ ಕುಂಚೂರು, ಸೌಮ್ಯ ತುರಕಾಣಿ, ಮಂಗಳಾ ವಾಲಿ, ವಿಜಯ ಕಡ್ಲಿ, ಲಲಿತಾ ಕೋರಿ, ಭುವನೇಶ್ವರಿ ಎ, ಸವಿತಾ ಕುಂಬಾರಿ, ಪಿಗ್ಮಿ ಕಲೆಕ್ಟರ್ ವೀರನಗೌಡ, ವ್ಯವಸ್ಥಾಪಕಿ ಎಂ ಮಂಗಳಾ ಹಾಜರಿದ್ದರು. 


ಸುದ್ದಿ ಓದಿ