ಹೂವಿನ ಹಡಗಲಿ

ಚನ್ನಬಸವ ಶ್ರೀ ಸ್ಮರಣೋತ್ಸವ: ಪ್ರಶಸ್ತಿ ಪ್ರದಾನವೀರಶೈವ ಮಠಗಳು ಸಮಾಜಮುಖಿ ಕೆಲಸ

ಚನ್ನಬಸವ ಶ್ರೀ ಸ್ಮರಣೋತ್ಸವ: ಪ್ರಶಸ್ತಿ ಪ್ರದಾನವೀರಶೈವ ಮಠಗಳು  ಸಮಾಜಮುಖಿ ಕೆಲಸ


ಲೋಕದರ್ಶನ ವರದಿ 

ಹೂವಿನಹಡಗಲಿ  19: ವೀರಶೈವ ಮಠಗಳು ಧಾರ್ಮಿಕ ಕೈಂಕರ್ಯಗಳಿಗೆ ಸೀಮಿತವಾಗದೇ ನಿರಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿವೆ ಎಂದು ನೀಲಗುಂದ ಮಠದ ಚನ್ನಬಸವ ಶಿವಯೋಗಿ ಹೇಳಿದರು.ಇಲ್ಲಿನ ಹಿರೇಮಲ್ಲನಕೆರೆ ಮಠದಲ್ಲಿ ಈಚೆಗೆ ಹಾನಗಲ್ಲ ಕುಮಾರ ಶಿವಯೋಗಿಗಳ 159ನೇ ಜಯಂತ್ಯುತ್ಸವ ಹಾಗೂ ಲಿಂ.ಚನ್ನಬಸವ ಸ್ವಾಮೀಜಿ 39ನೇ ಸಂಸ್ಮರಣೋತ್ಸವ ನಡೆಯಿತು.ಬೆಳಿಗ್ಗೆ ಮಠದಲ್ಲಿನ ಕರ್ತೃ ಗದ್ದುಗೆಗೆ ಅಭಿಷೇಕ ನೆರವೇರಿಸಲಾಯಿತು.ಧಾರ್ಮಿಕ ಕಾರ್ಯ ಕ್ರಮದಲ್ಲಿ ಮಾತನಾಡಿದರು.ಎಲ್ಲ ವರ್ಗದ ಜನರಿಗೆ ಅನ್ನ, ಅಕ್ಷರ, ಆಶ್ರಯ, ಅರಿವು ನೀಡಿ ಜನರಬದುಕನ್ನು ಹಸನಗೊಳಿಸುವ ಕೆಲಸ ಮಾಡುತ್ತಿವೆ’ ಎಂದು ಹೇಳಿದರು. ಕೋಟೆ ವೀರಭದ್ರೇಶ್ವರ ದೇವಸ್ಥಾನದಿಂದ ಮಠದವರೆಗೆ ಚನ್ನಬಸವ ಸ್ವಾಮೀಜಿ ಚಿತ್ರದ ಮೆರವಣಿಗೆ ನಡೆಯಿತು.ಮಠದಲ್ಲಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿಗೆ’ಚನ್ನಬಸವಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.ಲಿಂಗನಾಯಕನಹಳ್ಳಿ ಮಠದ ಚನ್ನವೀರ ಸ್ವಾಮೀಜಿ, ಉತ್ತಂಗಿಯ ಸೋಮಶಂಕರ ಸ್ವಾಮೀಜಿ, ಸೋಗಿ ಪುವರ್ಗಮಠದ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀಮಠದ ಚನ್ನಬಸವ ಸ್ವಾಮೀಜಿ, ಹೊಳಲಿನ ಮಲ್ಲಿಕಾರ್ಜುನ ದೇವರು ಸಾನ್ನಿಧ್ಯ ವಹಿಸಿದ್ದರು.ವೀರಶೈವ ಮಹಾಸಭಾ ಅಧ್ಯಕ್ಷ ಸಿ.ಕೆ.ಎಂ. ಬಸವಲಿಂಗಸ್ವಾಮಿ, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಅಟವಾಳಗಿ ಕೊಟ್ರೇಶ್, ವಿ.ಸಿ.ಪಾಟೀಲ್, ಪಿ.ಟಿ.ಭರತ್, ಬಸೆಟ್ಟಿ ಸಿದ್ದೇಶ, ಹಕ್ಕಂಡಿ ಶಿವನಾಗಪ್ಪ ಇದ್ದರು. 


ಸುದ್ದಿ ಓದಿ