ಮಹಿಳಾ ಜಾಗೃತಿ ಕಾರ್ಯಗಾರ ಮಹಿಳಾ ಆಂತರಿಕ ಸಮಸ್ಯೆಗಳಿಗೆ ಮಡಿವಂತಿಕೆ ಬೇಡ: ಡಾ. ಸುಗುಣಾ
ರಾಣೇಬೆನ್ನೂರು 18: ಸ್ವಾಸ್ಥ ಮನಸ್ಸು ಇದ್ದರೆ ಮಾತ್ರ ಸ್ವಾಸ್ಥ ಆರೋಗ್ಯ ಹೊಂದಲು ಸಾಧ್ಯವಾಗುವುದು ಇವೆರಡನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದರೆ ಸ್ತ್ರೀ ಸದಾಕಾಲ ಆರೋಗ್ಯವಂತಳಾಗಿರಬೇಕು ಎಂದು ನಗರದ ಖಾತ್ಯ ವೈದ್ಯ ಡಾ.ಸುಗುಣಾ ಎಲ್. ಚಳಗೇರಿ ಹೇಳಿದರು. ಅವರು ಸೋಮವಾರ ಇಲ್ಲಿನ ಎಸ್. ಜೆ. ಎಂ. ವಿ, ಕಾಲೇಜು ಶಿಮುಶ ಸಭಾಭವನದಲ್ಲಿ ಇನ್ನರ್ ವ್ಹಿಲ್ ಮತ್ತು ರೋಟರಿ ಸೇವಾ ಸಂಸ್ಥೆ ಹಾಗೂ ಕಾಲೇಜು ಸಹಯೋಗದಲ್ಲಿ ನಡೆದ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತೀಯ ಮಹಿಳೆ. ಈ ದೇಶದ ಸಂಸ್ಕೃತಿಯ ರಾಯಭಾರಿ. ತಾಯಿಯಾಗಿ, ಅಕ್ಕ ತಂಗಿಯಾಗಿ, ಮಗಳಾಗಿ ಗಂಡನಿಗೆ ಹೆಂಡತಿಯಾಗಿ ಇಡೀ ಕುಟುಂಬದ ಹೊಣೆ ಹೊತ್ತು ದುಡಿಯುವವಳಾಗಿದ್ದಾಳೆ. ಅವಳು ಇಲ್ಲದೆ ಹೋದರೆ ಎಲ್ಲವೂಸ್ಥಗಿತ.ಇಂತಹ ಮಹಿಳೆ ಕುಟುಂಬದ ಕಣ್ಣಾಗಿದ್ದಾಳೆ. ಎಂದರು. ಇತಿಹಾಸದಿಂದಲೂ ಸ್ತ್ರೀ ಕುಲಕ್ಕೆ ನೂರೆಂಟು ಆರೋಗ್ಯ ಸಮಸ್ಯೆಗಳು ಇವೆ ಎಲ್ಲ ಸಮಸ್ಯೆಗಳಿಗೂ ಅ ಸ್ವಚ್ಛತೆ ಮತ್ತು ಅ ನೈರ್ಮಲ್ಯ. ಮುಖ್ಯ ಕಾರಣ. ಎಂದು ವಿಶ್ಲೇಷಿಸಿದ ಡಾ. ಸುಗುಣಾ ಚಳಗೇರಿ ಅವರು ವಿವಾಹ ಪೂರ್ವ ಮತ್ತು ವಿವಾಹ ನಂತರ ಬರುವ ಯಾವುದೇ ಆಂತರಿಕ ಕಾಯಿಲೆಗಳಿರಲಿ ಮಡಿವಂತಿಕೆ ತೋರದೆ ತಕ್ಷಣ ವೈದ್ಯರೊಂದಿಗೆ ಸಮಾಲೋಚಿಸಿ ಪರಿಹಾರಕಂಡುಕೊಳ್ಳಲು ಮುಂದಾಗಬೇಕು ಎಂದು ಮಹಿಳಾ ಸಮುದಾಯಕ್ಕೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಇನ್ನರ್ ವ್ಹಿಲ್ ಅಧ್ಯಕ್ಷೆ ಶ್ರೀಮತಿ ಶೋಭಾ ಸು. ಜಂಬಗಿ ಅವರು, ಇನ್ನರ್ ವ್ಹಿಲ್ ಸಂಸ್ಥೆ, ರೋಟರಿ ಸಂಸ್ಥೆಯ ಸರ್ವ ಸದಸ್ಯರ ಸಹಕಾರದೊಂದಿಗೆ ವರ್ಷದ ಅಧಿಕಾರದ ಅವಧಿಯಲ್ಲಿ ಮಹಿಳಾ ಆರೋಗ್ಯ ಜಾಗೃತಿ ಕುರಿತಂತೆ ವಿವಿಧ ಹಂತದಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು ಎಂದರು ಕಾರ್ಯಗಾರ ಉದ್ಘಾಟಿಸಿದ ಕಾಲೇಜು ಪ್ರಾಚಾರ್ಯ ಡಾ : ಆರ್ ವಿ. ಹೆಗಡಾಳ, ಕುಟುಂಬದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಕುರಿತಂತೆ ಮಾತನಾಡಿದರು. ವೇದಿಕೆಯಲ್ಲಿ ರೋಟರಿ ಅಧ್ಯಕ್ಷ ಸುಜಿತ್ ಚ. ಜಂಬಿಗಿ ಇನ್ನರ್ ವ್ಹಿಲ್ ಕಾರ್ಯದಶರ್ಿಗಳಾದ ಕವಿತಾ ಬದಾಮಿ, ಪುಟ್ಟರಾಜ ಅಂಗಡಿ, ವಾಸುದೇವ ಗುಪ್ತಾ, ಶಿವಯೋಗಿ ಅಂಗಡಿ, ಡಾ .ನೀತಾ ಮಿರ್ಜಿ ಸೇರಿದಂತೆ ರೋಟರಿ ಮತ್ತು ಇನ್ನರ್ ವ್ಹಿಲ್ ಸೇವಾ ಸಂಸ್ಥೆಯ ಪದಾಧಿಕಾರಿಗಳು ಪಿ. ಯು ಕಾಲೇಜು ಪ್ರಾಚಾರ್ಯರು, ಉಪನ್ಯಾಸಕರು ಸಿಬ್ಬಂದಿ ಮತ್ತು ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು