ಮಹಿಳಾ ಸಂಘದ ಎರಡನೇ ವಾರ್ಷಿಕೋತ್ಸವ ಸಮಾರಂಭ
ಲೋಕದರ್ಶನ ವರದಿ
ಜಮಖಂಡಿ 06: ಮಹಿಳೆಯರು ಸ್ವಾಲಂಬಿಗಳಾಗಿ ಪುರುಷರಿಗೆ ಸಮಾನವಾಗಿ ಮುಂದೆ ಸಾಗುತ್ತಿದ್ದಾರೆ. ಮಹಿಳೆಯರು ಸಂಘಟಿರಾದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಆನಂದ ನ್ಯಾಮಗೌಡ ಕರೆ ನೀಡಿದರು.
ಇಲ್ಲಿನ ಕಾಡಸಿದ್ದೇಶ್ವರ ಮಹಿಳಾ ಸಂಘದ ಎರಡನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಂಘ ಸಂಸ್ಥೆಗಳಿಂದ ಮಹಿಳೆಯರು ಅನೇಕ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಜೀವನ ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ. ಉದ್ಯೋಗ ಮಾಡಲು ಮಹಿಳೆಯರಿಗೆ ಸಾಕಷ್ಟು ಅವಕಾಶಗಳಿದ್ದು. ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮೆಟ್ಟಿಲನ್ನು ಏರುತ್ತಿದ್ದಾರೆ. ಮಹಿಳಾ ಸಂಘಗಳನ್ನು ಕಟ್ಟುವುದು ಬಹಳ ಒಳ್ಳೆಯದು, ಸಂಘ ಬೆಳಸಿಕೊಂಡು ಮುಂದೆ ಸಾಗುವದು ಬಹಳ ಕಷ್ಟ. ಆದರೆ ಈ ಸಂಘವನ್ನು ಬೆಳಸುತ್ತಿರುವದು ಶ್ಲಾಘನೀಯ ಎಂದರು.
ಸೌಭಾಗ್ಯ ಅರಕೇರಿ ಮಾತನಾಡಿ, ಈ ಸಂಘವು ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದೆ. ಮಹಿಳಾ ಸಂಘದಿಂದ ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಗೃಹ ಉದ್ಯಮ ಮಾಡುವದು. ಸರಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವದು, ಗಾಣಿಗ ಕ್ಷೇಮಾಭಿವೃಧ್ಧಿ ನಿಗಮದಿಂದ ಅನೇಕ ಸವಲತ್ತುಗಳನ್ನು ಪಡೆಯುವ ಉದ್ದೇಶ ಹೊಂದಿದ್ದೇವೆ. ನಾವೆಲ್ಲ ಮಹಿಳೆಯರು ಆರ್ಥಿಕ ಸಬಲತೆ ಹೊಂದಿ ಮನೆಗೂ, ಸಮಾಜಕ್ಕೂ ಮಾದರಿಯಾಗುವ ಉದ್ದೇಶ ಈ ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಸುಮಿತ್ರಾ ನ್ಯಾಮಗೌಡ, ಸೀತಾ ನ್ಯಾಮಗೌಡ, ಕಮಲಾ ಬರ್ಜಗಿ, ಕಲಾವತಿ ದಡ್ಡಿಮನಿ, ಸಾಯವ್ವಾ ತುಪ್ಪದ, ತಂಗೆವ್ವಾ ತುಪ್ಪದ, ಚಂದ್ರಕಲಾ ನ್ಯಾಮಗೌಡ, ಚಂದ್ರವ್ವಾ ಗವರೋಜಿ, ನೀಲವ್ವ ನ್ಯಾಮಗೌಡ, ವಿಮಲಾ ಹೇಸಮನಿ, ಮಾದೇವಿ ಅರಕೇರಿ, ಕಮಲಾ ಘಟ್ನಟ್ಟಿ, ಚಂದ್ರವ್ವಾ ತೇಲಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಸಂಘದ ಅಧ್ಯಕ್ಷ ರೇಖಾ ತೆಲಬಕ್ಕನವರ ಪ್ರಾಸ್ತಾವಿಕ ಮಾತನಾಡಿದರು.ಆಶಾ ಕರ್ಜಗಿ ನಿರೂಪಿಸಿದರು, ಶೋಭಾ ಕರ್ಜಗಿ ಸ್ವಾಗತಿಸಿದರು. ಶ್ವೇತಾ ಅರಕೇರಿ ವಂದಿಸಿದರು.