ಮಹಿಳೆ ಸ್ವಾವಲಂಬಿಯಾಗಿ ಬಾಳಬೇಕು: ಸಾಹಿತಿ ಸರೋಜಿನಿ
ಇಂಡಿ: ಮಹಿಳೆಯರು ಜಾಗೃತರಾಗಬೇಕು. ತಮ್ಮ ಹಕ್ಕುಗಳನ್ನು ವಿಮೋಚನೆಯಿಂದ ಬಳಸಲು ತಿಳಿದುಕೊಂಡು ಮಹಿಳೆ ಸ್ವಾವಲಂಬಿಯಾಗಿ ಬಾಳಬೇಕು ಆಗ ಮಹಿಳಾ ದಿನಾಚರಣೆ ಆಚರಣೆ ಮಾಡಿದಕ್ಕೂ ಸಾರ್ಥಕವಾಗುತ್ತದೆ ಎಂದು ಶಿಕ್ಷಕಿ, ಸಾಹಿತಿ ಸರೋಜಿನಿ ಮಾವಿನ ಮರ (ಝಳಕಿ) ಹೇಳಿದರು.
ತಾಲೂಕಿನ ಚಿಕ್ಕಬೇವನೂರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಧಾನ್ ಫೌಂಡೇಶನ್ ಸಹಯೋಗದಲ್ಲಿ ಇತ್ತೀಚೆಗೆ ಆಚರಿಸಲಾಯಿತು.
ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವುದರೊಂದಿಗೆ ಪ್ರಶಸ್ತಿ ವಿತರಣಾ ಮಾಡಿದ ಧಾನ್ ಫೌಂಡೇಶನ್ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಪ್ರಭಾರಿಮುಖ್ಯ ಗುರುಗಳಾದ ಬಿ ಎನ್ ಜಮಾದಾರ ಮಾತನಾಡಿದರು.
ಮಹಿಳಾ ದಿನಾಚರಣೆ ಮತ್ತು ಪ್ರಬಂಧ ಕಾರ್ಯಕ್ರಮದ ಕುರಿತು ವಿದ್ಯಾರ್ಥಿನಿ ಅಶ್ವಿನಿ ಬಸನಾಳ ಅನಿಸಿಕೆ ವ್ಯಕ್ತಪಡಿಸಿದಳು.
ಶಾಲೆಯ ಹಿರಿಯ ಗುರುಮಾತೆಯರಾದ ಎನ್ ಬಿ ದೇಶ್ಮುಖ್ ಹೆಣ್ಣುಮಕ್ಕಳ ಸಾಧನೆ ಗಾರ್ಗಿ ಸೀತೆ ಮುಂತಾದ ಅನೇಕ ಮಹಿಳಾ ಸಾಧಕಿಯರನ್ನು ಸ್ಮರಿಸುತ್ತ ಮಾತನಾಡಿದರು.
ಗ್ರಾಮ ಪಂಚಾಯಿತಿ ವತಿಯಿಂದ ಸರೋಜಿನಿ ಮಾವಿನಮರ ಶಾಲೆಗೆ ವರ್ಗಾವಣೆಯಾಗಿ ಬಂದ ಪ್ರಯುಕ್ತ ಸ್ವಾಗತಿಸಿ ಸನ್ಮಾನಿಸಲಾಯಿತು .
ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷ ಗಂಗಾಧರ ಶಿವಣ್ಣ ಬಿರಾದಾರ ,ಚಂದು ಕಟ್ಟಿಮನಿ, ಅಂಬಣ್ಣ ಸಂಗಪ್ಪ ಬಗಲಿ ಮುಂತಾದ ಪಂಚಾಯತ್ ಸದಸ್ಯರು, ಶಾಲಾ ಮೇಲುಸ್ತುವಾರಿ ಸದಸ್ಯರು , ಗ್ರಾಮಸ್ಥರು, ಪಾಲಕರು, ಅಂಗನವಾಡಿ ಕಾರ್ಯಕರ್ತೆಯರು ,ಅಡುಗೆ ಸಿಬ್ಬಂದಿ ವರ್ಗ , ಶಾಲೆಯ ಹಿರಿಯ ಶಿಕ್ಷಕ ಎ ಜಿ ಆನೆಗುಂದಿ , ಧಾನ್ ಫೌಂಡೇಶನ್ ಸಿಬ್ಬಂದಿ ವರ್ಗದ ಮುಖ್ಯಸ್ಥ ರಾಣಿ ಗಿರಿ, ಶ್ರುತಿ ಇಂಗಳಗಿ ಗೀತಾ ಹಿರೇಮಠ್ ಈರಕ್ಕ ಸಕ್ರಿ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥನೆ ಮತ್ತು ಸ್ವಾಗತ ಗೀತೆ ಹಾಡಿದರು. ಬಿಎನ್ ಜಮಾದಾರ್ ನಿರೂಪಿಸಿದರು.