ಕಾಗವಾಡ

ಶಿಕ್ಷಣದಲ್ಲಿ ಸಾಧನೆಗೆ ಇಚ್ಛಾಶಕ್ತಿ ಅಗತ್ಯ: ಎಂ.ರಾಮಚಂದ್ರ ಗೌಡಾ

ಶಿಕ್ಷಣದಲ್ಲಿ ಸಾಧನೆಗೆ ಇಚ್ಛಾಶಕ್ತಿ ಅಗತ್ಯ: ಎಂ.ರಾಮಚಂದ್ರ ಗೌಡಾ

ಕಾಗವಾಡ 18: ಶಿಕ್ಷಣದಲ್ಲಿ ಸಾಧನೆ ಮಾಡಲು ಹಣದ ಅವಶ್ಯಕತೆ ಇರುವದಿಲ್ಲಾ. ವಿದ್ಯಾರ್ಥಿಗಳು ಆತ್ಮಶಕ್ತಿ, ಇಚ್ಛಾಶಕ್ತಿ, ವಿದ್ಯಾಶಕ್ತಿ ಈ ಮೂರು ಗುರಿಗಳನ್ನು ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ಯಶ ನಿಮ್ಮ ಹಿಂದೆ ಬೆನ್ನು ಹತ್ತಿ ಬರುತ್ತದೆ. ನೀವು ಯಶಸ್ಸಿನ ಬೆನ್ನು ಹತ್ತಿ ಸಮಯ ವ್ಯರ್ಥ ಮಾಡಿಬೇಡಿರಿ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಎಂ.ರಾಮಚಂದ್ರ ಗೌಡಾ ವಿದ್ಯಾರ್ಥಗಳಿಗೆ ಕಿವಿಮಾತು ಹೇಳಿದರು. 

ಗುರುವಾರ ದಿ. 18ರಂದು ಉಗಾರದ ವಿಹಾರ ಸಭಾಭವನದಲ್ಲಿ ಉಗಾರದ ಡಾ. ಶಿರಗಾಂವಕರ ಶಿಕ್ಷಣ ಸಂಸ್ಥೆವತಿಯಿಂದ ಉಗಾರದ ವಿದ್ಯಾರ್ಥಿನಿ ವಿದ್ಯಾ ಗುಡೋಡಗಿ ಇವಳು 14 ವಿಷಯಗಳಲ್ಲಿ ನೂರಕ್ಕೆ ನೂರರಷ್ಟು ಅಂಕ ಪಡೆದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದರಿಂದ ಉಗಾರದ ಶಿಕ್ಷಣ ಸಂಸ್ಥೆವತಿಯಿಂದ ಒಂದು ಲಕ್ಷ ರೂ. ಚೆಕ, ಸನ್ಮಾನ ಪತ್ರ ನೀಡಿ ಸನ್ಮಾನಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುಲಪತಿ ಎಂ.ರಾಮಚಂದ್ರ ಗೌಡಾ ಇವರು ವಿದ್ಯಾರ್ಥಿನಿ ವಿದ್ಯಾ ಗುಡೋಡಗಿ ಹಾಗು ಅವರ ತಂದೆ ತಾಯಿಗೆ ಸನ್ಮಾನಿಸಿ ಮಾತನಾಡಿದರು. 

ವಿಜಯಪುರದ “ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ” ರಜಿಸ್ಟ್ರಾರ್ ಬಿ.ಎಸ್‌.ನಾವಿ ಮಾತನಾಡಿ ವಿದ್ಯಾ ಗುಡೋಡಗಿ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಮಾದರಿಯಾಗಿದ್ದಾಳೆ, ಇವಳ ತಂದೆ ತಾಯಿ  ಮನೆಯಲ್ಲಿ ನೀಡಿರುವ ಮಾರ್ಗದರ್ಶನದಿಂದ ಯಶ ಪಡೆದುಕೊಂಡಿದ್ದಾಳೆ. ನಿಮ್ಮಲ್ಲಿ ಶಿಸ್ತ-ಸೈಯಮ ಒಗ್ಗೂಡಿಸಿ ಮನಸ್ಸಿನಲ್ಲಿ ಒಂದು ಗುರಿ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಿದರೆ ನಿಮ್ಮ ಭಾಗಲಿಗೆ ಯಶ ಬರುತ್ತದೆ. ಯಶದ ಬೆನ್ನು ನೀವು ಹತ್ತಿಬೇಡಿರಿ, ನಿಮ್ಮ ಬೆನ್ನಿಗೆ ಯಶ ಬರುತ್ತದೆ ಎಂದು ಕಿವಿಮಾತು ಹೇಳಿದರು. 

ಡಾ. ಶಿರಗಾಂವಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದನ್ ಶಿರಗಾಂವಕರ ಮಾತನಾಡಿ ವಿದ್ಯಾ ಗುಡೋಡಗಿ ಕಡು ಬಡವ ಮನೆತನದಲ್ಲಿ ಜನಿಸಿದ್ದು ಒಳ್ಳೆಯ ನಿಷ್ಠೆಯಿಂದ ಉಗಾರದಲ್ಲಿ ತನ್ನ ಪ್ರಾಥಮಿಕ, ಮಾಧ್ಯಮಿಕ, ಮಾಹವಿದ್ಯಾಲಯದವರೆಗೆ ಶಿಕ್ಷಣ ಪೂರ್ಣಗೊಳಿಸಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ. ಇದೇ ರೀತಿ ಉಗಾರದ ಹೆಸರು ಉನ್ನತಕ್ಕೆ ತೆಗೆದುಕೊಂಡು ಹೋಗಲಿ ಎಂದು ಶುಭ ಹಾರೈಸಿದೂರು. 

ಮಹಾವಿದ್ಯಾಲಯದ ಪ್ರಾಚಾರ್ಯ ಮೇಘನಾ ಕುಲಕರ್ಣಿ ಇವರು ವಿದ್ಯಾಳ ಯಶಸ್ಸಿನ ಬಗ್ಗೆ ಪರಿಚಯಿಸಿದರು. 

ಉಗಾರ ಸಕ್ಕರೆ ಕಾರ್ಖಾನೆಯ ಉದ್ಯೆಮಿ ಪ್ರಫುಲ ಶಿರಗಾಂವಕರ, ಸಂಚಾಲಕ ದೀಪಚಂದ ಶಹಾ, ಸ್ಮಿತಾತಾಯಿ ಶಿರಗಾಂವಕರ, ರಾಧಿಕಾತಾಯಿ ಶಿರಗಾಂವಕರ, ಪ್ರಾಧ್ಯಾಪಕರಾದ ಬಸವರಾಜ ಕಾರ್ಚಿ, ಎಂ.ಜಿ.ಕುಲಕರ್ಣಿ, ಪಿ.ಬಿ.ಕುಲಕರ್ಣಿ, ಎಸ್‌.ಜಿ.ಶ್ರೌತಿ, ರಶ್ಮಿ ಹಳಾಜ್, ಇಮ್ತಿಯಾಜ್ ಮುಲಾ, ಲಕ್ಷ್ಮಣ್ ರೋಹಿದಾಸ್, ಕಾರ್ಖಾನೆ ಎಲ್ಲಾ ಅಧಿಕಾರಿ ವರ್ಗದವರು, ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು. 


ಸುದ್ದಿ ಓದಿ