ಹೊರಗುತ್ತಿಗೆ ಒಳಗುತ್ತಿಗೆ ದಿನಗೂಲಿ ನೌಕರರಿಗೆ ಮುಕ್ತಿ ಎಂದು?: ಬಸವರಾಜ ಕೊಂಗಿ
ರಾಣೇಬೆನ್ನೂರು : ಜು 9- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಮತ್ತು ಒಳಗುತ್ತಿಗೆ ನೌಕರರಾಗಿ ಕಳೆದ ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರ ಸರ್ಕಾರಿ ಜೇತಕ್ಕೆ ಮುಖ್ಯಮಂತ್ರಿಗಳು ಯಾವಾಗ ಮುಕ್ತಿ ನೀಡುವರು ಎಂದು ಕಾದು ನೋಡಬೇಕಾಗಿದೆ ಎಂದು ಹಾವೇರಿ ಜಿಲ್ಲಾ ಹೊರಗುತ್ತಿಗೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ, ಬಸವರಾಜ ಕೊಂಗಿಯವರ, ರಾಜ್ಯ ಸರಕಾರದ ವಿಳಂಬ ಧೋರಣೆ ನೀತಿ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳಿಗೆ, ಬರೆದ ಸುದೀರ್ಘ ಪತ್ರವನ್ನು ರವಾನಿಸಿದ ಅವರು, ಕೂಲಿ ಕಾರ್ಮಿಕರು, ದಿನಗೂಲಿ ನೌಕರರು,, ಜೀತ ಪದ್ಧತಿಯಿಂದ ಬರಬರಬೇಕೆಂದು, ಪುಕಾನು ಪುಂಕವಾಗಿ, ಪದೇಪದೇ ಹೇಳುವ ಸರ್ಕಾರ ಈ ದಿನಗೂಲಿ ನೌಕರರಿಗೆ, ಸರ್ಕಾರಿ ಜೇತಕ್ಕೆ ಗುತ್ತಿಗೆ ಪದ್ಧತಿ ರದ್ದತಿ ಮಾಡಲು ಮುಂದಾಗುವರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ವಿವಿಧ ಇಲಾಖೆಗಳಲ್ಲಿ ದಿನಗೂಲಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇದು ರಾಜ್ಯಪಾಲರ ರಾಜಭವನ, ಮುಖ್ಯಮಂತ್ರಿಗಳ ಮತ್ತು ಮಂತ್ರಿಗಳ ನಿವಾಸಗಳು ಹೊರತಾಗಿಲ್ಲ. ಎಂದು ಅಂಕಿ ಅಂಶಗಳ ಸಮೇತ ಬರೆದಿರುವ ಪತ್ರದಲ್ಲಿ ವಿವರಿಸಿರುವ ಕೊಂಗಿಯವರು ಕೂಡಲೇ, ಸರಕಾರದ ಮುಖ್ಯಮಂತ್ರಿಗಳು ಜೀತ ಪದ್ಧತಿಯಿಂದ ಮುಕ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಇರುವ ದಿನಗೂಲಿ ನೌಕರರು ಮತ್ತು ಗುತ್ತಿಗೆ ಆಧಾರಿತರು ಅತಿ ಕಡಿಮೆ ವೇತನ ಪಡೆದು, ಒಂದೇ ಹೊತ್ತು ಊಟ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರದಲ್ಲಿ ಕೆಲವು ದಿನಗೊಲಿ ನೌಕರರು ಸರಕಾರದ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಸರಕಾರದ ಯಾವುದೇ ಸೌಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲದಂತಾಗಿದೆ ಎಂದು ವಿಷಾದಿಸಿದ್ದಾರೆ. ಸರ್ಕಾರ ಈ ಕೂಡಲೇ ಇವರುಗಳನ್ನು ಇತರೆ ಖಾಯಂ ನೌಕರರಂತೆ ಇತರೆ ಸವಲತ್ತುಗಳನ್ನು ದೊರಕಿಸಲು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯವು 2016ರಲ್ಲಿ ನೀಡಿದ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಆದೇಶ ನೀಡಿ 7 ವರ್ಷಗಳು ಗತಿಸಿದರೂ, ಇಲ್ಲಿವರೆಗೂ ಆದೇಶ ಜಾರಿಗೊಳಿಸಿರುವುದಿಲ್ಲ ಎಂದು ಕಿಡಿ ಕಾರಿದ್ದಾರೆ. ಜಿಲ್ಲೆಯಲ್ಲಿ ಹೂರ ಸಂಪನ್ಮೂಲ ಗುತ್ತಿಗೆ ನೌಕರರು ಹತ್ತು ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಕುರಿತಂತೆ ಹಲವಾರು ಬಾರಿ ಮನವಿ ಸಲ್ಲಿಸಿದರು, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಇಲಾಖೆ ಅಧಿಕಾರಿಗಳಾಗಲಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಬಸವರಾಜ್, ಸರಕಾರದ ನೀತಿಯನ್ನು ಖಂಡಿಸಿದ್ದಾರೆ.
ಹಾವೇರಿ ಜಿಲ್ಲೆಯಲ್ಲಿ ಅನೇಕ ಇಲಾಖೆಗಳಲ್ಲಿ ಕಳೆದ 12 ವರ್ಷಗಳಿಂದ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ. ಬಡವರೇ ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು, ಅಂತಹ ನೌಕರರನ್ನು ಪರಿಗಣಿಸಿ ಸರಕಾರದ ಎಲ್ಲಾ ಸೌಲತ್ತುಗಳನ್ನು ದೊರಕಿಸಲು ಖಾಯಂ ನೌಕರರೆಂದು ಪರಿಗಣಿಸಲು ಮುಂದಾಗಬೇಕು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದ್ದಾರೆ. ಸರಕಾರದ ಮುಖ್ಯಮಂತ್ರಿಗಳು ಈ ಕೂಡಲೇ ಸಂಘಟನೆಯ ಮನವಿಯನ್ನು, ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಮುಂದಿನ ತಿಂಗಳು ಆಗಸ್ಟ್ 15 ರ ಒಳಗಾಗಿ ವಿಷಯ ಜರೂರು ಮತ್ತು ಗಂಭೀರವೆಂದು ಪರಿಗಣಿಸಿ, ಸ್ವಾತಂತ್ರ್ಯೋತ್ಸವ ದಿನಾಚರಣೆ ಮುನ್ನವೇ, ಜೀತ ಮೊಕ್ತರನ್ನಾಗಿ, ಮಾಡಲು ಕ್ರಮ ಕೈಗೊಳ್ಳಬೇಕು ಜೀತ ಮುಕ್ತ ರಾಜ್ಯವೆಂದು ಘೋಷಿಸಬೇಕು ಎಂದು ಬಸವರಾಜ ಅವರು ರವಾನಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ