ಗೋಕಾಕ್

ಸಾಧನೆ ಸದ್ಬಳಕೆಯಾದಾಗ ಸಾರ್ಥಕತೆ ಪಡೆಯುತ್ತದೆ: ಚೌರಿ

ಸಾಧನೆ ಸದ್ಬಳಕೆಯಾದಾಗ ಸಾರ್ಥಕತೆ ಪಡೆಯುತ್ತದೆ: ಚೌರಿ

ಗೋಕಾಕ 24: ಕಲೆಯ ಸೇವೆ ನಿರಂತರವಾದುದು, ಅದರೊಳಗಿನ ಸಾಧನೆಗಳು ಸಾರ್ಥಕತೆಯಾಗಬೇಕಾದರೆ ಅದು ಸದ್ಬಳಕೆ ಆಗಬೇಕೆಂದು ಹಿರಿಯ ಸಾಹಿತಿ ವಿಶ್ವದಾಖಲೆಯ ಮಕ್ಕಳ ಕಥೆಗಾರ ಡಾ.ಲಕ್ಷ್ಮಣ ಚೌರಿ ಹೇಳಿದರು. 

ಅವರು ರವಿವಾರದಂದು ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಗೋಕಾವಿ ನಾಡಿನ ಹಿರಿಯ ಜಾನಪದ ಸಾಹಿತಿ ಹಾಗೂ ರಂಗಕರ್ಮಿ ಈಶ್ವರಚಂದ್ರ ಎಸ್‌.ಬೆಟಗೇರಿ ಅವರ ಸಾಧನೆಯ ಅವಲೋಕನ ಕಂಡು ಸಾರ್ಥಕ ಸಮಾರಂಭ ಮತ್ತು ಅಭಿನಂದನ ಗ್ರಂಥ ತರುವ ಕುರಿತು ಕರೆದ ಪೂರ್ವಭಾವಿ ಸಮಾಲೋಚನ ಸಭೆಯ ಅಧ್ಯಕ್ಷತೆ  ವಹಿಸಿ ಮಾತನಾಡಿದರು. 

ಕರ್ನಾಟಕ ಲಲಿತಕಲಾ ಅಕಾಡಮಿ ಸದಸ್ಯ ಹಾಗೂ ಸಾಹಿತಿ ಪ್ರಾ ಜಯಾನಂದ ಮಾದರ ಈಶ್ವರಚಂದ್ರ ಅವರು ಇಪ್ಪತ್ತಕ್ಕೂ ಅಧಿಕ ಜಾನಪದ ಬಯಲಾಟ ಹಸ್ತಪ್ರತಿಗಳನ್ನು ಸಂಶೋಧಿಸಿ, ಸಂಗ್ರಹಿಸಿ ಪ್ರಕಟಣೆಯನ್ನೂ ಸಹ ಮಾಡಿದ್ದು, ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡುವ ಮೂಲಕ ಕನ್ನಡದ ನೆಲದ ಜಾನಪದ ಕಲೆಯನ್ನು ಜೀವಂತವಿರಿಸಿದ ಅಪ್ಪಟ ದೇಶೀಯ  ಕಲಾವಿದರಾಗಿದ್ದಾರೆ ಎಂದು ಹೇಳಿದರು.  

ಅಭಿನಂದನ ಸಭೆಯಲ್ಲಿ ಸಾಧಕ ಕಲಾವಿದ ಕಲಾ ಪ್ರದರ್ಶನವೂ ಜರುಗಲಿ ಎಂದು ಜಾನಪದ ತಜ್ಞ ಡಾ.ನಿಂಗಣ್ಣಾ ಸಣ್ಣಕ್ಕಿ ಪ್ರತಿಷ್ಠಾನದ ಅಧ್ಯಕ್ಷ ವಕೀಲ ಬಲದೇವ ಸಣ್ಣಕ್ಕಿ ಸಲಹೆ ನೀಡಿದರು. 

ಶಿಕ್ಷಕ ಹಾಗೂ ಕವಿ ಈಶ್ವರ ಮಮದಾಪೂರ, ಹಿರಿಯ ಲೇಖಕಿ ಸುಗಂಧಾ ಡಂಬಳ, ಹಿರಿಯ ಜಾನಪದ ಕಲಾವಿದ ಹಾಗೂ ವಕೀಲ ಉದ್ದಣ್ಣಾ ಗೋಡೇರ, ರಾಹುಲ್ ಸೊಂಟಕ್ಕಿ ಟ್ಟಸ್ಟನ ಅಧ್ಯಕ್ಷ ಲಕ್ಷ್ಮಣ ಸೊಂಟಕ್ಕಿ, ಪ್ರೊ.ಶಿವಲೀಲ ಪಾಟೀಲ ಸಭೆಯಲ್ಲಿ ಮಾತನಾಡಿ ಸಲಹೆ-ಸೂಚನೆ ನೀಡಿದರು. 


ಸುದ್ದಿ ಓದಿ