ರಾಣೆಬೆನ್ನೂರ

ಸಮಾಜ ಏನು ಮಾಡಿದೆ ಅನ್ನುವುದಕ್ಕಿಂತ ನಾನೇನು ಮಾಡಿದ್ದೇನೆ: ಮಹಂತ ಶ್ರೀಗಳು

ಸಮಾಜ ಏನು ಮಾಡಿದೆ ಅನ್ನುವುದಕ್ಕಿಂತ ನಾನೇನು ಮಾಡಿದ್ದೇನೆ: ಮಹಂತ ಶ್ರೀಗಳು

ರಾಣೇಬೆನ್ನೂರು 22:  ಸಮಾಜ ನನಗೇನು ಮಾಡಿದೆ ಅನ್ನುವುದಕ್ಕಿಂತ ನಾನು ಸಮಾಜ ಮತ್ತು ಸಾರ್ವಜನಿಕರಿಗೆ ಏನು ಮಾಡಿದ್ದೇನೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಂಡರೆ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಜಂಗಮ ಕ್ಷೇತ್ರದ  ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಮಹಾಸ್ವಾಮಿಗಳು  ನುಡಿದರು. ಅವರು, ಸೋಮವಾರ,  ಸಿದ್ದೇಶ್ವರ ಸಮುದಾಯ ಭವನದಲ್ಲಿ 48ನೇ ಹುಟ್ಟು ಹಬ್ಬದ ನಿಮಿತ್ತ  ವರ್ತಕ,ಪರಮೇಶಪ್ಪ ಗೂಳಣ್ಣನವರ ಅಭಿಮಾನಿ ಬಳಗವು, ಆಯೋಜಿಸಿದ್ದ, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ, ಬ್ಯಾಗ್ ನೋಟ್ ಬುಕ್ಸ್‌, ಮತ್ತು ಅವಿಭಕ್ತ  ಕುಟುಂಬದವರಿಗೆ, ಗೌರವ ಹಾಗೂ ಗ್ರಾಫಂ ಡಿ ದರ್ಜೆ ನೌಕರರ ಅಭಿನಂದನಾ ಸನ್ಮಾನ  ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.           

ಇಂದು ಸಮಾಜದಲ್ಲಿ ಹುಟ್ಟು ಹಬ್ಬದ ಹೆಸರಿನಲ್ಲಿ, ಮೋಜು ಮಸ್ತೀ ಮೇಜುವಾನಿ ನಡೆಯುವುದು ಸರ್ವೇಸಾಮಾನ್ಯ ಆದರೆ, ಪರಮೇಶಪ್ಪ ಮತ್ತು ಕುಟುಂಬದವರು, ಸಮಾಜದಲ್ಲಿರುವ ಇತರರಿಗೂ ಮಾದರಿಯಾಗುವ ರೀತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸಂತೋಷ ತಂದಿದೆ. ಎಂದರು.             

ಹಣ ಗಳಿಸಿ ಕೂಡಿ ಇಡುವವರೇ ಹೆಚ್ಚಾಗಿದ್ದಾರೆ. ಗಳಿಸಿದ್ದನ್ನು ಇಡುವುದರಲ್ಲಿ ಅರ್ಥವಿಲ್ಲ. ಅದನ್ನು ಸಮರ​‍್ಕವಾಗಿ ಬಳಸಬೇಕು ಅದರಿಂದ ಮಾತ್ರ ಮಾನಸಿಕ ಶಾಂತಿ, ನೆಮ್ಮದಿ ದೊರೆಯಲು ಸಾಧ್ಯ ಎಂದು ಹಣಗಳಿಗೆ ಮಹತ್ವ ಮತ್ತು ಬಳಕೆ  ಕುರಿತು ವಿವರಿಸಿದ ಶಿವಾಚಾರ್ಯರು. ಭವಿಷ್ಯದಲ್ಲಿ, ಇಂಥವರಿಗೆ  ರಾಜಕೀಯದಲ್ಲಿ ಅವಕಾಶ ಸಿಗಬೇಕು ಅದರಿಂದ ಮಾತ್ರ, ಜನಸಾಮಾನ್ಯರ ಬದುಕು ಹಸನಾಗಲಿದೆ ಎಂದು ಅವರು ಆಶಿಸಿದರು.           

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಮಾಜಿ ಸಚಿವ ಹಿರೇಕೆರೂರಿನ ಬಿ.ಸಿ.ಪಾಟೀಲ್ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಸಮಾನತೆಯಿಂದ ಬದುಕಬೇಕು. ಅದಕ್ಕೆ ಇದ್ದವರು ಇಲ್ಲದವರಿಗೆ ಸಹಾಯ ಹಸ್ತ ನೀಡಬೇಕು ಅದುವೇ ನಿಜವಾದ ಮಾನವ ಧರ್ಮವಾಗಿದೆ. ಅಂತಹ ಧರ್ಮದ ಕಾರ್ಯವನ್ನು ಪರಮೇಶಪ್ಪ  ಅವರು ಮಾಡುತ್ತಿರುವುದು, ವಾಣಿಜ್ಯ ನಗರಕ್ಕೆ ಮಾದರಿಯಾಗಿದೆ ಎಂದರು.         

ಅತಿಥಿಯಾಗಿದ್ದ, ಮಾಜಿ ಶಾಸಕ, ಜಿಲ್ಲಾ ಬಿಜೆಪಿಅಧ್ಯಕ್ಷ, ಅರುಣಕುಮಾರ್ ಪೂಜಾರ್, ಭಗವಂತ ಕೊಟ್ಟಿದ್ದನ್ನು, ಜನಸಾಮಾನ್ಯರಿಗೆ ವಿವಿಧ ರೂಪದಲ್ಲಿ ದಾನ ನೀಡುತ್ತಿರುವ, ಗೂಳಣ್ಣನವರ ಕುಟುಂಬದ, ಪರಮೇಶಪ್ಪನವರು ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಇದು ತಮಗೆ ತುಂಬಾ ಸಂತೋಷ ನೀಡಿದೆ, ಅಲ್ಲದೆ  ಅಭಿಮಾನಿ ಬಳಗವು ಅತ್ಯಂತ ವ್ಯವಸ್ಥಿತವಾಗಿ ಕಾರ್ಯಕ್ರಮ ರೂಪಿಸಿರುವುದು ಇತರರಿಗೂ ಮಾದರಿಯಾಗಿದೆ ಎಂದು ತಮ್ಮ ಹರ್ಷ ವ್ಯಕ್ತಪಡಿಸಿದರು.    

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಮಂಜುನಾಥ ಓಲೇಕಾರ್, ರಾಜ್ಯ  ಉಪಾಧ್ಯಕ್ಷ ಡಾ:ಬಸವರಾಜ ಕೇಲಗಾರ,ಬಿಜೆಪಿ ರಾಜ್ಯ ಮ. ಕಾರ್ಯದರ್ಶಿ ಸೋಭಾ ನಿಸ್ಸಿಮಗೌಡ್ರು, ಕೆಸಿಸಿ ಬ್ಯಾಂಕ್ ನಿರ್ದೇಶಕ, ಸುಭಾಷ್ ಗಡಿಯಪ್ಪನವರ, ಬಿಜೆಪಿ ನಗರ ಅಧ್ಯಕ್ಷ ರಮೇಶ್ ಗುತ್ತಲ, ನಗರಸಭಾ ಸದಸ್ಯ ಹೊನ್ನವ್ವ ಕಾಟಿ, ವರ್ತಕ ಪರಮಪ್ಪ ಶಿವಣ್ಣನವರ, ಬ್ಯಾಡಗಿಯ ಕರಬಸಪ್ಪ ಬಳ್ಳಾರಿ, ಮತ್ತಿತರರು ಮಾತನಾಡಿದರು. ಕುಟುಂಬದ ಹಿರಿಯ ಗೌರಮ್ಮ, ಬಸಪ್ಪ. ಗೂಳಣ್ಣನವರ, ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಮೊದಲಾದಗಣ್ಯರು ಉಪಸ್ಥಿತರಿದ್ದರು. ನಗರ ಮತ್ತು ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗಣ್ಯರು, ವರ್ತಕರು, ಪಕ್ಷದ ಮುಖಂಡರು ಕಾರ್ಯಕರ್ತರು ಪರಮೇಶಪ್ಪ ಅಭಿನಂದಿಸಿ, ಸನ್ಮಾನಿಸಿ, ಶುಭ ಹಾರೈಸಿದರು. 

ಸುಜಾತಾ ಸಂಗಡಿಗರು ಪ್ರಾರ್ಥಿಸಿದರು. ನಗರಸಭಾ ಸದಸ್ಯ ಮಲ್ಲಣ್ಣ ಅಂಗಡಿ ಸ್ವಾಗತಿಸಿ, ಎಪಿಎಂಸಿ ಮಾಜಿ ಸದಸ್ಯ ಕರಬಸಪ್ಪ ಮಾಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಿದಾನಂದ ಬಡಿಗೇರ, ಸರೋಜಾ ಉದಗಟ್ಟಿ  ನಿರೂಪಿಸಿ, ಸೋಮಣ್ಣ ಗೌಡಶಿವಣ್ಣನವರ ವಂದಿಸಿದರು. 48ನೇ ಹುಟ್ಟುಹಬ್ಬದ ನಿಮಿತ್ತ  ಪರಮೇಶಪ್ಪ ಗೂಳಣ್ಣನವರ ಅಭಿಮಾನಿ, ಬಳಗವು ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಶಾಲಾ ವಿದ್ಯಾರ್ಥಿಗಳಿಗೆ ಬ್ಯಾಗ್,ನೋಟ್ಸ್‌ ಪುಸ್ತಕಗಳು ಸೇರಿ ಇತರೆ ಲೇಖನಿ ಸಾಮಗ್ರಿಗಳ ವಿತರಣೆ ಮತ್ತು ತಾಲೂಕಿನಲ್ಲಿರುವ ಅವಿಭಕ್ತ ಕುಟುಂಬದವರನ್ನು ಅಭಿನಂದಿಸಿ ಗೌರವಿಸಲಾಯಿತು. 


ಸುದ್ದಿ ಓದಿ