ಪಶ್ಚಿಮ ಕಾಲ್ವಿ ಸರ್ಕಾರಿ ಪ್ರೌಢಶಾಲೆ ವಾಲಿಬಾಲ್ ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆ
ಹೂವಿನ ಹಡಗಲಿ: ತಾಲೂಕಿನ ಪಶ್ಚಿಮ ಕಾಲ್ವಿಯ ಎಮ್ ಬಿಸಿಬಿ ಸರ್ಕಾರಿ ಪ್ರೌಢಶಾಲೆಯು ಹಗರಿಬೊಮ್ಮನಹಳ್ಳಿ ತಾಲೂಕಿನ ಗದ್ದಿಕೇರಿಯಲ್ಲಿ ನೆಡೆದ ಜಿಲ್ಲಾ ಮಟ್ಟದ ಬಾಲಕರ ವಾಲಿಬಾಲ್ ಕ್ರೀಡಾ ಕೂಟದಲ್ಲಿ ಕೂಡ್ಲಿಗಿ ತಾಲೂಕನ್ನು 23-25 ಹಾಗೂ 16-25 ಅಂಕಗಳಿಂದ ಸೋಲಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಸಾಧನೆ ಮಾಡಿದ ತಂಡದ ನಾಯಕ ಟಿ ಬೀರಪ್ಪ ಮತ್ತು ತಂಡದವರಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಕರಾದ ಬಳ್ಳಾರಿ ಜಗದೀಶ್, ಲಿಂಗೇಶ್ ಪಿ ಎಲ್ ರವರಿಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ. ಪೂಜಾರ್, ತಾಲೂಕ ದೈಹಿಕ ಶಿಕ್ಷಣ ಪರೀವೀಕ್ಷಕ ಮುಸ್ತಾಪ, ಎಸ್ ಡಿ ಎಮ್ ಸಿ ಅಧ್ಯಕ್ಷ ಎಮ್ ಉಮೇಶ್ ಮತ್ತು ಸರ್ವ ಸದಸ್ಯರು, ಶಾಲೆಯ ಮುಖ್ಯ ಗುರುಗಳಾದ ಎಮ್ ಪರಶುರಾಮ ಮತ್ತು ಸಿಬ್ಬಂದಿ ವರ್ಗದವರು,, ಕ್ರೀಡಾಭಿಮಾನಿಗಳು, ಊರಿನ ಎಲ್ಲಾ ನಾಗರಿಕರು, ಎಲ್ಲಾ ವಿದ್ಯಾರ್ಥಿಗಳು ಅಭಿನಂದಿಸಿದರು.