ಶಿವಾನಂದ ಮಹಾವಿದ್ಯಾಲಯದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ
ಕಾಗವಾಡ 10: ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವದ ಅಭಿವೃದ್ಧಿಗಾಗಿ ನಮ್ಮ ಮಹಾವಿದ್ಯಾಲಯ ಸದಾ ಮುಂಚೂಣಿಯಲ್ಲಿದೆ ಎಂದು ಪ್ರಾಚಾರ್ಯ ವ್ಹಿ.ಎಸ್. ತುಗಶೆಟ್ಟಿಯವರು ನುಡಿದರು.
ಅವರು ಸ್ಥಳೀಯ ಶಿವಾನಂದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ಬಿ.ಎ, ಬಿ.ಕಾಂ ಮತ್ತು ಬಿ.ಎಸ್ಸಿ. ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಷ್ಟ್ರ ಅಂತರಾಷ್ಟಿಯ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ನಮ್ಮ ಹೆಮ್ಮೆ ಎಂದರು. ಅತಿಥಗಳಾಗಿ ಉಪಪ್ರಾಚಾರ್ಯ ಡಾ. ಎಸ್.ಎ. ಕರ್ಕಿಯವರು ಮಹಾವಿದ್ಯಾಲಯದ ಬೆಳವಣಿಗೆಯ ಇತಿಹಾಸ ಧ್ಯೇಯೊದ್ದೇಶಗಳನ್ನು, ವಿದ್ಯಾರ್ಥಿಗಳಿಗೆ ಲಭ್ಯ ಇರುವ ಸೌಲಭ್ಯಗಳನ್ನು ತಿಳಿಸಿದರು. ವೇದಿಕೆಮೇಲೆ ಉಪಸ್ಥಿತರಿದ್ದ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಎಸ್.ಪಿ. ತಳವಾರ ಅವರು ಮಾತನಾಡಿ ಕಾಲೇಜಿನ ನಿಯಮಗಳನ್ನು ಪಾಲಿಸುವ ಮೂಲಕ ವಿದ್ಯಾರ್ಥಿಜೀವನ ಶಿಸ್ತಿನಿಂದ ಬೆಳೆಸಿಕೊಳ್ಳಬೇಕೆಂದು ಹೇಳಿದರು.
ಪ್ರೊ. ಆರ್.ಎಸ್. ಕಲ್ಲೊಳಿಕರ, ಪ್ರೊ. ಎ.ಎ. ಪಾಟೀಲ, ಪ್ರೊ. ವ್ಹಿ.ಬಿ. ಬುರ್ಲೆ, ಪ್ರೊ. ಎಸ್.ಎ. ಇನಾಮದಾರ, ಪ್ರೊ. ಎಸ್.ಡಿ. ಅಲಗೌಡರ, ಪ್ರೊ. ಮಿಸ್. ಎ.ಆರ್. ಮಾಲುಮಲ್ಲಾಗೋಳ, ಪ್ರೊ. ಮಿಸ್. ಜೆ.ಎಚ್. ರಾಜಾಪೂರೆ, ಪ್ರೊ. ಎಸ್.ಎಸ್. ಮೋರೆ, ಪ್ರೊ. ವ್ಹಿ.ಟಿ. ಬನಜವಾಡ, ಪ್ರೊ. ಎಸ್.ಬಿ. ಖೊತ, ಪ್ರೊ. ಮಿಸ್. ಎಂ.ಕೆ. ಪತ್ತಾರ, ಪ್ರೊ.ಮಿಸ್. ಪರಗೌಡ ಮತ್ತು ಇತರರು ಉಪಸ್ಥಿತರಿದ್ದರು.
ಕಾವ್ಯಾ ಅಸೋದೆ ಮತ್ತು ಸಂಗಡಿಗರು ಸ್ವಾಗತಗೀತೆ ಹಾಡಿದರು. ಐಕ್ಯೂಎಸಿ ಸಂಯೊಜಕ ಪ್ರೊ. ಬಿ.ಡಿ. ಧಾಮಣ್ಣವರ ಸ್ವಾಗತಿಸಿದರು. ಪ್ರೊ. ಜೆ.ಕೆ. ಪಾಟೀಲ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರೊ. ಮಿಸ್. ಪಿ.ವ್ಹಿ. ಕಿನಂಗೆ ಮತ್ತು ಪ್ರೊ. ಮಿಸ್. ಐಶ್ವರ್ಯಾ ಅವರು ನಿರೂಪಿಸಿದರು. ಪ್ರೊ. ಎಸ್.ಎಂ. ಘೋರೆ್ಡ ವಂದಿಸಿದರು.