ರಾಜ್ಯ ಶಿಕ್ಷಣ ನೀತಿಗೆ ಸ್ವಾಗತ: ಡಾ. ಕುಬೇರಪ್ಪ
ರಾಣೇಬೆನ್ನೊರ 17:ರಾಷ್ಟ್ರೀಯ ಶಿಕ್ಷಣ ನೀತಿ ಹೆಸರಿನಲ್ಲಿ 04 ವರ್ಷದ ಪದವಿ ತರಗತಿ, ಹಾಗೂ ಒಂದು ವರ್ಷ ಪದವಿ ಅಧ್ಯಯನ ಮಾಡಿದರೆ ಷರ್ಟಿಫಿಕೇಟ್ಕೋರ್ಸ್ಹಿ 02 ವರ್ಷದ ಪದವಿ ಅಧ್ಯಯನ ಮಾಡಿದವರಿಗೆಡಿಪ್ಲೋಮಾ ಷರ್ಟಿಫಿಕೇಟ್ ಮತ್ತುಅವೈಜ್ಞಾನಿಕಕ್ರೆಡಿಟ್ ಬ್ಯಾಂಕ್ ನಿರ್ಮಾಣ ಮಾಡಿಉನ್ನತ ಶಿಕ್ಷಣದ ಸಂಪೂರ್ಣ ಮಾನ ಹರಾಜು ಮಾಡಿದ ಬಿ.ಜೆ.ಪಿ. ಯವರು, ಈಗ ರಾಜ್ಯ ಶಿಕ್ಷಣ ನೀತಿಯನ್ನು ತಳಬುಡವಿಲ್ಲದೇ ರದ್ದು ಮಾಡಿ ಎಂಬ ಕೂಗೆಬ್ಬಿಸಿರುವುದು ನಾಚಿಕೆಗೇಡಿನ ಕೆಲಸ ಎಂದಿರುವಕರ್ನಾಟಕ ಪ್ರದೇಶಕಾಂಗ್ರೇಸ್ನ ಪದವೀಧರಘಟಕದರಾಜ್ಯಾಧ್ಯಕ್ಷಡಾ. ಆರ್.ಎಂ. ಕುಬೇರಪ್ಪ, ರಾಜ್ಯದ ನೂತನಶಿಕ್ಷಣ ನೀತಿಯನ್ನು ಸ್ವಾಗತಿಸಿದ್ದಾರೆ.
ಇತ್ತೀಚಿಗೆ ವಿಧಾನ ಪರಿಷತ್ ಸದಸ್ಯ ಪತ್ರಿಕಾ ಹೇಳಿಕೆ ನೀಡಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳು ನೇರವಾಗಿ ಪಿ.ಎಚ್.ಡಿ. ಮತ್ತು ನೆಟ್, ಸೆಟ್ಗೆ ಹೊಗುವುದಕ್ಕೆತೊಂದರೆಯಾಗಿದೆ, ಆದ್ದರಿಂದರಾಜ್ಯ ಶಿಕ್ಷಣ ನೀತಿಕೈಬಿಡಬೇಕುಎಂದು ಹೇಳಿರುವುದು ಅವರ ಹುದ್ದೆಗೆಘನತೆತರುವಂಥದ್ದಲ್ಲ. ಎನ್.ಇ.ಪಿ ಶಿಕ್ಷಣ ನೀತಿ ಅಳವಡಿಸಿದ ಮೇಲೆ 04 ವರ್ಷದ ಪದವಿಗೆ, ವಿ.ವಿ. ಸಿಲೆಬಸ್ ಬಿಟ್ಟರೆಅಧ್ಯಾಪಕರಿಗೆ ಪಾಠ ಮಾಡಲುಒಂದು ಪುಸ್ತಕ ಬಿಡಲಿಲ್ಲ ವಿದ್ಯಾರ್ಥಿಗಳಿಗೆ ಯಾವುದೇ ಪಠ್ಯಪುಸ್ತಕ ಬಿಡಲಿಲ್ಲ ಯೂಟ್ಯೂಬ್, ನೆಟ್ನಲ್ಲಿ ಪದವಿ ತರಗತಿಗೆಅಧ್ಯಯನ ಮಾಡುವಂತಹದುರ್ಗತಿಉನ್ನತ ಶಿಕ್ಷಣಕ್ಕೆ ಬಂದಿದೆ. ಸಂಕನೂರ್ರವರೇಎನ್.ಇ.ಪಿ ಪದವಿ ಮುಗಿಸಿದ ಯಾವ ವಿದ್ಯಾರ್ಥಿಗಳಿಗೂ ಇದು ವರೆಗೆಓರಿಜನಲ್ ಮಾರ್ಕ್ಸಕಾರ್ಡ್ ನೀಡಿರುವುದಿಲ್ಲ. ಆಗಸ್ಟ್ - ಸೆಪ್ಟಂಬರ್ ತಿಂಗಳಿನಲ್ಲಿ ಶೈಕ್ಷಣಿಕ ವರ್ಷ ಪ್ರಾರಂಭ ಮಾಡಿರುವುದುಇಂಥದ್ದೆಲ್ಲಾಇವರಕಣ್ಣಿಗೇಕೆಕಂಡಿಲ್ಲ. ಇನ್ನೊಬ್ಬ ಮಾಜಿ ಶಾಸಕ ಅರುಣ ಶಹಪೂರ ಪ್ರತಿಕ್ರಿಯೆ ನೀಡಿಕೋಟಿಗಟ್ಟಲೇಜನ ನೂತನ ಶಿಕ್ಷಣ ನೀತಿ ಬಗ್ಗೆ ದಂಗೆ ಏಳಬೇಕಾಗುತ್ತದೆ. ಎಂದು ಹೇಳುತ್ತಾರೆ.ಅರುಣ್ ಶಹಪೂರ್ರವರೇ ನಿಮ್ಮದಂಗೆಯ ಮುಂಚಿನ ದಿನಗಳನ್ನು ನೆನಪಿಸಿಕೊಳ್ಳಿ. ಈ ದೇಶದಯಾವುದೇ ಬುದ್ದಿ ಜೀವಿಗಳ ಅಭಿಪ್ರಾಯ ಪಡೆಯದೇ, ಹಾಗೂ ಕರಡು ಪ್ರತಿ ಸಾರ್ವಜನಿಕಅಭಿಪ್ರಾಯಕ್ಕೆ ಬಿಡದೇಯಾವುದೇ ಶೈಕ್ಷಣಿಕ ಮಂಡಳಿ ಅಭಿಪ್ರಾಯ ಪಡೆಯದೇಆಯಾ ರಾಜ್ಯಗಳ ಸದನಗಳಲ್ಲಿ ಚರ್ಚೆಯಾಗದೇ, ಯಾರೋ ಮೋದಿಯವರ ಭಟ್ಟಂಗಿಗಳು ರೂಪಿಸಿದ ಶಿಕ್ಷಣ ನೀತಿಯನ್ನುರಾಷ್ಟ್ರೀಯ ಶಿಕ್ಷಣ ನೀತಿಎಂದು ದಿಢೀರ್ನೇಎಲ್ಲ ರಾಜ್ಯಗಳಲ್ಲಿ ಜಾರಿಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ. ಆಗ ಸರಿಯಾಗಿದ್ದು ಈಗೇಕೆ ಸರಿಯಿಲ್ಲ. ಕೇವಲ ವಿರೋಧ ಪಕ್ಷದಲ್ಲಿದ್ದೆವೆಂಬ ಕಾರಣಕ್ಕೆರಾಜ್ಯದ ನೂತನ ಶಿಕ್ಷಣ ನೀತಿಯನ್ನು ವಿರೋಧಿಸುವುದು ಮಕ್ಕಳ ಭವಿಷ್ಯದಜೊತೆಗೆಚಕ್ಕಂದವಾಗಬಾರದು. ಸರಿಯಾಗಿ ಮಾಹಿತಿಇಲ್ಲದ ಎಬಿವಿಪಿ ಹುಡುಗರನ್ನು ಶಿಕ್ಷಣಸ ವ್ಯವಸ್ಥೆ ವಿರುದ್ಧಎತ್ತಿಕಟ್ಟುವುದುಅತ್ಯಂತ ಪಾಪದ ಕೆಲಸವಾಗುತ್ತದೆಎಂದು ಈ ಮಾಜಿ ವಿಧಾನ ಪರಿಷತ್ ಸದಸ್ಯಅರುಣ ಶಾಹಪೂರಎಂದೂಏನನ್ನು ಮಾತನಾಡದೇಇರುವ ಶ್ರೀ.ಸಂಕನೂರ ಎಂ.ಎಲ್.ಸಿ.ಗಳು, ಅಪ್ರಬುದ್ಧವಾದ ಮತ್ತು ಹಠಮಾರಿತನದ ಪ್ರತಿಕ್ರಿಯೆಯನ್ನು ಸಾರ್ವಜನಿಕ ಹಿತದೃಷ್ಠಿಯಿಂದ ನಿಲ್ಲಿಸಬೇಕೆಂದ ಡಾ. ಕುಬೇರಪ್ಪ ಆಗ್ರಹಪಡಿಸಿದ್ದಾರೆ.