ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಸಂಪನ್ನ
ಕಾಗವಾಡ 02: ತಾಲೂಕಿನ ಶೇಡಬಾಳ ಪಟ್ಟಣದ ಸನ್ಮತಿ ಶಿಕ್ಷಣ ಸಂಸ್ಥೆಯಲ್ಲಿ 2024/25ನೇ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರಥಮ ವರ್ಷದ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಜರಗಿತು.ಕಾಗವಾಡ ತಾಲೂಕಿನ ಶೇಡಬಾಳದ ಸನ್ಮತಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತರುಹಾಗೂ ಅಂತರಾಷ್ಟ್ರೀಯ ಈಜು ಪಟುವಾದ ರಾಘವೇಂದ್ರ ರತ್ನಾಕರ್ ಅನ್ವೇಕರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಸತ್ಕಾರ ಸ್ವೀಕರಿಸಿ ಮಾತನಾಡುತ್ತಾಜೀವನ ಅನ್ನೋದು ತುಂಬಾ ಚಿಕ್ಕದು ಅಷ್ಟರಲ್ಲಿ ನಾವು ಏನಾದರೂ ಸಾಧಿಸುವ ಗುರಿ ಹೊಂದಿರಬೇಕು ಎಂದು ಹೇಳಿದರು ಸಭೆಯ ಅಧ್ಯಕ್ಷ ಸ್ಥಾನವನ್ನು ಸನ್ಮತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿನೋದ್ ಬರಗಾಲೆ ಅವರು ವಹಿಸಿದ್ದರು.ನಂತರ ಅತಿಥಿ ಗಣ್ಯರಿಗೆ ಸತ್ಕಾರರ ಸಮಾರಂಭ ಜರುಗಿತು.ಪ್ರಾಚಾರ್ಯರಾದ ಬಾಹುಬಲಿ ಬನಜಿಗವಾಡೆ ಅವರು.ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಗಣ್ಯರಿಂದ ಬಿಎ ಪ್ರಥಮ ತರಗತಿಯ ಕೋಣೆಯನ್ನು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಲಾಯಿತು.ಮೊದಲಿಗೆ ಅತಿಥಿ ಗಣ್ಯರಿಗೆ ಮತ್ತು ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು ನಂತರ ಅಥೀತಿಗಳಿಂದ ಸರಸ್ವತಿ ಪೂಜೆ ಮತ್ತು ದೀಪ ಪ್ರಜ್ವಲನೆ ಮಾಡಲಾಯಿತು.
ಈ ಸಮಯದಲ್ಲಿ ಅಜಿತ್ ನಾಂದ್ರೆ, ಆರ್ ವಿ ಸಂಗೋರಾಮ ಡಾಕ್ಟರ ಎಬಿ ಪಾಟೀಲ್ ಸನ್ಮತಿ ಪಾಟೀಲ್, ನೇಮಗೌಡ ಪಾಟೀಲ್ ರಾಹುಲ್ ಸೌದತ್ತಿ ಅಕ್ಕಾತಾಯಿ ಮುಜಾವರ್, ರಾಜಗೌಡಾ ಗೇನಪ್ಪಗೊಳ,ಯಶವಂತ್ ಜಾದವ್, ಅಣ್ಣಾಗೌಡ ಹಂಡಗೆ, ಭರತೇಶ್ ನಾಂದರೆ, ಅಣ್ಣಾ ಅರವಾಡಿ, ಪ್ರಕಾಶ್ ಮಾಳಿ, ರಮೇಶ್ ಬೇಡ್ಕರ್, ರವಿ ನಾಂದ್ರೆ, ಮತ್ತು ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.