ವೀಕೆಂಡ್ ಕರ್ಫ್ಯೂ: ಉತ್ತಮ ಪ್ರತಿಕ್ರಿಯೆ
ಗೋಕಾಕ 25: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂ ಭಾನುವಾರವು ಸಹ ಗೋಕಾಕ ತಾಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಳಿಗ್ಗೆ 7ಗಂಟೆಯಿಂದ 9 ಗಂಟೆಯ ವರೆಗೆ ಅಗತ್ಯ ವಸ್ತುಗಳನ್ನು ಪಡೆಯಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ನಗರದ ಅಂಗಡಿ ಮುಂಗಟ್ಟುಗಳು, ಮಾರ್ಕೆಟ್, ಹೋಟೆಲ್‌ಗಳು ಸಂಪೂರ್ಣ ಬಂದ್ ಆಗಿದ್ದು, ರಸ್ತೆಗಳೆಲ್ಲ ಜನ, ವಾಹನ ಸಂಚಾರವಿಲ್ಲದೇ ಬಣ ಗುಡುತ್ತಿದ್ದವು.