ರಾಣೆಬೆನ್ನೂರ

ಮನಸ್ಸಿನಲ್ಲಿನ ದುರ್ಗಣಗಳು ಬಿಟ್ಟು ಇತರರಿಗೆ ಒಳಿತುಮಾಡುವ ಮನಸ್ಥಿತಿ ನಮ್ಮದಾಗಬೇಕು

ಮನಸ್ಸಿನಲ್ಲಿನ ದುರ್ಗಣಗಳು ಬಿಟ್ಟು ಇತರರಿಗೆ ಒಳಿತುಮಾಡುವ ಮನಸ್ಥಿತಿ ನಮ್ಮದಾಗಬೇಕು

ರಾಣೇಬೆನ್ನೂರು 6: ನವರಾತ್ರಿ ಭಾರತೀಯರ ದೊಡ್ಡಹಬ್ಬ ನವದುರ್ಗೆಯರ ಆರಾಧಿಸುವ ಮೂಲಕ ದುಷ್ಟ ಶಿಕ್ಷೆ ಶಿಷ್ಟ ರಕ್ಷೆ ಆಗುವಂತೆ ಮಾಡೋಣ ಎಂದು ಸೃಳೀಯ ನಗರಸಭಾ ಸದಸ್ಯ ತ್ರಿವೇಣಿ ನಾ. ಪವಾರ ಅವರು ಹೇಳಿದರು. 

ಅವರು ನಗರದ ಕರ್ನಾಟಕ ಸಂಘದಲ್ಲಿ ಶನಿವಾರ 88ನೇಯ ವರ್ಷದ ನಾಡಹಬ್ಬದ ಮೂರನೆಯದಿನದ ಸಭಾ ಕಾರ್ಯಕ್ರಮದಲ್ಲಿ ಸಮಾರಂಭದ ಅತಿಥಿಯಾಗಿ ಆಗಮಿಸಿ ಮಾತನಾಡುತ್ತ, ಮನಸ್ಸಿನಲ್ಲಿನ ದುರ್ಗಣಗಳು ಕಳೆದು ಸದಾ ಇತರರಿಗೆ ಒಳಿತುಮಾಡುವ ಮನಸ್ಥಿತಿ ನಮ್ಮೆಲರದ್ದಾಗುವಂತೆ ಭುವನೇಶ್ವರಿ ಅನುಗ್ರಹಿಸಲಿ ಎಂದರು. ಅತಿಥಿಯಾಗಿ ಆಗಮಿಸಿದ್ದ ಹಾವೇರಿಯ ಸಾಹಿತಿ ಚಲನಚಿತ್ರಕಲಾವಿದ ಸುರೇಶ ಕಣೇಕಲ್ ಮಾತನಾಡುತ್ತಾ ಜ್ಞಾನಪೀಠ ಪ್ರಶಸ್ತಿ ಪಡೆದ ಎಂಟು ದಿಗ್ಗಜರಲ್ಲಿ ಆರು ಜನ ಒಂದಕ್ಕಿಂತ ಹೆಚ್ಚು ಸಾರೆ ಭೇಟಿ ನೀಡಿದ್ದ ಈ ವೇದಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದು ಪೂರ್ವಜನ್ಮದ ಪುಣ್ಯವೇ ಇರಬೇಕು ಎಂದು ಹೇಳಿದರು.  

ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾಧುಸಾ ಪವಾರ ಅವರು ಸಂಘದ ಹಾಗೂ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕ್ರಮಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಹಾಗೂ ಸಹಾಯವನ್ನು ಸ್ಮರಿಸಿ, ಪವಾರ ಕುಟುಂಬ ಸಮಾಜಮುಖಿ ಕಾರ್ಯಗಳಿಗೆ ಹೆಸರುವಾಸಿಯಾಗಿದೆ. ಡಾ. ನಾರಾಯಣ ಪವಾರ ಅವರ ತಂಡ ಕನಸಿನ ರಾಣೇಬೆನ್ನೂರು ಟೀಮ್ ಮೂಲಕ ನಗರದ ಪ್ರಗತಿಗೆ ಶ್ರಮಿಸುತ್ತಿದ್ದಾರೆ ಇಂಥವರು ಮುಂದಿನ ದಿನಗಳಲ್ಲಿ ಶಾಸಕರಾಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಶಮಿಸುವಂತಾಗಲಿ ಎಂದರು. 

ಸಭಾ ಕಾರ್ಯಕ್ರಮದ ನಂತರ ಮೈಸೂರಿನ ಖ್ಯಾತ ವೀಣಾವಾದಕಿ ಅಶ್ವಿನಿ ಎನ್‌. ಮತ್ತು ತಂಡದವರು ನಡೆಸಿಕೊಟ್ಟ ವೀಣಾವಾದನ ಕಾರ್ಯಕ್ರಮದಲ್ಲಿ ಭಾವಗೀತೆ ಭಕ್ತಿಗೀತೆಗಳಲ್ಲದೇ ವಿವಿಧ ರಾಗಗಳನ್ನು ನುಡಿಸಿ ಸಭಿಕರನ್ನು ರಂಜಿಸಿದರು. 

ವಿಭಾ ವಿನಾಯಕ ಜೋಶಿ ನಾಡಗೀತೆ ಹಾಡಿದರು, ಅಭಿನಂದನ ಜೋಶಿ ಸ್ವಾಗತಿಸಿದರು, ಶ್ರೇಯಾ ಸಂದೀಪ ದೀಕ್ಷಿತ್ ವಂದಿಸಿದರು, ಶ್ರೀಲಕ್ಷ್ಮಿ ಅಡಕಿ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ