ಶಿಗ್ಗಾವ್

ನಾವೆಲ್ಲ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಬೇಕು: ಬೊಮ್ಮಾಯಿ

ನಾವೆಲ್ಲ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಬೇಕು: ಬೊಮ್ಮಾಯಿ

ಶಿಗ್ಗಾವಿ 14: ಪಟ್ಟಣದಲ್ಲಿ ವಿವಿಧಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆ ನಡೆಸಿದ ನೂತನ ಸಂಸದ ಬಸವರಾಜ ಬೊಮ್ಮಾಯಿ. 

ನಂತರ ಮಾದ್ಯಮಗಳಿಗೆ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದಅವರುಜೂನ್ 15ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದೇನೆ. ಬಳಿಕ ಶಿಗ್ಗಾವಿ ಉಪಚುನಾವಣೆ ಪ್ರಕ್ರಿಯೆ ಶುರುವಾಗಲಿದೆ.ಕ್ಷೇತ್ರದ ಸರ್ವೆ ನಡೆಸಿ ,ಜನಾಭಿಪ್ರಾಯಯಾರ ಪರಇದೆಯೋಅವರಿಗೆಟಿಕೇಟ್ ಪಕ್ಷ ನೀಡಲಿದೆ. ನಮ್ಮಲ್ಲೂ ಅನೇಕ ಸಮರ್ಥ ಅಭ್ಯರ್ಥಿಗಳಿದ್ದಾರೆ.ಖಂಡಿತವಾಗಿ ಶಿಗ್ಗಾವಿ ಉಪಚುನಾವಣೆಗೆಲ್ಲಲಿದ್ದೇವೆ. 

ಕೇಂದ್ರ ಸಚಿವ ಸ್ಥಾನ ಕೈ ತಪ್ಪಿದ ವಿಚಾರವಾಗಿ ನಾನು ಸಂಸದನಾಗಿಯೇ ಕೆಲಸ ಮಾಡಬಲ್ಲೆ.ಅನುಭವವಿರೋದ್ರಿಂದ ಸಂಸದನಾಗಿಯೂಅತಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡುವೆ. ಕೇಂದ್ರದ ಯೋಜನೆಗಳನ್ನು ಚುರುಕುಗೊಳಿಸುವೆ.ಮಳೆ ಚೆನ್ನಾಗಿಆಗಿದೆ.ಮಳೆ ಶುಭ ಸೂಚನೆ ಅಲ್ಲದೇಕಾಂಗ್ರೆಸ್ ಬಂದಾಗ ಬರಗಾಲ ಶುರುವಾಗಿತ್ತು.ಮೋದಿಯವರ ಸರ್ಕಾರ ಬಂದಕೂಡಲೇ ಮಳೆ ಶುರುವಾಗಿದೆ.  

ರಾಜ್ಯ ಸರ್ಕಾರರೈತರಿಗೆ ಬೀಜ- ಗೊಬ್ಬರ ವ್ಯವಸ್ಥೆ ಮಾಡಿಲ್ಲ ಹಾಗೂರೈತರಿಗೆ ಬೇಕಾಗಿರೋಗೊಬ್ಬರ ಬಿಟ್ಟುತಮ್ಮ ಹತ್ರಇರೋಗೊಬ್ಬರತಗೊಂಡು ಹೋಗಿ ಅಂತಿದ್ದಾರೆ. ಕೃಷಿ ಇಲಾಖೆ ರೈತರ ವಿರೋಧಿ ಇಲಾಖೆ ಆಗಿದೆ. ಸೊಸೈಟಿಗಳಲ್ಲಿ ಗೊಬ್ಬರಇಲ್ಲ ವ್ಯಾಪಾರಸ್ಥರ ಬಳಿ ಗೊಬ್ಬರ  ಇದೆ. ಹೆಚ್ಚಿನರೇಟಿಗೆಗೊಬ್ಬರ ಮಾರ್ತಾಇದ್ದಾರೆ.ಆದರೆ ಅಧಿಕಾರಿಗಳು ಎಲ್ಲಿಯೂರೈಡ್ ಮಾಡಿಲ್ಲ.ಹಾವೇರಿಜಿಲ್ಲೆಯಲ್ಲಿ ಕೃಷಿ ಇಲಾಖೆ ಮುಂಗಾರು ಹಿಂಗಾರು ನಿರ್ವಹಣೆಯಲ್ಲಿ ವಿಫಲವಾಗಿದೆಎಂದರು. 

ಈ ಸಂದರ್ಭದಲ್ಲಿ  ಶಿವಾನಂದ ಮ್ಯಾಗೇರಿ, ಶ್ರೀಕಾಂತ ದುಂಡಿಗೌಡ್ರ, ಶಶಿಧರ ಯಲಿಗಾರ, ಗಂಗಾಧರ ಸಾತಣ್ಣವರ, ತಿಪ್ಪಣ್ಣ ಸಾತಣ್ಣವರ, ನರಹರಿಕಟ್ಟಿ, ಡಾ. ಮಲ್ಲೇಶಪ್ಪ ಹರಿಜನ, ಬಸವರಾಜ ನಾರಾಯಣಪೂರ, ರೇಣುಕನಗೌಡ ಪಾಟೀಲ, ಸಂಗೀತಾ ವಾಲ್ಮೀಕಿ, ಡಾ.ಶೋಭಾ ನಿಸ್ಸಿಮಗೌಡ್ರ, ಆನಂದ ಸುಭೇದಾರ, ಮಂಜುನಾಥ ಬ್ಯಾಹಟ್ಟಿ ಸೇರಿದಂತೆಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ