ರಾಣೆಬೆನ್ನೂರ

ಧರ್ಮ ಸಂಸ್ಕೃತಿಯಲ್ಲಿ ನಾವೆಲ್ಲರೂ ಜೀವನ ಸಾಗಿಸಬೇಕು: ಜಿ.ಪಿ.ಹಿರೇಮಠ

ಧರ್ಮ ಸಂಸ್ಕೃತಿಯಲ್ಲಿ ನಾವೆಲ್ಲರೂ ಜೀವನ ಸಾಗಿಸಬೇಕು: ಜಿ.ಪಿ.ಹಿರೇಮಠ

ರಾಣೇಬೆನ್ನೂರು,04 : ಮನುಷ್ಯನ ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ, ವೇದ ಇತಿಹಾಸ ಕಾಲಗಳಿಂದಲೂ ಪರಂಪರಾಗತ ನಡೆದುಕೊಂಡು ಬಂದಿರುವ ನಿತ್ಯ ಧಾರ್ಮಿಕ ಸೇವೆ ಕಾರ್ಯಕ್ರಮಗಳ ಜೊತೆಗೆ ಶ್ರಾವಣ ಮಾಸದ ಕಾರ್ಯಕ್ರಮಗಳಿಗೆ ವಿಶೇಷತೆ ಇರುವುದಾಗಿ, ಅರ್ಚಕ ಜಿ.ಪಿ.ಹಿರೇಮಠ ಹೇಳಿದರು. ಅವರು ತಾಲೂಕಿನ ಸುಕ್ಷೇತ್ರ ಹುಲ್ಲತ್ತಿ ಗ್ರಾಮದ  ಶ್ರೀ ಆಂಜನೇಯ ಸ್ವಾಮಿಯ ಶ್ರಾವಣ ಮಾಸದ  ಮಹಾಮಂಗಳಾರತಿ ಮತ್ತು ನವಗ್ರಹ ಯಜ್ಞಹೋಮ ಹಾಗೂ ಶ್ರಾವಣಮಾಸದ ಸಮಾರೋಪ ಪೂಜೆ ನೆರವೇರಿಸಿ, ಮಾತನಾಡಿದರು.  

ಧರ್ಮ ಸಂಸ್ಕೃತಿಯಲ್ಲಿ ನಾವೆಲ್ಲರೂ ಜೀವನ ಸಾಗಿಸಿದಾಗ ಮಾತ್ರ ಬದುಕು ಸಾರ್ಥಕತೆ ಹೊಂದುತ್ತದೆ. ಧರ್ಮ ವೀಹೀನರಾದರೆ ಶಾಂತಿ ನೆಮ್ಮದಿ ಇಲ್ಲದೆ ಪರದಾಡಬೇಕಾಗುತ್ತದೆ ಎಂದ ಅವರು ಶ್ರಾವಣ ಮಾಸದ, ಮಹತ್ವ ಕುರಿತು  ವಿವರಿಸಿ ಮಾತನಾಡಿದರು. ನಾಡಿನುದ್ದಕ್ಕೂ ಸಹಸ್ರಾರು ಭಕ್ತರನ್ನು ಹೊಂದಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರದಲ್ಲಿ, ಶ್ರೀ  ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದರು.   

ಇದೇ ಸಂದರ್ಭದಲ್ಲಿ ವಾರ್ಷಿಕ ಧಾರ್ಮಿಕ ಸಂಪ್ರದಾಯದಂತೆ  ಪೂಜೆಯಲ್ಲಿ ಪಾಲ್ಗೊಂಡ ಜೋಗತಿಯರು ಮತ್ತು ದಾಸಪ್ಪಗಳು ಉಪವಾಸ  ನೆಡೆಸಿ ಸ್ವಾಮಿಗೆ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೋಮ ಹವನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹತ್ತಾರು  ವೈದಿಕ ವಟುಗಳಿಂದ ಯಜ್ಞ ಹೋಮ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಮಹಾಪ್ರಸಾದ ವಿತರಣೆ ಮಾಡಲಾಯಿತು 


ಸುದ್ದಿ ಓದಿ