ಸಿಂಧಗಿ

ದೇಶಿ ಸಂಸ್ಕೃತಿಯಲ್ಲಿ ಜನಪದ ಸಂಸ್ಕೃತಿ ಕಾಣುತ್ತೇವೆ : ಡಾ.ಬಾಳಾಸಾಹೇಬ ಲೋಕಾಪೂರ

ದೇಶಿ ಸಂಸ್ಕೃತಿಯಲ್ಲಿ ಜನಪದ ಸಂಸ್ಕೃತಿ ಕಾಣುತ್ತೇವೆ : ಡಾ.ಬಾಳಾಸಾಹೇಬ ಲೋಕಾಪೂರ


ಸಿಂದಗಿ08:  ಜನಪದ ಮತ್ತು ದೇಶಿ ಸಂಸ್ಕೃತಿ ಬೇರೆ ಬೇರೆ ಆದರೂ ದೇಶಿ ಸಂಸ್ಕೃತಿಯಲ್ಲಿ ಜನಪದ ಸಂಸ್ಕೃತಿಯನ್ನು ಕಾಣುತ್ತೇವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಹೇಬ ಲೋಕಾಪೂರ ಹೇಳಿದರು. 

ರವಿವಾರ ಪಟ್ಟಣದ ಮಾಂಗಲ್ಯಭವನದಲ್ಲಿ ನೆಲೆ ಪ್ರಕಾಶನ ಸಂಸ್ಥೆ ಸಿಂದಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಜಯಪುರ ಇವರ ಸಹಯೋಗದಲ್ಲಿ ಎಂ.ಎಂ. ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ದೇಸಿ ಸನ್ಮಾನ ಪ್ರಶಸ್ತಿ ಪ್ರಧಾನ ಸಮಾರಂಭ, ತತ್ವಪದ ಗಾಯನ, ಚಿಂತನ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 

ದೇಶಿ ಎನ್ನುವುದು ಸರಳತೆ ಮತ್ತು ಸಂಸ್ಕೃತಿಕ ಪ್ರತಿಕವಾಗಿದೆ. ಗಾಂಧಿ ಮಾರ್ಗವನ್ನು ದೇಶಿ ಮಾರ್ಗ ಎಂದು ಕರೆಯುತ್ತೇವೆ. ದೇಶಿ ಸಂಸ್ಕೃತಿ ಉಳಿದಾಗ ಮಾತ್ರ ಪವಿತ್ರವಾದ ಬದುಕು ನಾವು ಕಾಣುತ್ತೇವೆ ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಆರ್‌.ಸುನಂದಮ್ಮ ಮಾತನಾಡುತ್ತಾ ದೇಶಿ ಮನಸ್ಥಿತಿಯನ್ನು ನಾವೆಲ್ಲ ಕೈ ಬಿಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ಈಗಿನ ಆಧುನಿಕ ಮಾಯೆ ಎಂದು ಹೇಳಿದರು. 

ಬರಹಗಾರ ಡಾ.ಚನ್ನಪ್ಪ ಕಟ್ಟಿ ಮಾತನಾಡಿದರು. 

ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ, ಮಕ್ಕಳ ಸಾಹಿತಿ ರಾ.ಸಿ. ವಾಡೇದ, ಶಿವಪ್ಪ ಗವಸಾನಿ, ಬಾಬು ಕಮತಗಿ, ಅಪ್ಪು ತಾರಾಪೂರ, ಚಿದಾನಂದ ಬಂಡಗಾರ, ಎನ್‌.ಎಂ. ಬಿರಾದಾರ, ಬಿ.ಪಿ. ಕರ್ಜಗಿ, ಕೆ.ಎಚ್‌. ಸೋಮಾಪೂರ, ಆಯ್‌.ಬಿ. ಬಿರಾದಾರ, ಎಸ್‌.ವಾಯ್‌. ಬಿಳಗಿ, ಚಂದ್ರಶೇಖರ ಹರಿಹರ, ಗೀತಾ ಹರಿಹರ, ಎಂ.ಎಸ್‌. ಹಯ್ಯಾಳಕರ, ಚನ್ನಪ್ಪ ಕತ್ತಿ, ಡಾ.ಶರಣಬಸವ ಜೋಗುರ, ಶಿವಮಾಂತ ಪೂಜಾರಿ, ಮನು ಪತ್ತಾರ, ಗುರು ಪಡಶೆಟ್ಟಿ, ಗುರುನಾಥ ಅರಳಗುಂಡಗಿ ಸೇರಿದಂತೆ ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


ಸುದ್ದಿ ಓದಿ