ರಾಣೆಬೆನ್ನೂರ

ಹಿಂದಿನ ಆಡಳಿತದ ಬಿಜೆಪಿ ಸರ್ಕಾರಕ್ಕೆ ಬಂಜಾರ ಸಮುದಾಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದೇವೆ

ಹಿಂದಿನ ಆಡಳಿತದ ಬಿಜೆಪಿ ಸರ್ಕಾರಕ್ಕೆ ಬಂಜಾರ ಸಮುದಾಯ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದೇವೆ

ರಾಣೇಬೆನ್ನೂರು 04:  ಹಿಂದಿನ  ಅವಧಿಯಲ್ಲಿ ಬಿಜೆಪಿ ಸಕರ್ಾರವು, ಮತ ಹಾಕಿ, ಪರಿಪೂರ್ಣ ಗೆಲುವಿಗೆ ಕಾರಣರಾದವರನ್ನು, ಮರೆತು, ಮುಕ್ತಾಯಗೊಂಡಿರುವ ನ್ಯಾಯಮೂತರ್ಿ ಎ ಜೆ ಸದಾಶಿವ  ವರದಿಗೆ ಮರುಜೀವ ನೀಡಿ ಅನ್ಯಾಯ ಮಾಡಲೂ ಹೊರಟಂತಿದೆ,  ಇದನ್ನು ಜಾರಿಗೆ ತರದೆ, ತಡೆಹಿಡಿಯಬೇಕು ಎಂದು ಬಂಜಾರ ಸಮುದಾಯದ ಮುಖಂಡ ರಾಮಣ್ಣ ನಾಯಕ್ ಹೇಳಿದರು.           

ಅವರು ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಸಾಮಾಜಿಕ ಅಸಮಾನತೆಯ ವಿರುದ್ಧ ದಶಕದಿಂದ ಸಮಾನತೆಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ಕೋರ್ಟ್ ಕುರಿತು ಸಮಗ್ರವಾಗಿ ಪರಿಶೀಲಿಸಿ ನ್ಯಾಯ ದೊರಕಿಸಲು ಮುಂದಾಗಿದೆ, ಆದರೆ, ಅಂದು ಆಡಳಿತದಲ್ಲಿದ್ದ ಬಿಜೆಪಿ ಸರ್ಕಾರ ಪುನ್ಹ :ಅನ್ಯಾಯ ಮಾಡಲು ಹೊರಟಿತ್ತು. ಹಿಂದುಳಿದ ಈ ಸಮುದಾಯ, ಮತ್ತೆ ನಿರಂತರ ಹೋರಾಟ ಮಾಡಿ, ಅಂತಿಮ ನಿರ್ಧಾರವಾಗಿ, ಬಿಜೆಪಿ ಆಡಳಿತಕ್ಕೆ ರಾಜ್ಯದಾದ್ಯಂತ  ಬಂಜಾರ ಸಮುದಾಯ ತಕ್ಕ ಪಾಠ ಕಲಿಸಿದೆ.ಇದೀಗ, ಆಡಳಿತಕ್ಕೆ ತಂದ  ಸಮುದಾಯವನ್ನು ಕಾಂಗ್ರೆಸ್ ಸರ್ಕಾರ ಸ್ಮರಿಸದೆ, ಆವೈಜ್ಞಾನಿಕವಾಗಿರುವ ಸದಾಶಿವ ಆಯೋಗದ  ವರದಿಯನ್ನು, ರಾಜಾರೋಷವಾಗಿ ಜಾರಿ ಮಾಡಲು ಹೊರಟಿದೆ. ಇದು ಅತ್ಯಂತ ಖಂಡನೆಯ ಎಂದರು. ಈ ವರದಿ ಜಾರಿಯಾದರೆ, ಸಮುದಾಯಕ್ಕೆರಾಜಕೀಯ,ಶೈಕ್ಷಣಿಕ, ಮತ್ತು ಆರ್ಥಿಕ  ಸಮಾನತೆಗೆ ಕಂಟಕವಾಗಲಿದೆ ಎಂದು ವಿಷಾದಿಸಿದ ಅವರು ಯಾವುದೇ ಕಾರಣಕ್ಕೂ ವರದಿಯನ್ನು ಜಾರಿಗೆ ತರಬಾರದು ಮತ್ತು ಈ ವಿಚಾರವಾಗಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ, ರಾಜ್ಯದ ಸಮುದಾಯ ಓಕ್ಕೂರಲ, ಧರಣಿ ಮತ್ತು ಪ್ರತಿಭಟನೆ, ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕ ಬಂಜಾರ (ಲಮಾಣಿ) ಸಮಾಜ ಹೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾನಪ್ಪ ಲಮಾಣಿ, ಉಪಾಧ್ಯಕ್ಷ ತೇಜಪ್ಪ ಲಮಾಣಿ, ಸಹ ಕಾರ್ಯದರ್ಶಿ ಭೀಮಣ್ಣ ನಾಯಕ್, ತಾಂಡ ರಕ್ಷಣಾ ವೇದಿಕೆ ಅಧ್ಯಕ್ಷ ಬೀರಪ್ಪ ಲಮಾಣಿ ಮತ್ತು ಸಮಾಜದ ಮುಖಂಡರಾದ, ಚಂದ್ರಪ್ಪ ಲಮಾಣಿ, ಕುಮಾರ್ ಲಮಾಣಿ, ರಾಮಣ್ಣ ಲಮಾಣಿ, ಆನಂದ್ ಲಮಾಣಿ, ರಾಘವೇಂದ್ರ ಲಮಾಣಿ, ಮಾಲತೇಶ ಲಮಾಣಿ, ಅಶೋಕ್ ಲಮಾಣಿ, ಭೀಮಪ್ಪ ನಾಯಕ್, ಸೇರಿದಂತೆ ಸಮಾಜ ಕ್ಷೇಮಾಭಿವೃದ್ಧಿ ಸಂಘದ, ಮುಖಂಡರು  ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರ 

ಸುದ್ದಿ ಓದಿ