ನೀರು ಶುದ್ಧಿಕರಿಸುವ ಘಟಕ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ: ಬಣಕಾರ
ರಾಣೇಬೆನ್ನೂರು 03: ತಾಲೂಕಿನಲ್ಲಿ 36 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಹಾಗೂ ಶುದ್ದಿಕರಿಸುವ ನೀರಿನ ಘಟಕ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷ ಚಂದ್ರ್ಪ ಬಣಕಾರ ಹೇಳಿದರು.
ತಾಲೂಕಿನ ಖಂಡೆರಾಯನಹಳ್ಳಿಯ ಹತ್ತಿರ ಇರುವ ಶುದ್ಧೀಕರಿಸುವ ಘಟಕದ ಮುಂದೆ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ, ಅವರು ತಾಲೂಕಿನ ಖಂಡೆರಾಯನಹಳ್ಳಿ ಪಕ್ಕದಲ್ಲಿರುವ ಡಬ್ಲ್ಯೂ ಟಿ ಪಿ ವಾಟರ್ ಟ್ಯಾಂಕ್ ಕ್ಲಿನ್ ಮಾಡದೆ ಹಾಗೆಯೇ ನೀರು ಹಳ್ಳಿಗಳಿಗೆ ಪೂರೈಸುತ್ತಿದ್ದಾರೆ. ಸರಿಯಾದ ಸಮಯಕ್ಕೆ ನೀರು ಪೂರೈಸದೆ ನಿರ್ಲಕ್ಷ ತೋರುತ್ತಿದ್ದಾರೆ. ನೀರು ಪೂರೈಸುವ ಮಿಷನ್ ಸರಿಯಾದ ಸಮಯಕ್ಕೆ ರಿಪೇರಿ ಮಾಡಿಸದೇ ಇರುವುದು. ಇಲ್ಲಿನ ಹಲವಾರು ರೀತಿಯ ಸಮಸ್ಯೆಗಳಿಗೆ ಕಾರಣವಾಗಿದೆ.ಅಧಿಕಾರಿಗಳ ನಿರ್ಲಕ್ಷತನದಿಂದಮತ್ತಷ್ಟು ಸಮಸ್ಯೆ ಉಲ್ಬಣವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಸರಿಯಾಗಿ ನಿರ್ವಹಣೆ ಮಾಡದ ಕಾರಣ ಇಲ್ಲಿನ ಅಧಿಕಾರಿಗಳನ್ನು ಕೂಡಲೇ ಸ್ಥಳಕ್ಕೆ ಕರೆಸಿ ಹುಲಿಕಟ್ಟಿ, ನದಿಹರಳಹಳ್ಳಿ, ವಡೆರಾಯನಹಳ್ಳಿ ಗ್ರಾಮಸ್ಥರು ಸೇರಿ ಗ್ರಾಮೀಣ ನೀರು ಪೂರೈಕೆ ಕಚೇರಿಯ ಇಂಜಿನಿಯರ್ ರಾಮಕೃಷ್ಣ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಆದರೆ ಪರಿಹಾರ ಮಾತ್ರ ಕಂಡಿಲ್ಲ. ಕೂಡಲೇ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಸಬೇಕು. ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಇದೆ ರೀತಿ ಸಮಸ್ಯೆ ಕಂಡು ಬಂದರೆ ಉಗ್ರ ಹೋರಾಟಕ್ಕೆ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾ ನಿರತರು ಅಧಿಕಾರಿಗಳಿಗೆ ಎಚ್ಚರಿಸಿದರು. ಮುಂಚೂಣಿಯಲ್ಲಿ ನದಿಹರಳಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜಪ್ಪ ಬಜಾರಿ, ಉಪಾಧ್ಯಕ್ಷರಾದ ಜಗದೀಶ್ ಕೊಟೆಗೌಡ್ರು, ಸದಸ್ಯರುಗಳಾದ ಬಸವರಾಜಪ್ಪ ಮೆಗಳಗೇರಿ, ಹನುಮಂತಪ್ಪ ಪವಾರ್, ಕರಿಯಪ್ಪ ಮಸಲವಾಡ, ಪರಶುರಾಮ್ ಭಟ್ಟಂಗಿ, ರಾಜಪ್ಪ ಬಣಕಾರ, ರುದ್ರಗೌಡ ಮುದಕನಗೌಡ್ರು, ಗ್ರಾಮದ ಸಾರ್ವಜನಿಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.