ಇಂಡಿ

ಪ್ರತಿಯೊಂದು ಜೀವಿಗೂ ಜೀವಿಸಲು ನೀರು ಬಹುಮುಖ್ಯ: ಜಿಗಜಿಣಗಿ

ಪ್ರತಿಯೊಂದು ಜೀವಿಗೂ ಜೀವಿಸಲು ನೀರು ಬಹುಮುಖ್ಯ: ಜಿಗಜಿಣಗಿ


ಇಂಡಿ11: ಪ್ರತಿಯೊಂದು ಜೀವಿಗೂ ಜೀವಿಸಲು ನೀರು ಬಹುಮುಖ್ಯ. ನೀರನ್ನು ಸಂರಕ್ಷಣೆ ಮಾಡುವದು ಎಲ್ಲರ ಕರ್ತವ್ಯ. ನೀರಿನ ಮೂಲಗಳಲ್ಲಿ ಒಂದಾದ ಹಂಜಗಿ ಕೆರೆ ಅಭಿವೃದ್ಧಿ ಮಾಡಿ ಇತರೆ 31 ಗ್ರಾಮಗಳಿಗೆ ಬಹು ಹಳ್ಳಿಗಳ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. 

 ಶುಕ್ರವಾರ ತಾಲೂಕಿನ ಹಂಜಗಿ ಕೆರೆಗೆ ಭೇಟಿ ನೀಡಿ ಅಲ್ಲಿನ ಪರಿಕರಗಳನ್ನು  ವೀಕ್ಷಣೆ ಮಾಡಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

ಪಸ್ತುತ ವರ್ಷ ಬೇಸಿಗೆಯಲ್ಲಿ 31 ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಅನುಕೂಲವಾಗಲು ಈಗಲೇ ನೀರು ಸಂಗ್ರಹಿಸಲಾಗುತ್ತಿದೆ ಎಂದರು.  

ಹಂಜಗಿ ಕೆರೆಗೆ ಇಂಡಿ ಬ್ರಾಂಚ್ ಮುಖ್ಯ ಕಾಲುವೆಯಿಂದ ನೀರನ್ನು ಸಂಗ್ರಹಿಸಲಾಗುತ್ತಿದೆ. 2013-14 ರಲ್ಲಿ ಮಂಜುರಾತಿ ಪಡೆದು 2017 ರಿಂದ ನೀರು ಪೂರೈಕೆ ಮಾಡಲಾಗುತ್ತಿದೆ. 25 ಗ್ರಾಮಗಳು ಮತ್ತು 7 ತಾಂಡಾಗಳಿಗೆ ನೀರು ಪೂರೈಸಲಾಗುತ್ತಿದೆ ಎಂದರು. 

ಜಲಮೂಲ ಇಂಡಿ ಶಾಖಾ ಕಾಲುವೆಯ 118.43 ಕಿ.ಮಿ ರಲ್ಲಿ ಹೆಡ್ ವರ್ಕ ನಿರ್ಮಿಸಿ 300 ಹೆಚ್‌.ಪಿ 90 ಮೀ ಹೆಡ್ 192.80 ಎಲ್‌.ಪಿ.ಎಸ್ ಸಾಮಥ್ಯದ 2 ಮೋಟಾರಗಳನ್ನು ಅಳವಡಿಸಿ ಕಾಲುವೆಯಿಂದ ಹಂಜಗಿ ಕೆರೆಗೆ 450 ಮೀ.ಮೀ ವ್ಯಾಸದ 12460 ಮೀ ಉದ್ದದ ಡಿ.ಆಯ್‌.ಪೈಪ್ ಕಚ್ಚಾ ನೀರು ಏರುಕೊಳುವೆ ಮಾರ್ಗ ಅಳವಡಿಸಿ ನೀರು ಹಂಜಗಿ ಕೆರೆಯ ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗುತ್ತಿದೆ ಎಂದರು. 

ಅದಲ್ಲದೆ ನೀರು ಸಂಗ್ರಹಾಲಯ, ಜಾಕ್ ವೆಲ್ ಹಂಜಗಿ ಕೆರೆಯ ಹತ್ತಿರ, ನೀರು ಶುದ್ಧೀಕರಣ ಘಟಕ, ಶುದ್ಧ ನೀರು ಸಂಗ್ರಹಾಲಯ, ಪಂಪಹೌಸ, ವಿತರಣಾ ಕೊಳವೆ ಮಾರ್ಗ, ಶುದ್ಧ ನೀರು ಸಂಗ್ರಹಣಾ ತೊಟ್ಟಿ ಮಾಡಲಾಗಿದೆ ಎಂದರು. 

ಜಿ.ಪಂ. ಇಂಡಿ ಎಇಇ ಆರ್‌.ಎಸ್‌. ರುದ್ರವಾಡಿ, ಸಹಾಯಕ ಅಭಿಯಂತರ ಎಲ್‌.ಟಿ. ರಾಠೋಡ, ನಿವೃತ್ತ ಇಇ ಎಸ್‌.ಜಿ. ಕಗ್ಗೊಡ್, ನಿವೃತ್ತ ಎಇಇ ಕೆ.ಎಸ್ ಇಲ್ಯಾಳ ಮತ್ತಿರಿದ್ದರು. 


ಸುದ್ದಿ ಓದಿ