ವಾಲ್ಹಿಬಾಲ್: ರಾಜ್ಯಮಟ್ಟಕ್ಕೆ ಆಯ್ಕೆ
ಕಾಗವಾಡ 25: ಶಾಲಾ ಶೈಕ್ಷಣಿಕ ಇಲಾಖೆ ಹಾವೇರಿ ಜಿಲ್ಲೆಯ ಚಳಗೇರಿ ಗ್ರಾಮದಲ್ಲಿ ಆಯೋಜಿಸಿದ ಇತ್ತೀಚೆಗೆ ಬೆಳಗಾವಿ ವಿಭಾಗ ಮಟ್ಟದ ವ್ಹಾಲಿಬಾಲ್ ಕ್ರೀಡಾ ಕೂಟದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಕೆಆರ್ಇಎಸ್ ಸಂಸ್ಥೆಯ ಅನುದಾನ ರಹಿತ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು. ಅದರಲ್ಲಿ 3 ವಿದ್ಯಾರ್ಥಿಗಳು ವಾಲ್ಹಿಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದಾರೆ. ಇವರಿಗೆ ದೈಹಿಕ ಶಿಕ್ಷಕ ಎಸ್.ಎಸ್.ಸನದಿ, ಜಿ.ಎಸ್ ಕುಡವಕ್ಕಲಿಗ, ಡಿ ಆರ್ ಕಟ್ಟಿಮನಿ ತರಬೇತಿ ನೀಡಿದರು. ಸಂಸ್ಥೆ ಚೇರಮನರಾದ ದಾದಾಗೌಡಾ ಪಾಟೀಲ, ಡಾ.ಮೋಹನ ಕಾರ್ಚಿ, ಸುರೇಶ ಗಾಣಿಗೇರ, ರಾಜೇಂದ್ರ ಪೋತದಾರ ಹಾಗೂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಪ್ರಧಾನ ಗುರುಗಳಾದ ಎಸ್ .ಎಂ ಬೆಳಕೂಡ ಅವರು ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.