ಜಿನುಗು ಕೆರೆಯಲ್ಲಿ ಹೂಳೆತ್ತುತ್ತಿರುವ ಕೂಲಿ ಕಾರ್ಮಿಕರು
ಇಂಡಿ 20: ಮಹಾಮಾರಿ ಕರೊನಾ ಅಟ್ಟಹಾಸಕ್ಕೆ ಜನಜೀವನ ತತ್ತರಗೊಂಡಿದ್ದು, ಗುಳೆ ಹೋಗಿ ಮರಳಿ ಗೂಡು ಸೇರಿ, ಉದ್ಯೋಗವಿಲ್ಲದೇ ಕಂಗಾಲಾದ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬಬಲಾದ ಗ್ರಾಮ ಪಂಚಾಯತ್ ಆಡಳಿಘ್ಪಿ ಮಂಡಳೀ ಮತ್ತು ಅಭಿವೃದ್ಧಿ ಅಧಿಕಾರಿ ಉದ್ಯೋಗ ನೀಡಿ ಬಡವರಿಗೆ ಆಶ್ರಯವಾಗಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜಿನುಗು ಕೆರೆ ಹೂಳೆತ್ತುವುದು, ಕೃಷಿ ಹೊಂಡ, ಬದು ನಿರ್ಮಾಣ, ಹಳ್ಳದ ಹೂಳೆತ್ತುವುದು, ಸೇರಿದಂತೆ ಅನೇಕ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದರಿಂದ ಕೂಲಿ ಕಾರ್ಮಿಕರಿಗೆ ದುಡಿಯಲು ಕೆಲಸ ಸಿಕ್ಕಿದ್ದು, ಗ್ರಾಮಾಭಿವೃಧ್ಧಿಯೂ ಅಷ್ಟೇ ವೇಗದಲ್ಲಿ ಆಗುತ್ತಿದೆ.
ಕೂಲಿ ಕಾರ್ಮಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೂಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರಲ್ಲದೇ ಸರ್ಕಾರದ ಯೋಜನೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತೀ ದಿನ 60 ಜನರಿಗೆ ಉದ್ಯೋಗ ನೀಡಲಾಗಿದೆ. ಅವರಿಂದ ಬಬಲಾದ ಜಿನುಗೆ ಕ್ವರೆಯಲ್ಲಿ ಹೂಳೆತ್ತುವ ಕಾಮಗಾರಿ ಮಾಡಿಸಲಾಗುತ್ತಿದೆ. ಕೂಲಿಕಾರ್ಮಿಕರಿಗೆ ಕೆಲಸವೂ ಸಿಗುತ್ತದೆ. ಕೆರೆಯೂ ಅಭಿವೃಧ್ಧಿಯಾಗುತ್ತದೆ ಎನ್ನುತ್ತಾರೆ.
ಬಬಲಾದ ಗ್ರಾ ಪಂ ಪಿಡಿಓ ಎಸ್.ಡಿ. ಬಿರಾದಾರ.