ಶಿಗ್ಗಾವ್

ಕಡಿಮೆ ಮತದಾನ ಆದ ಕೇಂದ್ರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಕಡಿಮೆ ಮತದಾನ ಆದ ಕೇಂದ್ರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ

ಶಿಗ್ಗಾವಿ 20: ತಾಲೂಕಿನ ತಡಸ ಗ್ರಾಮದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ಆದ ಕೇಂದ್ರ ಸಂಖೈ 6 ವ್ಯಾಪ್ತಿಯಲ್ಲಿ ಎಲ್ಲ ಎನ್‌ಆರ್‌ಎಲ್‌ಎಮ್ ಸಂಘಗಳ ಸದಸ್ಯನಿಯರಿಗೆ ಎಂಬಿಕೆ, ಎಲ್‌ಸಿಆರ್‌ಫಿ ಕೃಷಿ ಸಖಿಯರು, ಪಶು ಸಖಿಯರು ಮತ್ತು ಗ್ರಾಮದ ಎಲ್ಲ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ವಿಶೇಷ ಚೇತನ ಮತದಾರರಿಗೆ ಮತದಾನದ ಜಾಗೃತಿಯನ್ನು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಪಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಪಂಚಾಯತ ರಾಜ್ಯ ಸಹಾಯಕ ನಿರ್ದೇಶಕ ಪ್ರಕಾಶ ಓಂದಕರ ಸೇರಿದಂತೆ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ