ರಾಣೆಬೆನ್ನೂರ

ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ

ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರಮ

ರಾಣಿಬೆನ್ನೂರ 07:  ಪ್ರಜಾಪ್ರಭುತ್ವ ಹಬ್ಬ ಎಂದರೆ ಚುನಾವಣೆಯಾಗಿದ್ದು  ಮೇ 7 ರಂದು ತಪ್ಪದೆ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ಮೂಲಕ ಸಂವಿಧಾನ ನೀಡಿದ ನಮ್ಮ ಹಕ್ಕನ್ನು ಪಾಲಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಹೇಳಿದರು. 

ತಾಲೂಕಿನ ಮೆಡ್ಲೇರಿ ಗ್ರಾಮ ಪಂಚಾಯತಿ ಹಾಗೂ ತಾಲೂಕ ಸ್ವೀಪ್ ಸಮಿತಿಯ ವತಿಯಿಂದ ಗ್ರಾಮದ ದೊಡ್ಡ ಕೆರೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ನಡೆಯುತ್ತಿರುವ ಕಾಮಗಾರಿ ನಡೆಯುವ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ಮತದಾನ ಜಾಗೃತಿ ಕಾರ್ಯಕ್ರದಲ್ಲಿ ಅವರು ಮಾತನಾಡಿದರು. ನಿಮ್ಮ ಪವಿತ್ರವಾದ ಮತವನ್ನು ಯಾರಿಗೂ ಮಾರಿಕೊಳ್ಳಬೇಡಿ, ಆಶೆ, ಆಮಿಷಗಳಿಗೆ ಒಳಗಾಗಬೇಡಿ ನಿರ್ಭತಿಯಿಂದ ಮತ ಚಲಾಯಿಸಿ ಎಂದು ತಿಳಿಸಿದರು.  

ತಾಪಂ ಸಂಯೋಜಕ ಡಿ.ವಿ. ಅಂಗೂರ ಮತದಾನ ಕುರಿತು ಕೂಲಿ ಕಾರ್ಮಿಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ ಕಿಶೋರ್, ಪುಟ್ಟಪ್ಪ ಒಡೆಯರ, ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಉಸ್ಥಿತರಿದ್ದರು. 


ಸುದ್ದಿ ಓದಿ