ರಾಣೆಬೆನ್ನೂರ

ವಿವಿಧ ವಾರ್ಡಗಳಲ್ಲಿ ಮತದಾನ ಜಾಗೃತಿ ಜಾಥಾ

ವಿವಿಧ ವಾರ್ಡಗಳಲ್ಲಿ ಮತದಾನ ಜಾಗೃತಿ ಜಾಥಾ

ರಾಣಿಬೆನ್ನೂರ 12: ಮೇ. 7ರಂದು ನಡೆಯಲಿರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ನಗರಸಭೆ, ಸ್ವೀಪ್ ತಂಡ ಇವರುಗಳ ಸಹಯೋಗದಲ್ಲಿ ನಗರದ ವಿವಿಧ ವಾರ್ಡಗಳಲ್ಲಿ ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. 

ನಗರಸಭೆಯ ವ್ಯವಸ್ಥಾಪಕ ಮಂಜುನಾಥ ಮಾತನಾಡಿ, ಮೇ 07ರಂದು ಮತದಾನ ಕೇಂದ್ರಕ್ಕೆ ಆಗಮಿಸಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಲು ಮತದಾರರು ಮುಂದಾಗಬೇಕು ಎಂದರು.  ಇದೇ ಸಂದರ್ಭದಲ್ಲಿ ಅವರು ಪ್ರತಿಜ್ಞಾ ವಿಧಿ ಭೋದಿಸಿದರು.   ಕಂದಾಯ ಅಧಿಕಾರಿ ಪಿ ವಸಂತ, ಸುರೇಶ ಚಲವಾದಿ, ರಮೇಶ ತಿರುಕಪ್ಪನವರ, ಪ್ರಭುದೇವ ಬಾಲೆಹೊಸೂರು, ಮಾಧವ ಸಾತೇನಹಳ್ಳಿ, ಮಾರುತಿ ಪಾಟೀಲ, ಅಬ್ದುಲ್ ಗಫಾರ್, ಏಳುಕೋಟೆಪ್ಪ ಗೋಣಿಬಸಮ್ಮನವರ, ಗಣೇಶ ಪಾಸೀಗಾರ ಮತ್ತಿತರರು ಇರಿದ್ದರು. 


ಸುದ್ದಿ ಓದಿ