ಕಮೀಷನ್ ಸರಕಾರಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ: ಐವಾನ್ ಡಿಸೋಜಾ
ಕಾಗವಾಡ 30: ಡಿ.10 ರಂದು ಜರುಗಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಯವರು ಪ್ರಥಮ ಪ್ರಾಶಸ್ತದ ಮತಗಳನ್ನು ಪಡೆಯುವ ಮೂಲಕ ಜಯಭೇರಿ ಸಾಧಿಸಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿಗಳು ಹಾಗೂ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪಕ್ಷದ ನೀರೀಕ್ಷಕ ಐವಾನ ಡಿಸೋಜಾ ಹೇಳಿದರು.
ಅವರು ಮಂಗಳವಾರ ದಿ30 ರಂದು ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದ ಮಾಜಿ ಶಾಸಕ ರಾಜು ಕಾಗೆಯವರ ನಿವಾಸಕ್ಕೆ ಭೇಟ್ಟಿ ನೀಡಿ ಪಕ್ಷದ ಪ್ರಮುಖರ ಜೊತೆ ಚುನಾವಣೆಯ ವಿಷಯ ಕುರಿತು ಒಂದು ಗಂಟೆಗಳ ಕಾಲ ಚರ್ಚಿಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದರು.
ಬೊಮ್ಮಾಯಿ ಸರ್ಕಾರದಲ್ಲಿ ನೇರವಾಗಿ ಲೊಕೋಪಯೋಗಿ, ಇನ್ನಿತ ಇಲಾಖೆಗಳಲ್ಲಿ ಬಂದಿರುವ ಅನುದಾನದಲ್ಲಿ ಶೇ40 ರಷ್ಟುಕಮಿಷನ್ ಕೇಳುತ್ತಿದ್ದಾರೆ. ಈ ಕುರಿತು ಗುತ್ತಿಗೇದಾರರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕಮಿಷನ್ ಹಾವಳಿಯಿಂದ ನಮ್ಮನ್ನು ಬಚಾವ್ ಮಾಡಿರಿ ಎಂದು ಕೇಳಿಕೊಂಡಿದ್ದಾರೆ. ಇಂಥ ಭ್ರಷ್ಟ ಸರ್ಕಾರದಿಂದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಚುನಾವಣೆ ಮುಂಬರುವ 2023 ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಲಿದೆ. ಗ್ರಾಮ ಪಂಚಾಯತಿಗಳು ಸದೃಢವಾಗಬೇಕಾದರೆ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿರಿ. ಚನ್ನರಾಜ ಹಟ್ಟಿಹೊಳಿಯವರನ್ನು ಗೆಲ್ಲಿಸಿರಿ ಎಂದು ಮನವಿ ಮಾಡಿದರು.
ದಿನಾಂಕ 5 ರಂದು ಚಿಕ್ಕೋಡಿಯಲ್ಲಿ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಆಗಮಿಸಲಿದ್ದಾರೆ ಎಂದರು.
ಮಾಜಿ ಶಾಸಕ ರಾಜು ಕಾಗೆ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ನಸಲಾಪುರೆ, ಬ್ಲಾಕ್ ಅಧ್ಯಕ್ಷರಾದ ವಿಜಯಕುಮಾರ ಅಕಿವಾಟೆ, ಓಂಪ್ರಕಾಶ ಪಾಟೀಲ, ಚಂದ್ರಕಾಂತ ಇಮ್ಮಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಾ ಸಲೀಮ್ ಕಾಶೀಮನವರ, ಗಜಾನನ ಯರಂಡೋಲಿಕುಮಾರ ಪಾಟೀಲ ಸೇರಿದಂತೆ ಅನೇಕರು ಇದ್ದರು.