ಇಂಡಿ

ವಿವೇಕಾನಂದರು ರಾಷ್ಟ್ರ ನಿರ್ಮಾಣದ ಯುವಕರ ಶಕ್ತಿಯಾಗಿದ್ದಾರೆ: ಬಂಡೆ

ವಿವೇಕಾನಂದರು ರಾಷ್ಟ್ರ ನಿರ್ಮಾಣದ ಯುವಕರ ಶಕ್ತಿಯಾಗಿದ್ದಾರೆ: ಬಂಡೆ

ಇಂಡಿ: ಯುವ ಜನತೆ ರಾಷ್ಟ್ರದ ರಚನಾತ್ಮಕ ಮತ್ತು ಕ್ರಿಯಾತ್ಮಕ ಚೌಕಟ್ಟಾಗಿದ್ದು, ಪ್ರತಿ ರಾಷ್ಟ್ರದ ಯಶಸ್ಸಿನ ಆಧಾರವೇ ಯುವ ಪೀಳಿಗೆಯಾಗಿದ್ದು, ಅವರ ಸವಾರ್ಂಗೀಣ ಅಭಿವೃದ್ಧಿಯಲ್ಲಿ ದೇಶದ ಭವಿಷ್ಯವಿದೆ. ವಿವೇಕಾನಂದರು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯುವಕರ ಶಕ್ತಿಯಾಗಿದ್ದಾರೆ ಎಂದು ಕರ್ನಾ ಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದಶರ್ಿ ಸಂತೋಷ ಬಂಡೆ ಹೇಳಿದರು.

ಶುಕ್ರವಾರ ತಾಲೂಕಿನ ಮಣೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿವೇಕಾನಂದರ ಜೀವನ ಮತ್ತು ಬೋಧನೆಗಳು ಯುವ ಮನಸ್ಸುಗಳಿಗೆ ಸ್ಫೂರ್ತಿ  ನೀಡುವ ಉತ್ತಮ ಮೂಲವಾಗಿವೆ. ಜಗತ್ತನ್ನು ಗೆಲ್ಲುವ ಅತ್ಯುತ್ತಮ ಅಸ್ತ್ರ ಶಾಂತಿ ಮತ್ತು ಶಿಕ್ಷಣ ಎಂದು ನಂಬಿದ್ದ ಅವರ ವಿಚಾರಗಳು ರಾಷ್ಟ್ರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಹೇಳಿದರು.

ಶಾಲಾ ಮುಖ್ಯ ಗುರು ಸುರೇಶ ಕೋರಚಗಾಂವ ಮಾತನಾಡಿ, ಸದಾ ಸಕಾರಾತ್ಮಕ ಚಿಂತನೆಗಳಿಂದ ಯುವಕರನ್ನು ಪ್ರೇರೇಪಿಸುತ್ತಿದ್ದ ಸ್ವಾಮೀಜಿ ತಾವು ಹೋದಲೆಲ್ಲಾ ಶಿಕ್ಷಣದ ಬಗ್ಗೆ ಒತ್ತಿ ಹೇಳುತ್ತಿದ್ದರು. ದೈಹಿಕ ಶಿಕ್ಷಣ, ಮಾನಸಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ, ಮಹಿಳಾ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣದ ಬಗ್ಗೆ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

ಹಾಲಪ್ಪ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಕರಾದ ವಿಜಯಲಕ್ಷ್ಮಿ ಬಂಡೆಪ್ಪ, ಭಾಗೀರತಿ ಬಿರಾದಾರ, ಕಲಾವತಿ ಕೊಳಲಗಿ, ಶ್ರೀಶೈಲ ಸನದಿ, ಅಲ್ಲಾಭಕ್ಷ ಚೌಧರಿ, ಸಲೀಂ ಜಮಾದಾರ, ಮರೆಪ್ಪ ಸಿಂಧೆ, ಶೈಲಾ ಹೆಚ್, ಸುಮಲತಾ ಕುಂಬಾರ, ದತ್ತಪ್ಪ ಡೊಂಬಳೆ, ಚನ್ನನಗೌಡ ಮಾಲಿಪಾಟೀಲ, ವಿಜಯಲಕ್ಷ್ಮಿ ಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಮಕ್ಕಳು ವಿವೇಕಾನಂದರ ಕುರಿತು ಮಾತನಾಡಿದರು.


ಸುದ್ದಿ ಓದಿ