ವಿವೇಕಾನಂದರ ವ್ಯಕ್ತಿತ್ವ ಮೇರು ಪರ್ವತ : ದೇವಾಂಗಮಠ
ಗುಳೇದಗುಡ್ಡ 12: ದೇಶ ಪ್ರೇಮ, ಆತ್ಮವಿಶ್ವಾಸ, ಗುರಿ ಸಾಧಿಸುವ ಛಲ ಇವುಗಳ ಸಮಗ್ರ ಸ್ವರೂಪವೇ ಆಗಿರುವ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವ ಮೇರು ಪರ್ವತವಿದ್ದಂತೆ ಎಂದು ಕಲಾವಿದ ವಿವೇಕನಂದ ದೇವಾಂಗಮಠ ಹೇಳಿದರು.
ಸ್ಥಳೀಯ ಪಿ.ಇ.ಟಿ.ಯರಾಠಿ ಮತ್ತು ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕನಂದರ 159ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸ್ವಾಮಿ ವಿವೇಕಾನಂದರು ಭಾರತಕ್ಕಷ್ಟೇ ಅಲ್ಲ, ಇಡೀ ವಿಶ್ವಕ್ಕೆ ದಾರಿ ದೀಪವಾಗಿದ್ದಾರೆ. ಯುವ ಜನಾಂಗಕ್ಕೆ ಅವರು ಪ್ರೇರಣಾ ಶಕ್ತಿ ಇದ್ದಂತೆ. ಸ್ವಯಂ ಬಲವೇ ದೇವರು, ಸ್ವತಃ ಮನವೇ ದೇವರು ಮತ್ತು ಪ್ರತಿ ಹೆಣ್ಣಿನಲ್ಲಿ ತಾಯಿಯ ಸ್ವರೂಪವನ್ನು ಕಾಣಬೇಕೆಂದು ಅವರ ದೇಶಪ್ರೇಮ, ಮಾತೃಪ್ರೇಮವನ್ನು ಜಗತ್ತೇ ಸ್ಮರಿಸುತ್ತದೆ. ಅವರ ಬದುಕಿನ ದಾರಿ ಯುವಜನಾಂಗಕ್ಕೆ ಮಾದರಿಯಾಗಿದೆ. ಅವರ ಸಂದೇಶಗಳನ್ನು ಯುವಕರು ಅರಿಯುಕೊಂಡು ತಮ್ಮ ಭವ್ಯ ಬದುಕನ್ನು ರೂಪಿಸಿಕೊಳ್ಳುವುದರ ಜೊತೆಗೆ ದೇಶದಲ್ಲಿ ಸಹೋದರತ್ವವವನ್ನು ಜಾಗೃತಗೊಳಿಸಬೇಕೆಂದರು.
ಚೇರಮನ್ ಅಶೋಕ ಎನ್. ಹೆಗಡಿ ಇವರ ಅಧ್ಯಕ್ಷತೆವಹಿಸಿ ಮಾತನಾಡಿದರು. ಶಿಕ್ಷಕ ಬಿ. ನರಸಲಗಿ ಹಾಗೂ ವಿದ್ಯಾರ್ಥಿನಿ ಭುವನೇಶ್ವರಿ ತಾಂಡೂರ ಸ್ವಾಮಿ ವಿವೇಕನಂದರ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಮಾತೆಯರಾದ ಜೆ.ಜೆ.ಲೋಬೋ ಹಾಗೂ ವಿ.ಬಿ.ಹಳ್ಳೂರ, ಶಾಲೆಯ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು. ವೈಶಾಲಿ ಮನ್ನುರ ಸ್ವಾಗತಿಸಿ ವಂದಿಸಿದರು.