ನಗರಸಭೆಗೆ ಭೇಟಿ ನೀಡಿ ದೂರುಗಳ ಬಗ್ಗೆ ಪರೀಶೀಲನೆ
ರಾಣಿಬೆನ್ನೂರ:-30 ಸಾರ್ವಜನಿಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಡಾ.ಬಿ.ಪಿ.ಚಂದ್ರಶೇಖರ ಹಾಗೂ ಅವರ ತಂಡ ಶನಿವಾರ ಇಲ್ಲಿನ ನಗರಸಭೆಗೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿ ದೂರುಗಳ ಬಗ್ಗೆ ಪರೀಶೀಲನೆ ನಡೆಸಿದರು.
ನಂತರ ಲೋಕಾಯುಕ್ತ ಡಿವೈಎಸ್ಪಿ ಡಾ.ಬಿ.ಪಿ. ಚಂದ್ರಶೇಖರ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿನ ನಗರಸಭೆ ದುರಾಡಳಿತದ ಬಗ್ಗೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದರಿಂದ ಇಂದು ಬೇಟಿ ನೀಡಿ ಪರಶೀಲನೆ ನಡೆಸುತ್ತಿದ್ದೇವೆ. ಇಂದು 22 ಜನ ಪೌರ ಕಾರ್ಮಿಕರು ಗೈರು ಹಾಜರಿ ಹಾಕುವುದು ಮತ್ತು 6 ಜನ ಅಧಿಕಾರಿಗಳು ಕರ್ತವ್ಯದಲ್ಲಿರದೇ ಇರುವ ಬಗ್ಗೆ ಪರಶೀಲಿಸಿ ಅವರೆಲ್ಲರಿಗೂ ನೋಟಿಸ್ ನೀಡಲು ಪ್ರಭಾರಿ ಪೌರಾಯುಕ್ತ ಮಹೇಶ ಕಲಾಲ ಅವರಿಗೆ ಸೂಚಿಸಲಾಗಿದೆ ಎಂದರು.
ಪ್ರತಿ ದಿನ ಅಧಿಕಾರಿಗಳ ಮತ್ತು ಪೌರ ಕಾರ್ಮಿಕರ ಹಾಜರಾತಿಯನ್ನು ಪಡೆಯಬೇಕು. ನಗರಸಭೆಯ ಸೇವಾ ಶುಲ್ಕಗಳ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಬೋರ್ಡ್ ಹಾಕಬೇಕು. ಪ್ರತಿಯೊಬ್ಬ ಅಧಿಕಾರಿಗಳು ಐಡಿ ಕಾರ್ಡ ಹಾಕಿಕೊಳ್ಳಬೇಕು. ಕ್ಯಾಸ್ ಟ್ರ್ಯಾಜೆಂಕ್ಸನ್ ರೆಸಿಸ್ಟರ್ ನಿರ್ವಹಣೆ, ಸಕಾಲದಲ್ಲಿನ ಅರ್ಜಿಗಳನ್ನು ಪೂರ್ಣಗೊಳಿಸುವುದು. ಅರ್ಜಿಗಳನ್ನು ವಿಲೇ ಮಾಡುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಡಿವೈಡರ್ ರಸ್ತೆಯಲ್ಲಿನ ಗಿಡಮರಗಳನ್ನು ಕಟ್ಟ ಮಾಡುವು ಬಗ್ಗೆ ಎಚ್ಚರಿಕೆ ನೀಡಿದರು.
ಜನನ ಮರಣ ನೊಂದಣಿ, ಕಂದಾಯ, ಪರಿಸರ ವಿಭಾಗ, ಎಂಜಿನಿಯರಿಂಗ್ ವಿಭಾಗ, 24/7 ಕುಡಿಯುವ ನೀರಿನ ಯೋಜನೆ, ಹೆಲ್ತ ಸೆಕ್ಸನ್ ಸೇರಿದಂತೆ ಗಂಗಾಪುರ ರಸ್ತೆಯ ಹುಲ್ಲತ್ತಿ ಬಳಿ ಇರುವ ಘನ ತ್ಯಾಜ್ಯ ನಿರ್ಹವಣೆ ಘಟಕಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ್ದೇವೆ. ಮುಂದಿನ ವಾರ ಮತ್ತೆ ಪರೀಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.
ಲೊಕಾಯುಕ್ತ ಪಿಎಸ್ಐ ಮಸ್ತಾಕ ಅಹ್ಮದ ಮತ್ತು ಆಂಜನೇಯ ಎನ್.ಎಚ್, ನಗರ ಠಾಣೆ ಪಿಎಸ್ಐ ಗಡ್ಡೆಪ್ಪ ಗುಂಜಟಗಿ, ಪ್ರಭಾರಿ ಪೌರಾಯುಕ್ತ ಮಹೇಶ ಕಲಾಲ, ಪರಿಸರ ಎಂಜಿನಿಯರ್ ಮಹೇಶ ಕೋಡಬಾಳ ಇದ್ದರು.