ಶಿಗ್ಗಾವ್

ಜಗತ್ತು ಸುಂದರಗೊಳ್ಳಲು ವಿಶ್ವಕರ್ಮ ಸಮುದಾಯದ ಪಾತ್ರ ಬಹಳ : ಸಂತೋಷ ಹಿರೇಮಠ

ಜಗತ್ತು ಸುಂದರಗೊಳ್ಳಲು ವಿಶ್ವಕರ್ಮ ಸಮುದಾಯದ ಪಾತ್ರ ಬಹಳ : ಸಂತೋಷ ಹಿರೇಮಠ

ಶಿಗ್ಗಾವಿ 18: ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಶ್ವಕರ್ಮ ಸಮಾಜದವರು ಮತ್ತು ವಿವಿಧ ಸಮಾಜದ ಮುಖಂಡರ ಜೊತೆ ರವಿವಾರ ಆಚರಿಸಲಾಯಿತು. 

ಪೂಜೆ ಸಲ್ಲಿಸಿ ಮಾತನಾಡಿದ ತಹಶೀಲ್ದಾರ ಸಂತೋಷ ಹಿರೇಮಠ ಅವರು ಜಗತ್ತು ಸುಂದರಗೊಳ್ಳಲು ವಿಶ್ವಕರ್ಮ ಸಮುದಾಯದವರ ಪಾತ್ರ ಬಹಳಷ್ಟಿದೆ ಜಯಂತಿಯ ಸಂದೇಶವನ್ನು ಸಮುದಾಯದವರು ಮತ್ತು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದರು.  

 ಈ ಸಂದರ್ಭದಲ್ಲಿ ತಾಲೂಕಾ ಬಿ.ಜೆ.ಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿ ಮಾತನಾಡಿದರು. ವಿಶ್ವಕರ್ಮ ಸಮಾಜದ ತಾಲೂಕಾದ್ಯಕ್ಷ ಕಾಳಪ್ಪ ಬಡಿಗೇರ. ಶಂಕರ ಅರ್ಕಸಾಲಿ, ಎಮ್‌.ಆರ್‌. ಸಂಶಿ, ಎಮ್‌.ಆರ್ ಕಮ್ಮಾರ, ಬಿ.ವಿ ಬಡಿಗೇರ, ಪಿ.ಆಯ್ ಬಡಿಗೇರ, ಸಂತೋಷಿಮಾತಾ ಬಡಿಗೇರ, ಶಿವರುದ್ರ​‍್ಪ ಕಮ್ಮಾರ, ನವೀನ ಹಾವನೂರ, ಸೋಮಶೇಖರ ಬಡಿಗೇರ, ವೀರಣ್ಣ, ಡಾಽಽ ಮಲ್ಲೇಶಪ್ಪ ಹರಿಜನ, ಹರ್ಜಪ್ಪ ಲಮಾಣಿ, ಮಜೀದ ಮಾಳಗಿಮನಿ, ಫಕ್ಕೀರ​‍್ಪ ಕುಂದೂರ, ಬಸವರಾಜ ಕಟ್ಟಿಮನಿ,  ಸೇರಿದಂತೆ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ