ರಾಣೆಬೆನ್ನೂರ

ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ದಿನಾಚರಣೆ

ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವಕರ್ಮ ದಿನಾಚರಣೆ

ರಾಣೆಬೆನ್ನೂರು 21: ವಿಶ್ವಕರ್ಮರು ಪ್ರಾಚೀನ ಕಾಲದಿಂದ ಇಂದಿನವರೆಗೂ ಜನಜೀವನಕ್ಕೆ ಅವಶ್ಯಕರಾಗಿದ್ದಾರೆ. ಅವರ ಆದರ್ಶಗಳನ್ನು , ಕೌಶಲ್ಯಗಳನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕು ಎಂದು ಹಿರಿಯ ಪತ್ರಕರ್ತ ರಾಮಕೃಷ್ಣ ತಾಂಬೆ ಹೇಳಿದರು. 

ಮಾರುತಿನಗರ ದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ 17ರಲ್ಲಿ “ವಿಶ್ವಕರ್ಮ ದಿನಾಚರಣೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಶಿಕ್ಷಕ ಆರ್ ಬಿ ಚಲವಾದಿ ವಿಶ್ವಕರ್ಮರ ಕುರಿತು ಮಾತನಾಡಿದರು.ಮುಖ್ಯೋಪಾಧ್ಯಾಯರಾದ ಬಿ ಪಿ ಶಿಡೇನೂರ ಅವರ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಮಾರಂಭದಲ್ಲಿ ಕರಬಸಮ್ಮ ಮ್ಯಾಗೇರಿ , ವನಜಾಕ್ಷಿ ಪಾಟೀಲ , ಶ್ವೇತಾ ಎಚ್ ವ್ಹಿ , ಆನಂದ ಚಿನ್ನಿ ಕಟ್ಟಿ , ಕಮಲಮ್ಮ, ಶೋಭಕ್ಕ ಸೇರಿದಂತೆ ಶಾಲಾ ಮಕ್ಕಳು ಅಡುಗೆ ಸಿಬ್ಬಂದಿ ಮುಂತಾದವರು ಭಾಗವಹಿಸಿದ್ದರು, ಶಿಕ್ಷಕಿ ಪ್ರತಿಭಾ ಮೈಲಾರಕಳ್ಳಿಮಠ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ