ರಾಣೆಬೆನ್ನೂರ

ಅಭಿಮಾನಿಗಳಿಂದ ವಿರಾಟ್ ಕೊಹ್ಲಿ ಹುಟ್ಟುಹಬ್ಬ ಆಚರಣೆ

ಅಭಿಮಾನಿಗಳಿಂದ ವಿರಾಟ್ ಕೊಹ್ಲಿ ಹುಟ್ಟುಹಬ್ಬ ಆಚರಣೆ

ರಾಣೇಬೆನ್ನೂರು07: ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ 37ನೇ ಪಂದ್ಯವು ಈಡನ್ ನಡೆಯಿತು. ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಿ ಭರ್ಜರಿ ಗೆಲುವು ಸಾಧಿಸಿತು. ವಿಶೇಷವೆಂದರೆ, ನವಂಬರ್ 5ರಂದು ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಅವರ 35ನೇ ಹುಟ್ಟುಹಬ್ಬದ ದಿನವಾಗಿತ್ತು. ಜೊತೆ ದಕ್ಷಿಣ ಆಫ್ರಿಕಾದ ವಿರುದ್ಧ ಶತಕ ಬಾರಿಸಿದ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳಿಂದ ಹುಟ್ಟು ಹಬ್ಬದ ಮಹಾಪೂರವೇ ಹರಿದು ಬಂದಿತ್ತು. ಹಾಗಾಗಿ ರಾಣೆಬೆನ್ನೂರು ತಾಲೂಕಿನ ಹುಲಿಕಟ್ಟಿ ಗ್ರಾಮದ ವಿರಾಟ್ ಕೊಹ್ಲಿ ಅಭಿಮಾನಿಗಳು ಕ್ರಿಕೆಟ್ ಲೋಕದ ರಾಜ್ಯನಿಗೆ ಹುಟ್ಟುಹಬ್ಬದ ಆರ್ಥಿಕ ಶುಭಾಶಯಗಳು ಎಂಬ ಬ್ಯಾನರ್ ಮಾಡಿಸಿ ಗ್ರಾಮದ ಸರ್ಕಲ್ ನಲ್ಲಿ ಕೇಕ್ ಕತ್ತರಿಸಿ ವಿರಾಟ್ ಕೊಹ್ಲಿ 35ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು. ಇದೇ ವೇಳೆ ಗ್ರಾಮದ ಮುಖಂಡರು ವಿರಾಟ್ ಕೊಹ್ಲಿ ಅಭಿಮಾನಿಗಳು ಹಾಗೂ ಹಿರಿಯ ಮುಖಂಡರು ಭಾಗವಹಿಸಿದ್ದರು. 


ಸುದ್ದಿ ಓದಿ