ಹೌಸಿಂಗ್ ಬೋರ್ಡ್ ಬಾಲಚಂದ್ರ ಗಜಾನನೋತ್ಸವ ಸಮಿತಿ: ವಿರಾಜಮಾನ ಗಣಪತಿ
ರಾಣೇಬೆನ್ನೂರು 20: ವಾಣಿಜ್ಯ ನಗರದ ಮೆಡ್ಲೇರಿ ರಸ್ತೆಯ , ವಿನಾಯಕ ನಗರದ ಕೆ. ಹೆಚ್. ಬಿ. ಕಾಲೋನಿಯ ಶ್ರೀ ಬಾಲಚಂದ್ರ ಗಜಾನನ ಉತ್ಸವ ಸಮಿತಿಯು ತನ್ನ 20 ನೇ ವಾರ್ಷಿಕೋತ್ಸವದಲ್ಲಿ"" ವಿರಾಜಮಾನ "" ವಿಶೇಷ ಗಣಪನನ್ನು ಪ್ರತಿಷ್ಠಾಪಿಸಿದ್ದು, ಸಾರ್ವಜನಿಕರನ್ನು ಆಕರ್ಷಿಸುತ್ತಲ್ಲಿದೆ. ಸೋಮವಾರ ಮುಂಜಾನೆ ಹನಗೋಡಿಯವರ ಓಣಿ ಇಂದ ಹೊರಟ ಭವ್ಯ ಮೆರವಣಿಗೆಯು, ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ನಿರ್ಮಿಸಿರುವ ಮಹಾ ಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು. ಮುಂಚೂಣಿಯಲ್ಲಿ, ಅಧ್ಯಕ್ಷ ಚಂದ್ರು ಕುಂದಾಪುರ, ಉಪಾಧ್ಯಕ್ಷ ರಾಜು ಚಳಗೇರಿ, ಖಜಾಂಚಿ ರಾಘು ಕದರಮಂಡಲಗಿ, ಕಾರ್ಯದರ್ಶಿ ಗುರುರಾಜ ಅಂತರವಳ್ಳಿ, ಸದಸ್ಯರಾದ, ರುದ್ರೇಶ ಕುಳೇನೂರ, ಶಿವಯೋಗಿ ಹಳ್ಳಳ್ಳಿ, ರಾಜೇಶ್ ಪೋಳ್, ತುಳಜಾಸಾ ಲದ್ವಾ, ಅಶೋಕ ಕಾಕೋಳ, ನಾಗರಾಜ್ ಮುಳ್ಳಕೊಪ್ಪದ, ಅಶೋಕ ಸೊಂಟೇರ, ಇಷ್ಟಲಿಂಗಪ್ಪ ಕುಬಸದ, ತುಕಾರಾಂ ಮಾಳೋದೆ, ಸೇರಿದಂತೆ ಮತ್ತಿತರ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.