ನಟಿ ಕಂಗನಾಗೆ ಜೀವ ಬೆದರಿಕೆ, ಕೇಂದ್ರದಿಂದ ವೈಪ್ಲಸ್ ಶ್ರೇಣಿ ಭದ್ರತೆ
ಮುಂಬೈ, ಸೆಪ್ಟೆಂಬರ್ 7: ಬಾಲಿವುಡ್ ನಟಿ ಕಂಗನಾಗೆ ಜೀವ ಬೆದರಿಕೆ ಬಂದಿರುವ ಹಿನ್ನಲೆಯಲ್ಲಿ ಕೇಂದ್ರ ಅವರಿಗೆ ''ವೈಪ್ಲಸ್ ಶ್ರೇಣಿ ಭದ್ರತಾ ವ್ಯವಸ್ಥೆ ಒದಗಿಸಿದೆ.
ನಟಿ ಕಂಗನಾ ರನೌತ್ ಅವರು ಮುಂಬೈ ಒಂದು ರೀತಿ ಪಾಕ್ ಆಕ್ರಮಿತ ಕಾಶ್ಮೀರವಾಗಿಬಿಟ್ಟಿದೆ ಎಂದು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಸಂಜಯ್ ಅವರು ಅಹಮಹಾಬಾದ್ ಕೂಡಾ ಮಿನಿ ಪಾಕಿಸ್ತಾನದಂತಿದೆ ಎಂದಿದ್ದರು.
ಇವರಿಬ್ಬರ ನಡುವಿನ ವಾಕ್ಸಮರ ಮುಂದುವರೆದಿರುವ ಸಂದರ್ಭದಲ್ಲೇ ಅವರಿಗೆ ಭದ್ರತಾ ವ್ಯವಸ್ಥೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ಕಂಗನಾ ಹಿಮಾಚಲ ಪ್ರದೇಶದ ಮಗಳು ಮತ್ತು ಸೆಲೆಬ್ರಿಟಿ ಕೂಡ ಹೌದು. ಅವರಿಗೆ ಭದ್ರತೆ ನೀಡುವುದು ನಮ್ಮ ಕರ್ತವ್ಯ. ಆ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ತಿಳಿಸಿದ್ದೇನೆ ಎಂದೂ ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಭರವಸೆ ನೀಡಿದ್ದಾರೆ.