ಇಂಡಿ

ಸಂಸದ ರಮೇಶ ಜಿಗಜಿಣಗಿಯವರಿಗೆ ಗ್ರಾಮಸ್ಥರಿಂದ ಸನ್ಮಾನ

ಸಂಸದ ರಮೇಶ ಜಿಗಜಿಣಗಿಯವರಿಗೆ ಗ್ರಾಮಸ್ಥರಿಂದ ಸನ್ಮಾನ

ಇಂಡಿ: ಸರಕಾರದ ಮೇಲೆ ಒತ್ತಡ ಹೇರಿ ತಾಲೂಕಿನ ವಿವಿಧ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಿದ್ದರಿಂದ ವಿವಿಧ ಗ್ರಾಮಗಳ ರೈತರು ಸಂಸದ ರಮೇಶ ಜಿಗಜಿಣಗಿ ಅವರಿಗೆ ಇತ್ತೀಚೆಗೆ ಅಥರ್ಗಾ ಗ್ರಾಮದಲ್ಲಿ ಸನ್ಮಾನಿಸಿದರು. 

ಸನ್ಮಾನ ಸ್ವೀಕರಿಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕೋಟ್ನಾಳ, ಕ್ಯಾತನಕೇರಿ, ಲಿಂಗದಳ್ಳಿ,  ಅಥರ್ಗಾ, ರಾಜನಾಳ, ಬೋಳೆಗಾಂವ್, ಹಂಜಗಿ, ನಿಂಬಾಳ, ತಡವಲಗಾ ಮುಂತಾದ ಗ್ರಾಮಗಳಿಗೆ ಜನ ಜಾನುವಾರುಗಳು ಸೇರಿದಂತೆ ಕುಡಿಯುವ ನೀರಿನ ಸಮಸ್ಯಯಿಂದ ಸಾಕಷ್ಟು ಈ ಭಾಗದ ರೈತಾಪಿ ವರ್ಗ ತೊಂದರೆ ಅನುಭವಿಸುತ್ತಿದ್ದರು. ಕೆರೆಗಳು ತುಂಬಿರುವುದರಿಂದ ಸಂತಸ ತಂದಿದೆ ಎಂದರು. 

ರೈತರ ಬಾಳು ಸುಖ ಸಮೃದ್ದಿಯಾಗಲಿ ಎಂದು ತಾಲೂಕಿನ ವಿವಿಧ ಗ್ರಾಮಗಳಿಗೆ ಕರೆ ತುಂಬುವ ಯೋಜನೆಗೆ 110 ಕೋಟಿ ರೂ ಖರ್ಚು ಮಾಡಿ ಕೆರೆಗಳನ್ನು ತುಂಬಿಸಲಾಗಿದೆ. ಕೆರೆಗಳು ತುಂಬಿಸುವದರಿಂದ ಭೂಮಿಯಲ್ಲಿ ನೀರು ಅಂರ್ಜಲಮಟ್ಟ ಹೆಚ್ಚಾಗಿ ರೈತರ ಬೋರವೇಲ್‌ಗಳು, ತೆರೆದ ಭಾವಿಗಳು ತುಂಬುತ್ತವೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು. 

ನನ್ನ ಸುಧಿರ್ಘ ರಾಜಕೀಯ ಜೀವನದಲ್ಲಿ ವಿಜಯಪೂರ ಜಿಲ್ಲೆಗೆ ಸಾಕಷ್ಟು ಯೋಜನೆಗಳನ್ನು ತಂದು ಲೋಕಾರೆ​‍್ಣಗೊಳಿಸಿರುವೆ. ಆದರೆ ಎಲ್ಲಿಯೂ ಗುದ್ದಲಿ ಪೂಜೆ, ಭೂಮಿಪೂಜೆ ಎಂದು ಹೋಗಿಲ್ಲ. ಹೇಳಿಕೊಂಡಿಲ್ಲ. ಜನ ಸೇವಕನಾಗಿ ದುಡಿದಿರುವೆ  ಎಂದರು.  

ಪ್ರವೀಣ ಮೇತ್ರಿ, ಭೀಮು ಸಾಹುಕಾರ ಚವಡಿಹಾಳ, ಕಾಂತು ಸಾಹುಕಾರ ಕಟ್ಟಿ, ಅರವಿಂದ ಗಿಡಗಂಟಿ, ಅಪ್ಪು ರೂಗಿ, ಶೇಖಯ್ಯಸ್ವಾಮಿ ಹಿರೇಮಠ, ಅಣ್ಣಪ್ಪಗೌಡ ಪಾಟೀಲ, ಬಸುಸಾಹುಕಾರ ಇಂಗಳೇಶ್ವರ, ಶಿವಯ್ಯಾ ಹಿರೇಮಠ, ಕುಲಪ್ಪ ಹಿಟ್ನಳ್ಳಿ, ನಾಗುಗೌಡ ಪಾಟೀಲ, ಅಶೋಕಗೌಡ ಬಿರಾದಾರ, ಶ್ರೀಶೈಲ ನಾಗಣಸೂರ, ಈರ​‍್ಪ ಕೂಡಗಿ, ಸುನೀಲ ರಬಶೇಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 5ನೂರಕ್ಕಿಂತ ಹೆಚ್ಚು ರೈತರು, ಮುಖಂಡರು ಇದ್ದರು. 


ಸುದ್ದಿ ಓದಿ