ಕೆಂಪವಾಡದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ
ಲೋಕದರ್ಶನ ವರದಿ
ಕಾಗವಾಡ 22: ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಗ್ರಾಮ ವಾಸ್ತವ್ಯದ ಕಾರ್ಯಕ್ರಮ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ನೆರವೇರಿತು.
ರವಿವಾರ ರಂದು ಕಾಗವಾಡದ ಗ್ರೆಡ್ 2 ತಹಶೀಲ್ದಾರ್ ಅಣ್ಣಾಸಾಹೇಬ್ ಕೋರೆ ಇವರ ಉಪಸ್ಥಿತಿಯಲ್ಲಿ ತಾಲೂಕಾ ಪಂಚಾಯಿತಿಯ ಮುಖ್ಯ ಅಧಿಕಾರಿಗಳಾದ ವೀರಣಗೌಡ ಎಗಣಗೌಡರ ಇವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಅನೇಕರ ಸಮಸ್ಯೆಗಳು ಇತ್ಯರ್ಥಗೊಳಿಸಿದರು.
ಬೇರೆ ಬೇರೆ ಪಿಂಚಣಿಗಳು ಕೆಲವರ ವಿದ್ಯುತ್ ಸಮಸ್ಯೆಗಳು, ರಸ್ತೆಯ ತೊಂದರೆಗಳು, ಅಂಗನವಾಡಿ ಸಮಸ್ಯೆಗಳು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ಕೆಲ ರೈತರ ಸಮಸ್ಯೆಗಳು ಈ ಸಭೆಯಲ್ಲಿ ಆಲಿಸಲಾಯಿತು.
ಗ್ರಾಮ ವಾಸ್ತವ ಸಭೆಯಲ್ಲಿ ಕೃಷಿ ಇಲಾಖೆಯ ಬಿ.ಜಿ.ಬಿರಾದಾರ್, ಶಿಶು ಮತ್ತು ಅಭಿವೃದ್ಧಿ ಇಲಾಖೆ ಅಧಿಕಾರಿ ಸಂಜೀವ್ಕುಮಾರ್ ಸದಲಗೆ, ಸ್ಥಳೀಯ ಗ್ರಾಮ ಪಂಚಾಯಿತಿಯ ಪಿಡಿಒ ಜಿ.ಎಂ.ಹೀರೆಮಠ, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮದ ಮುಖಂಡರಾದ ಸಾವನತ ಖಾಂಡೇಕರ, ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಗ್ರಾಮಸ್ಥರು ಪಾಲ್ಗೊಂಡಿದ್ದರು.