ಇಂಡಿ

ಗ್ರಾಮವಾಸ್ತವ್ಯ ಜನತೆಗೆ ಅತ್ಯಂತ ಸಹಕಾರಿಯಾದೆ: ಹಿರೇಮಠ

ಗ್ರಾಮವಾಸ್ತವ್ಯ ಜನತೆಗೆ ಅತ್ಯಂತ ಸಹಕಾರಿಯಾದೆ: ಹಿರೇಮಠ
ಇಂಡಿ: ತಾಲೂಕಿನ ಅರ್ಜುಣಗಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ‌್ಯಕ್ರಮದಲ್ಲಿ ತಹಸೀಲ್ದಾರ ನಾಗಯ್ಯ ಹಿರೇಮಠ ಮಾತನಾಡಿದರು.

ಇಂಡಿ: ಗ್ರಾಮೀಣ ಭಾಗದ ಜನರಿಗೆ ಸರಕಾರದ ವಿವಿಧ ಇಲಾಖೆಯ ಕೆಲಸಗಳನ್ನು ಒಂದೇ ಸೂರಿನಡಿ ದೊರಕಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಕಾರ‌್ಯಕ್ರಮ ಹಮ್ಮಿಕೊಂಡಿದ್ದು. ಇದು ಜನತೆಗೆ ಅತ್ಯಂತ ಸಹಕಾರಿಯಾಗಿದೆ ಎಂದು ತಹಸೀಲ್ದಾರ ನಾಗಯ್ಯ ಹಿರೇಮಠ ಹೇಳಿದರು.  

ಅವರು ಶನಿವಾರ ತಾಲೂಕಿನ ಅರ್ಜುಣಗಿ ಬಿ.ಕೆ ಗ್ರಾಮದ ಹನುಮಾನ  ದೇವಸ್ಥಾನದ ಆವರಣದಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ‌್ಯಕ್ರಮದಲ್ಲಿ ಅವರು ಮಾತನಾಡಿದರು. 

ಗ್ರೇಡ್ 2 ತಹಸೀಲ್ದಾರ ಆರ್‌.ಎಸ್‌. ರೇವಡಿಗಾರ ಮಾತನಾಡಿ, ಸಾಮಾಜಿಕ ಭದ್ರತೆ ಯೋಜನೆಯಡಿ ಹಲವಾರು ಪಿಂಚಣಿ ಸೌಲಭ್ಯಗಳನ್ನು ನೀಡಿಲಾಗುತ್ತಿದ್ದು  ಸ್ಥಳದಲ್ಲಿಯೇ ಪಿಂಚಣಿ ಮಂಜೂರು ಮಾಡುವದಾಗಿ ತಿಳಿಸಿದರು.   

ತಾ.ಪಂ ಇಓ ಸುನೀಲ ಮುದ್ದೀನ, ಕಂದಾಯ ನೀರೀಕ್ಷಕ ಬಸವರಾಜ ರಾವೂರ ಮಾತನಾಡಿದರು,  ಗ್ರಾ.ಪಂ ಅಧ್ಯಕ್ಷೆ ಶಿವಮ್ಮ ಸಿದ್ದಪ್ಪ ಮಾದರ, ಉಪಾಧ್ಯಕ್ಷ ನೂರಜಹಾನ ಗೈಬುಸಾಬ ಮುಲ್ಲಾ ವೇದಿಕೆಯಲ್ಲಿದರು. 

ಕಂದಾಯ ಇಲಾಖೆಯ 67, ಕೃಷಿ 3, ಜಿ.ಪಂ 1, ಅಂಗನವಾಡಿ 5, ತೋಟಗಾರಿಕೆ 1,  ಆರೋಗ್ಯ 2, ವಿದ್ಯುತ್ ಇಲಾಖೆಯ 6, ಗ್ರಾ.ಪಂ ತಾ.ಪಂ  56, ಶಿಕ್ಷಣ ಇಲಾಖೆಯ 2, ಎಡಿಎಲ್‌ಆರ್ 5, ಸಣ್ಣ ನೀರಾವರಿ 1, ಮಹಿಳಾ ಮತ್ತು ಮಕ್ಕಳ ಕಲ್ಯಾಣ 2, ಸಮಾಜ ಕಲ್ಯಾಣ 2, ಪಶು ಇಲಾಖೆ 1, ರಸ್ತೆ ಸಾರಿಗೆ 5 ಅರ್ಜಿಗಳು ಬಂದಿದ್ದವು. ಇದರಲ್ಲಿ  ದಾರಿ, ಶೌಚಾಲಯ, ಚರಂಡಿ ನಿರ್ಮಾಣ, ಶಾಲೆ ಮುಂದೆ ಸ್ವಚ್ಛತೆ, ಸಂಬಂದಿತ ದಾರಿ ಸುಧಾರಣೆ, ಗ್ರಾ.ಪಂ ಬಿಲ್ಲುಗಳ ಅನುಮೋದನೆ ಸೇರಿದ್ದವು. ಒಟ್ಟು 155 ಅರ್ಜಿಗಳ ವಿಚಾರಣೆ ನಡೆಯಿತು.  

ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಸಮಾಜ ಕಲ್ಯಾಣ ಅಧಿಕಾರಿ ಬಿ.ಜೆ. ಇಂಡಿ, ಲೋಕೊಪಯೋಗಿ ಇಲಾಖೆಯ ಮಹಿಬೂಬ ಸಂಜವಾಡ, ಸಚೀನ ಮುರನಾಳ, ಎಸ್‌.ಎಸ್‌.ಪೂಜಾರಿ, ಪಿ.ಎಸ್‌. ಚವಡಿಹಾಳ, ಗಡ್ಡೆಪ್ಪ ಅವಜಿ, ಗ್ರಾಮ ಲೆಕ್ಕಾಧಿಕಾರಿಗಳಾದ  ಪ್ರದೀಪ ದೊಡಮನಿ, ಗ್ರಾಮಸ್ಥರಾದ ರಾಘವೇಂದ್ರ ಕುಲಕರ್ಣಿ, ಈಶ್ವರ ಪೂಜಾರಿ, ಭೀರ​‍್ಪ ಕರಗಾರ, ಗೈಬುಸಾಬ ಮುಲ್ಲಾ, ದಾನಪ್ಪ ಪಾಟೀಲ, ಕಲ್ಲನಗೌಡ ಪಾಟೀಲ ಮತ್ತಿತರು ಇದ್ದರು.  

ನಂತರ ಅಂಬೇಡಕರ ವೃತ್ತ ಮತ್ತು ಕನ್ನಡ ಗಂಡು ಮಕ್ಕಳ ಶಾಲೆಗೆ ಭೇಟಿ ನೀಡಿ  ಅಲ್ಲಿಯ ಕುಂದು ಕೊರತೆ ಆಲಿಸಿದರು. 

ಸುದ್ದಿ ಓದಿ