ಗ್ರಾಮ ವಾಸ್ತವ್ಯ: ಸಾರ್ವಜನಿಕರ ಸಮಸ್ಯೆಗೆ ಅಧಿಕಾರಿಗಳಿಂದ ಸ್ಪಂದನೆ
ಕಾಗವಾಡ 20: ರಾಜ್ಯ ಸರಕಾರದ ಕಂದಾಯ ಸಚಿವ ಆರ್. ಅಶೋಕ ಇವರು ನೀಡಿರುವ ಆದೇಶದಂತೆ ಜಿಲ್ಲಾಡಳಿತದ ನಡೆಗೆ ಹಳ್ಳಿಯ ಕಡೆಗೆ ಆದೇಶದÀ ಮೇರೆಗೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಲೋಕುರ ಗ್ರಾಮದಲ್ಲಿ ಕಾಗವಾಡ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ ಇವರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆಯಿಂದ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳ ಸಮೇತ ಮನೆ ಮನೆಗೆ ತೆರಳಿ ಅಲ್ಲಿಯ ಜನರ ಸಮಸ್ಯೆಗಳನ್ನು ಆಲಿಸಿ ಗ್ರಾಮದಲ್ಲಿ ಉಳಿದು ಪ್ರತಿಯೊಂದು ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದರಿಂದ ಜನರಲ್ಲಿ ಒಂದು ರೀತಿಯ ಸಂತಸ ಮೂಡಿದೆ.
ಶನಿವಾರ ಬೆಳಿಗ್ಗೆ ತಹಶೀಲ್ದಾರ ಪ್ರಮೀಳಾ ದೇಶಪಾಂಡೆ, ಉಪತಹಶೀಲ್ದಾರ ಅಣ್ಣಾಸಾಹೇಬ ಕೋರೆ, ತಾಲೂಕಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣಗೌಡ ಎಗಣಗೌಡರ, ಬಿಇಓ ಎಂ.ಆರ್.ಮುಂಜೆ, ಸಿಡಿಪಿಓ ಸಂಜೀವಕುಮಾರ ಸದಲಗೆ, ವೈದ್ಯಾಧಿಕಾರಿ ಪುಷ್ಪಲತಾ ಸುನ್ನದಕಲ್ಲ, ಪಿಡಿಓ ಎಂ.ಆರ್.ಹಿರೇಮಠ, ಸೇರಿದಂತೆ ಇನ್ನೂಳಿದ ಇಲಾಖೆ ಅಧಿಕಾರಿಗಳು ಗ್ರಾಮದೇವತೆ ಲೋಕನಾಥ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಾಲೂಕಾ ಪಂಚಾಯತಿ ಸದಸ್ಯ ಸುಧಾಕರ ಭಗತ್, ಅಥಣಿ ತಾಲೂಕಾ ಎಪಿಎಂಸಿ ಸಂಚಾಲಕ ರವೀಂದ್ರ ಪೂಜಾರಿ, ಗ್ರಾಪಂ ಸದಸ್ಯರಾದ ದಾದಾಸಾಬ ಪವಾರ, ಮಲಿಕ ಮುಲ್ಲಾ, ಪಿಂಟು ಚವ್ಹಾಣ, ಜಯಸಿಂಗ ಭಗತ್, ಕಪಿಲ ಕಾಂಬಳೆ, ಶಿವಾಜಿ ಸಂಕಪಾಳ, ಹಿಮ್ಮತ ಮಮದಾಪುರೆ, ಸುರೇಶ ಐಹೋಳೆ, ಸುನೀಲ ಚವ್ಹಾಣ, ಸೇರಿದಂತೆ ಗ್ರಾಮದ ಮುಖಂಡರು ಒಂದುಗೂಡಿ ತಾಲೂಕಾಡಳಿತ ಅಧಿಕಾರಿಗಳೊಂದಿಗೆ ಗ್ರಾಮದ ಮನೆ ಮನೆಗಳಿಗೆ ಭೇಟ್ಟಿನೀಡಿ ಜನರ ಸಮಸ್ಯೆಗಳು ವಿಚಾರಿಸಿದರು. ಬಳಿಕ ಗ್ರಾಮ ಪಂಚಾಯತಿ ಕಾರ್ಯಾಲಯ ಎದುರು ಎಲ್ಲರನ್ನು ಒಗ್ಗೂಡಿಸಿ ಹಂತ-ಹಂತವಾಗಿ ಸಮಸ್ಯೆಗಳಿಗೆ ಸ್ಪಂದಿಸಿದರು.
ಪ್ರಮೀಳಾ ದೇಶಪಾಂಡೆ ರಾಜ್ಯ ಸರಕಾರದ ಆದೇಶದಂತೆ ಕಾಗವಾಡ ತಾಲೂಕಾಡಳಿತದ ಎಲ್ಲ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದು, ನಿಮ್ಮಲ್ಲಿರುವ ಯಾವುದೇ ಸಮಸ್ಯೆಗಳು ನೇರವಾಗಿ ಹೇಳಿಕೊಂಡು, ಅದಕ್ಕೆ ಪರಿಹಾರ ಕಂಡು ಹಿಡಿದು ಸ್ಪಂದಿಸುತ್ತೇವೆ. ಶನಿವಾರ ಹಾಗೂ ರವಿವಾರ ಬೆಳಿಗ್ಗೆವರೆಗೆ ಇಲ್ಲಿಯೇ ಉಳಿದು ನಿಮ್ಮ ಸಮಸ್ಯೆಗಳನ್ನು ಆಲಿಸಲಿದ್ದೇವೆ. ರಾಜ್ಯ ಸರಕಾರ ಇದೊಂದು ಒಳ್ಳೆ ಸೇವೆಯ ಅವಕಾಶ ನೀಡಿದೆ. ಇದರ ಸದುಪಯೋಗ ಪಡೆದುಕೊಳ್ಳಿರಿ ಎಂದು ಅಹ್ವಾನಿಸಿದರು.
ಇಲ್ಲಿಯ ಅನೇಕ ವೃದ್ಧ ಮಹಿಳೆಯರು ಅವರಿಗೆ ತಲುಪುವ ಪಿಂಚಣಿ ಕಳೆದ ನಾಲ್ಕಾರು ತಿಂಗಳಗಳಿಂದ ಸ್ಥಗಿತಗೊಂಡಿದ್ದ ಬಗ್ಗೆ ಹೇಳಿಕೊಂಡು ಪರಿಹಾರ ನೀಡಿರಿ ಎಂದರು. ಕೆಲ ವೃದ್ಧರಿಗೆ ಪಿಂಚಣಿ ದೊರತೆಯಿಲ್ಲಾ, ಅಂಥವರು ಅರ್ಜಿ ಸಲ್ಲಿಸಿದರು. ಗ್ರಾಮದಲ್ಲಿಯ ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ತೋಟದ ರಸ್ತೆಗಳ ಸಮಸ್ಯೆ, ವಿದ್ಯುತ್ ಟ್ರಾನ್ಸಫರ್ಮರ್ ಬಳಿಸುವ ಬಗ್ಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರು.
ಸಾರ್ವಜನಿಕರು ಲೋಕುರ ಗ್ರಾಮ ಮಂಗಸೂಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿದ್ದು, ಇದನ್ನು ಸ್ವತಂತ್ರ್ಯ ಗ್ರಾಮ ಪಂಚಾಯತಿ ದರ್ಜೆ ನೀಡಬೇಕೆಂದು ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಬಸ್ ನಿಲ್ಲಿಸದೆ ನೇರವಾಗಿ ಸಂಚರಿಸುತ್ತವೆ. ಇದರಿಂದ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ನೀಡಿ ಈ ಗ್ರಾಮದಲ್ಲಿ ಅನಧಿಕೃತವಾಗಿ ಸುಮಾರು 1 ಲಕ್ಷ ಕೋಳಿಗಳು ಸಾಕಾಣಿಕೆ ಮಾಡುವ ಪೊಲ್ಟರಿ ಫಾರ್ಮ್ವಿದ್ದು, ಮಳೆಗಾಲದಲ್ಲಿ ನೊಣಗಳ ಕಾಟ ಹೆಚ್ಚಾಗುತ್ತದೆ. ಇದನ್ನು ಸ್ಥಳಾಂತರಿಸಿರಿ ಎಂದು ಕೇಳಿಕೊಂಡರು.
ಗ್ರಾಮವಾಸ್ತವ್ಯದಲ್ಲಿ ಮಂಗಸೂಳಿ ಗ್ರಾಪಂ ಸದಸ್ಯರಾದ ಬಾಬಾಸಾಹೇಬ ಪಾಟೀಲ, ಅಮರ ಪಾಟೀಲ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್.ಎ.ನರಟ್ಟಿ, ಸಿ.ಡಿ.ದೇವಮೊರೆ, ತಾಲೂಕಾ ಹೆಸ್ಕಾಂ ಅಧಿಕಾರಿ ಟಿ.ಜಿ.ಕಡ್ಲಸ್ಕರ, ಎಂ.ಪಿ.ನರಗಟ್ಟಿ, ಆಹಾರ ಇಲಾಖೆಯ ಅಧಿಕಾರಿ ಎಸ್.ಎಂ.ಬುಡರ, ಎಂ.ಆರ್.ಪಾಟೀಲ, ಗ್ರಾಮಲೇಕ್ಕಾಧಿಕಾರಿ ಬಡಿಗೇರ, ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.