ಹೂವಿನ ಹಡಗಲಿ

ಕಾಂಗ್ರೆಸ್ಗೆ ನಡುಕ ಹುಟ್ಟಿಸಿದ ವಿಜಯೇಂದ್ರರ ಆಯ್ಕೆ

ಕಾಂಗ್ರೆಸ್ಗೆ ನಡುಕ ಹುಟ್ಟಿಸಿದ ವಿಜಯೇಂದ್ರರ ಆಯ್ಕೆ

ಲೋಕದರ್ಶನ ವರದಿ

ಹೂವಿನ ಹಡಗಲಿ:  ಬಿಜೆಪಿ ಪಕ್ಷದ ನೂತನ ರಾಜ್ಯಾಧ್ಯಕ್ಷ ರಾಗಿ ಬಿ ವೈ ವಿಜಯೇಂದ್ರ ಅವರನ್ನು ನೇಮಕಮಾಡಿರುವುದು ನಮ್ಮ ಪಕ್ಷ ಕ್ಕೆ ಆನೆ ಬಲ ಬಂದಂತಾಗಿದೆ. ಸರ್ವ ಧರ್ಮಿಯರನ್ನು ಒಗ್ಗೂಡಿಸಿಕೊಂಡು ಹೋಗುವ ವಿಜಯೇಂದ್ರರ ಆಯ್ಕೆ ಕಾಂಗ್ರೆಸ್ ಪಕ್ಷಕ್ಕೆ   ನುಂಗಲಾರದ ತುತ್ತಾಗಿದೆ. ಪರಿಣಮಿಸಿದೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ನಡುಕ ಹುಟ್ಟಿಸಿದೆ ಎಂದು ವಿಜಯನಗರ ಜಿಲ್ಲಾ ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂ ಬಿ ಬಸವರಾಜ ಹೇಳಿದರು. 

ಶನಿವಾರ ಸಂಜೆ ನಮ್ಮ ಪತ್ರಿಕಾ ಪ್ರತಿನಿಧಿ ಯೊಂದಿಗೆ ಮಾತನಾಡಿ ರಾಜ್ಯ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.ನೂತನವಾಗಿ ರಾಜ್ಯ ಬಿಜೆಪಿ ಚುಕ್ಕಾಣಿ  ಹಿಡಿದಿರುವ ವಿಜಯೇಂದ್ರ ಅವರು  ಜ್ಯಾತ್ಯಾತೀತ ನಾಯಕರು ಅವರಿಗೆ ರಾಜ್ಯದ ಪ್ರತಿ ಹಳ್ಳಿ ಯಲ್ಲಿ ಅಭಿಮಾನಿಗಳ ಬಳಗವಿದೆ  ಮತ್ತು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯ ಕರ್ತರಾಗಿ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ   ಅನುಭವ ಹೊಂದಿದ್ದಾರೆ. 

 ಈ ಹಿಂದೆ ನಡೆದ ಅನೇಕ ಉಪಚುನಾವಣೆಯಲ್ಲಿ ಪಕ್ಷದ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ರಾಷ್ಟ್ರೀಯ ನಾಯಕರಿಂದ ಸೈ ಎನಿಸಿಕೊಂಡಿದ್ದಾರೆ. ವಿಜಯೇಂದ್ರ ಅವರು  ಮಾಜಿ ಸಿ ಎಂ ಯಡಿಯೂರಪ್ಪ ನವರ ಮಗ ಎನ್ನುವ ಕಾರಣಕ್ಕೆ  ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ.  ಯುವಕರಿಗೆ ಮನ್ನಣೆ, ಜನಸಾಮಾನ್ಯರ ಮತ್ತು  ಕಾರ್ಯಕರ್ತರ  ಹಿತ ಬಯಸುವ  ನಾಯಕನಿಗೆ ಇವತ್ತು ರಾಜ್ಯಾಧ್ಯಕ್ಷ ಪಟ್ಟ ಲಭಿಸಿದೆ. ನಮ್ಮ ಬಿಜೆಪಿ ಪಕ್ಷ ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಹಾಕುತ್ತದೆ. ವಿರೋಧ ಪಕ್ಷಗಳು ವಿನಾಕಾರಣ ಆರೋಪ ಮಾಡಿ ಪೇಚಿಗೆ ಸಿಲುಕುವುದು ಬೇಡ. 2024 ರ ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರರ ನೇತೃತ್ವದಲ್ಲಿ  ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸಲಿದೆ. ಮುಂದಿನ  ಅವಧಿಯಲ್ಲಿ ನರೇಂದ್ರ ಮೋದಿ ಜಿ ಅವರು ಈ ದೇಶದ ಪ್ರಧಾನಿಗಳಾಗಿ ವಿಶ್ವ ಮಟ್ಟದಲ್ಲಿ ಭಾರತವನ್ನು ಪ್ರಬಲ ದೇಶವನ್ನಾಗಿ ಮಾಡಲಿದ್ದಾರೆ.  ರಾಜ್ಯ ಕಾಂಗ್ರೆಸ್ ಸರ್ಕಾರದ  ಪೊಳ್ಳು ಭರವಸೆಗಳಿಗೆ ರಾಜ್ಯದ ಜನತೆ ಬೇಸತ್ತು ಹೋಗಿದ್ದಾರೆ. ಅನ್ನದಾತರ ನೋವುಂತು ಹೇಳದಂತಾಗಿದೆ.  ಭಾಗ್ಯಗಳನ್ನು ಘೋಷಣೆ ಮಾಡಿ ರಾಜ್ಯ ಖಜಾನೆ ಯನ್ನು ಖಾಲಿ ಮಾಡಿ ಸಾಮಾನ್ಯ ಜನರಿಗೆ ಬೆಲೆ ಹೇರಿಕೆಯನ್ನು  ಭಾಗ್ಯವನ್ನು ನೀಡಿ  ರಾಜ್ಯದ ಜನರ ಜೀವನವನ್ನು  ದುರಸ್ಥಗೊಳಿಸಿದ್ದಾರೆ. 

      ಈ ಹಿಂದೆ  ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ದಲ್ಲಿದ್ದಾಗ  ನೀರಾವರಿ ಸೇರಿದಂತೆ ಹಲವು ಯೋಜನೆಗಳಿಗೆ ಹತ್ತು ಸಾವಿರ ಕೋಟಿ ಹಣವನ್ನು  ಮೀಸಲಿಟ್ಟು ಕ್ರಿಯಾ ಯೋಜನೆಯನ್ನು ರೂಪಿಸಿತ್ತು. ಸಿದ್ದರಾಮಯ್ಯ ಸರ್ಕಾರ ಇಲ್ಲಸಲ್ಲದ ನೇಪ ಹೇಳಿ ಈ ಯೋಜನೆಗಳಿಗೆ ಎಳ್ಳು ನೀರು ಬಿಡಲು ಹೊರಟಿದೆ.  ಜನರು ಹಿತ ಕಾಪಾಡಲು ವಿಪಲವಾಗಿರುವ ರಾಜ್ಯ ಸರ್ಕಾರ. ತಮ್ಮ ಪಕ್ಷದ ಖಜಾನೆ ತುಂಬಲು ಹೊರಟಿದೆ ರಾಜ್ಯದ ಪ್ರಜ್ಞಾವಂತ ಮತದಾರರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಂ ಬಿ ಬಸವರಾಜ ಕೈ ಸರ್ಕಾರದ ವಿರುದ್ಧ ಹರಿಹಾಯ್ದರು 

ಸುದ್ದಿ ಓದಿ