ವಿಜಯ್ ನಾಗರಬಾವಿಮಠ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಶಿಗ್ಗಾವಿ : ಇತ್ತೀಚೆಗೆ ನಡೆದ ತಾಲೂಕಾ ಪಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಪಟ್ಟಣದ ಕೊಟ್ಟಿಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ವಿಜಯ್ ಕುಮಾರಸ್ವಾಮಿ ನಾಗರಬಾವಿಮಠ 5 ರಿಂದ 7 ನೇ ತರಗತಿ ವರೆಗಿನ ಮಕ್ಕಳಿಗೆ ನಡೆದ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇತನ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕ ಎಮ್.ಎಮ್.ದೇವಕ್ಕೀಗೌಡ್ರ ಸೇರಿದಂತೆ ಸರ್ವ ಶಾಲಾ ಶಿಕ್ಷಕರು, ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.