ಕಾಕಿ ಜನ ಸೇವಾ ಸಂಸ್ಥೆ ಗಣೇಶೋತ್ಸವ ಅರಮನೆಯಲ್ಲಿ ರಾಣೇಬೆನ್ನೂರು ವಿಘ್ನೇಶ್ವರ ಮಹಾರಾಜ.
ಕೆ.ಎಸ್. ನಾಗರಾಜ್.ರಾಣೇಬೆನ್ನೂರು: ನಗರದ ಪ್ರತಿಷ್ಠಿತ ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ದಾರ್ಮಿಕ ಹಾಗೂ ಓದ್ಯೋಗಿಕ ಸೃಷ್ಟಿಯೊಂದಿಗೆ ಸಮಾಜದ ವಿವಿದರಂಗದಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಸೇವಾ ಮುಖಿಯಾಗಿರುವ ಸಂಸ್ಥೆಯು ಕಳೆದ ಆರು ವರ್ಷಗಳಿಂದ, ವಿವಿಧ ರೂಪದ ಗಣೇಶ್ ಉತ್ಸವದ ಆಕರ್ಷಣೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನಾಡಿನ ಜನರ ಗಮನ ಸೆಳೆದು, ವಾಣಿಜ್ಯ ನಗರದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ವಾಣಿಜ್ಯ ನಗರ ಪಶ್ಚಿಮ ಭಾಗದ ಹೃದಯ ಕೇಂದ್ರ ಸ್ಥಾನವಾಗಿರುವ, ಮಾರುತಿ ನಗರ ಪ್ರವೇಶಕ್ಕೂ ಮುನ್ನವೇ, ಪ್ರಧಾನ ಮಾರ್ಗದಲ್ಲಿ ಕಂಗೊಳಿಸುವ ಕುರುಹಿನ ಶೆಟ್ಟಿ ಸಮಾಜದ ಇತಿಹಾಸ ಪ್ರಸಿದ್ಧ, ಶ್ರೀ ನೀಲಕಂಠೇಶ್ವರ ದೇವಸ್ಥಾನ, ಪಕ್ಕದಲ್ಲಿಯೇ ನಿರ್ಮಾಣಗೊಂಡಿರುವ ವಿನೂತನ ಶೈಲಿಯ ಕಾಕಿ ಜನ ಸೇವಾ ಸಂಸ್ಥೆ ಗಣೇಶೋತ್ಸವ ಅರಮನೆಯಲ್ಲಿ ಈ ಭಾರಿ ರಾಣೇಬೆನ್ನೂರು ವಿಘ್ನೇಶ್ವರ ಮಹಾರಾಜ್ ಪ್ರತಿಷ್ಠಾಪಿಸಲು ಮುಂದಾಗಿದೆ. ಸಂಸ್ಥೆಯ ಆವರಣದಲ್ಲಿ ಅರಮನೆ ನಿರ್ಮಾಣಕ್ಕಾಗಿ ಕಳೆದ 2, ತಿಂಗಳುಗಳಿಂದ 15 ಕ್ಕೂ ಹೆಚ್ಚು ನೈಪುಣ್ಯತೆಯ ಕುಶಲಕರ್ಮಿಗಳು, ಯುವ ಚಿತ್ರ ಕಲಾವಿದ, ತಾಲೂಕಿನ ಕುಪ್ಪೇಲೂರು ಗ್ರಾಮದ ರಾಜು ಸುಂಕಾಪುರ ಅವರ ಮಾರ್ಗದರ್ಶನದಲ್ಲಿ ಕರ್ತವೈನಿರಾಗಿದ್ದಾರೆ. ಅರಮನೆಯ ಕೆಲಸ ಪೂರ್ಣಗೊಂಡಿದ್ದು ಹಬ್ಬಕ್ಕೂ ಮುನ್ನವೇ ಜನಾಕರ್ಷಣೆಯ ಕೇಂದ್ರ ಸ್ಥಾನವಾಗಿ ಕಂಗೂಳಿಸುತ್ತಲಿರುವುದು. ಕಲಾವಿದ ರಾಜು ಸುಂಕಾಪುರ ಸಂಗಡಿಗರಲ್ಲಿರುವ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದೆ.
ಪ್ರತಿವರ್ಷದಂತೆ ಈ ವರ್ಷವೂ ಸಹ ನಗರದಲ್ಲಿರುವ ಅನೇಕ ಸಂಘ, ಸಂಸ್ಥೆಗಳು, ತಮ್ಮದೇ ಆದ ರೀತಿಯಲ್ಲಿ ಗಣೇಶ್ ಹಬ್ಬವನ್ನು ಅತೀ ವಿಜ್ರಂಬಣೆಯಿಂದ ಸಾರ್ವಜನಿಕರ ಗಮನ ಸೆಳೆಯುವ ರೀತಿಯಲ್ಲಿ ಅತ್ಯಂತ ಭಕ್ತಿ,ಭಾವ ಮತ್ತು ಶ್ರದ್ಧೆಯಿಂದ ಆಚರಿಸುತ್ತಾ, ನಾಡಿನ ಜನರ ಗಮನ ಸೆಳೆಯುತ್ತಾ, ಸಾಗುತ್ತಿರುವುದು ಸಂಘಟನೆಗಳ ಮುಖಂಡರ ಸೇವಾ ದಕ್ಷತೆಗೆ ಸಾಕ್ಷಿಯಾದಂತಾಗಿದೆ. ಇತಿಹಾಸದಿಂದಲೂ ಕಾಕಿ ಮನೆತನದವರು ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತೀಯ ಸಂಸ್ಕೃತಿಯಂತೆ ತಮ್ಮದೇ ಆದ ವಿಶೇಷ ಮತ್ತು ವೈಶಿಷ್ಟತೆಯಿಂದ ಕೂಡಿರುವ ಸಮಾಜ ಸೇವೆಯಲ್ಲಿ ಮುಂದಾಗಿ ಅಂದಿನಿಂದ ಇಂದಿನವರೆಗೂ ಮುನ್ನಡೆಸುತ್ತಾ ಕುಟುಂಬದ ಧರ್ಮ ಪರಂಪರೆಯನ್ನು ಮುನ್ನಡೆಸುತ್ತಿರುವುದು ಅತ್ಯಂತ ಸ್ಲಾಘನೀಯ ಕಾರ್ಯವಾಗಿದೆ ಎನ್ನುವುದು ಜನಮನ್ನಣೆಯ ಮುಕ್ತ ಕಂಠದಿಂದ ಹೊರ ಬರುವ ಮಾತುಗಳಾಗಿವೆ. ಬಾಕ್ಸ್:- ಸಾರ್ವಜನಿಕರ ಸೇವೆ ಮಾಡುವ ಅವಕಾಶ ಎಲ್ಲ ಕಾಲಕ್ಕೂ ಎಲ್ಲರಿಗೂ ಸಿಗುವುದು ಅಪರೂಪ. ಹಾಕಿ ಕುಟುಂಬದ ನಮ್ಮ ಹಿರಿಯರು ಹಿಂದಿನಿಂದಲೂ ಧಾನ,ಧರ್ಮ, ಪರೋಪಕಾರ ಮಾಡುತ್ತ ಸಾಗಿರುವ ಇತಿಹಾಸ ಕಾಕಿ ಕುಟುಂಬಕ್ಕೆ ಇದೆ ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ, ಜನರು ನೀಡುವ ಸಹಕಾರದಲ್ಲಿ ನಾವು ಮುನ್ನಡೆಯುತ್ತಿದ್ದೇವೆ ಎನ್ನುವುದು ಹಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಅವರ ಮನದಾಳದ ಮಾತುಗಳಾಗಿವೆ