ಕಾಗವಾಡ

ಶೇಡಬಾಳ ಪಟ್ಟಣದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ

ಶೇಡಬಾಳ ಪಟ್ಟಣದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ

ಲೋಕದರ್ಶನ ವರದಿ 

ಕಾಗವಾಡ 16:  ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಇಂಧನ ಖಾತೆ ಸಚಿವ ವಿ.ಸುನಿಲ್ ಕುಮಾರ್ ಇವರ ಆದೇಶ ಮೇರೆಗೆ ಕಾಗವಾಡ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ವಿದ್ಯುತ್ ಅದಾಲತ್ ಕಾರ್ಯಕ್ರಮ ಜರುಗಿತು. 

ಶನಿವಾರ ರಂದು ಶೇಡಬಾಳದ ಬಸವೇಶ್ವರ ದೇವಸ್ಥಾನ ಸಮಿತಿಯ ಸಭಾಭವನದಲ್ಲಿ ಶೇಡಬಾಳ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಗ್ರಾಹಕರ ಮತ್ತು ರೈತರ ಸಮಸ್ಯೆಗಳನ್ನು ಆಲಿಸುವ ವಿದ್ಯುತ್ ಅದಾಲತ ಕಾರ್ಯಕ್ರಮ ಜರಗಿತು. ಸಭೆಯಲ್ಲಿ ಅನೇಕ ರೈತರು, ಪಟ್ಟಣ ಪಂಚಾಯತಿ ಸದಸ್ಯರು, ವಿದ್ಯುತ್ ಸಮಸ್ಯೆಗಳು ಅಧಿಕಾರಿಗಳನ್ನು ಗಮನಕ್ಕೆ ತಂದು ಪ್ರಶ್ನಿಸಿ ಪರಿಹಾರ ಕಂಡುಕೊಂಡರು. 

ಅಥಣಿಯ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ಅಭಿಯಂತರದ ಚಿದಾನಂದ ಆರ್ ಗುರುಸ್ವಾಮಿ, ಕಾಗವಾಡ ಹೆಸ್ಕಾಂ ಇಲಾಖೆ ಸಹಾಯಕ ಅಭಿಯಂತ ಲಿಂಗರಾಜ್ ಜೋಗಿ, ಎಸ್‌.ಎಸ್‌.ಬಸ್‌ನಾಯಕ್ ಇವರು ಎಲ್ಲ ವಿದ್ಯುತ್ ಗ್ರಾಹಕರ ಸಮಸ್ಯೆಗಳು ಆಲಿಸಿದರು. 

ಸಮಾರಂಭದ ಮುಖ್ಯ ಅತಿಥಿಗಳಾಗಿ ಲೋಕುರ್ ಪಿಕೆಪಿಎಸ್ ಅಧ್ಯಕ್ಷ ರಾಜಾರಾಮ ಗಡಗೆ, ಹಿರಿಯರಾದ ಅಶೋಕ್ ವಿಭೂತೆ, ಬಾಬಾಸಾಹೇಬ್ ಚೌಗೂಲೆ, ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಾದೇವಿ ಮಾಕ್ಕಣ್ಣವರ್, ಸುಭಾಷ್ ಡಾಲೆ, ಉತ್ಕರ್ಷ್‌ ಪಾಟೀಲ್, ರಾಜು ಚೌಗೂಲೆ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಬಿ.ಎಂ ಕೋಲಾಪುರೆ, ಇವರು ಹೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ಪ್ರಶ್ನಿಸಿದರು. 

ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಾದೇವಿ ಮಾಕ್ಕಣ್ಣವರ್ ಇವರು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರದೆ ಸಾರ್ವಜನಿಕರಗೆ ಕುಡಿವ ನೀರು ಪೂರೈಸುವ ಬೋರ್ವೆಲ್‌ಗಳ ಕನೆಕ್ಷನ್ ತೆರವುಗೊಳಿಸಿದರು ಇದರಿಂದ ಆಗಿರುವ ಸಮಸ್ಯೆ ಅಧಿಕಾರಿಗಳು ಈ ರೀತಿ ಮಾಡಿರುವ ಅಧಿಕಾರಿಗಳು ಯಾರು, ಅವರ ಮೇಲೆ ಕ್ರಮ ಜರುಗಿಸಿರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಹೆಸ್ಕಾಂ ಅಧಿಕಾರಿಗಳು ತಾವು ಮಾಡಿರುವ ತಪ್ಪು ಒಪ್ಪಿಕೊಂಡರು. 

 ತೋಟಪಟ್ಟಿಗಳಲ್ಲಿ ಕಟ್ಟಿಸಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ಅನುಮತಿ ಪಡೆದುಕೊಳ್ಳಬೇಕಾಗಿತ್ತು ಆದರೆ ಈ ಮುಂದೆ ಪಡೆದುಕೊಳ್ಳುವ ಅವಶಕ್ತಿ ಇಲ್ಲ ಎಂದು ಅಧಿಕಾರಿಗಳು ಎಲ್ಲ ರೈತರಿಗೆ ತಿಳಿಸಿದರು. 

ಅನೇಕ ರೈತರ ವಿದ್ಯುತ್ ತಂತಿಗಳು ಹಳೆಯ ಆಗಿದ್ದವು, ಕೆಲವು ಕಡೆ ತುಗುತಿರುವ ತಂತೆಗಳು ಇಂತಹ ತಂತಿಗಳನ್ನು ಬದಲಾಯಿಸಿರಿ, ವಿದ್ಯುತ್ ಟ್ರಾನ್ಸ್ಫಾರ್ಮರ್ ಸುಟ್ಟು ಒಂದು ತಿಂಗಳು ಘಟಿಸಿದರು ಬದಲಾಯಿಸುವುದಿಲ್ಲ ಈ ಬಗ್ಗೆ ಮಾತನಾಡಿ ತಮ್ಮ ಆಕ್ರೋಶ ಹೊರಹಾಕಿದರು. 

ಪಟ್ಟಣ ಪಂಚಾಯತಿ ಚುನಾಯಿತಿ ಸದಸ್ಯರು, ರೈತರು, ಗ್ರಾಮಸ್ಥರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಸಂಪೂರ್ಣ ದಿನ ಉಳಿದು ಜನರ ಸಮಸ್ಯೆಗಳು ಅಧಿಕಾರಿಗಳು ಆಲಿಸಿದ್ದರು. 


ಸುದ್ದಿ ಓದಿ