ಕಾಗವಾಡ

ಉಪಾಧ್ಯಕ್ಷ ಭೋಲಾ ಇಮಾಮ ರಾಜಾಪೂರೆಗೆ ಸನ್ಮಾನ

ಉಪಾಧ್ಯಕ್ಷ ಭೋಲಾ ಇಮಾಮ ರಾಜಾಪೂರೆಗೆ ಸನ್ಮಾನ


ಕಾಗವಾಡ: ಭೋಲಾ ಇಮಾಮ ರಾಜಾಪೂರೆ ಇವರು ಅವಿರೋಧವಾಗಿ ಉಪಾಧ್ಯಕ್ಷಸ್ಥಾನಕ್ಕೆ ಆಯ್ಕೆಯಾದ ಬಗ್ಗೆ ಜಿನ್ನಪ್ಪಣ್ಣಾ ಚೌಗುಲೆ ಲಾಲಬಹಾದ್ದೂರ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ., ಶಿರಗುಪ್ಪಿ ಇದರ ಉಪಾಧ್ಯಕ್ಷರಾಗಿ ಭೋಲಾ ಇಮಾಮ ರಾಜಾಪೂರೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ರವಿವಾರರಂದು ಜರುಗಿದ ಸಂಚಾಲಕ ಮಂಡಳಿ ಸಭೆಯಲ್ಲಿ ಭೋಲಾ ಇಮಾಮ ರಾಜಾಪೂರೆ ಇವರು ಒಬ್ಬರೆ ಉಪಾಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಮುಂದಿನ ಎರಡುವರೆ ವರ್ಷದ ಅವಧಿಗಾಗಿ ಉಪಾಧ್ಯಕ್ಷರಾಗಿ ಅಯ್ಕೆಯಾಗಿದ್ದರೆಂದು ಚುನಾವಣಾ ಅಧಿಕಾರಿಗಳಾದ ಅಮೀತ ಶಿಂದೆ ಇವರು ಚುನಾವಣೆ ಪ್ರಕ್ರಿಯೆ ಮುಕ್ತಾಯವಾದನಂತರ ಘೋಷಣೆ ಮಾಡಿದರು. 

ನಂತರ ಎಲ್ಲ ಸಂಚಾಲಕರು ಸಿಬ್ಬಂದಿ ವರ್ಗದ ವತಿಯಿಂದ ಭೋಲಾ ಇಮಾಮ ರಾಜಾಪೂರೆ ಇವರನ್ನು ಸತ್ಕರಿಸಿ ಅಭಿನಂದಿಸಲಾಯಿತು. 

ಫೋಟೊ ಶೀರ್ಷಿಕೆ: 26 ಕಾಗವಾಡ 2 ಭೋಲಾ ಇಮಾಮ ರಾಜಾಪೂರೆ ಇವರನ್ನು ಸತ್ಕರಿಸುತ್ತಿರುವಾಗ. 


ಸುದ್ದಿ ಓದಿ