ವೆಂಕಟೇಶ ಹೈಸ್ಕೂಲ್ : ನೂರಕ್ಕೆ ನೂರು ಫಲಿತಾಂಶ
ಗುಳೇದಗುಡ್ಡ,ಆ.11: ಗುಳೇದಗುಡ್ಡ ಮಾಹೇಶ್ವರಿ ವಿದ್ಯಾ ಪ್ರಚಾರಕ ಮಂಡಳದ ವೆಂಕಟೇಶ ಕನ್ನಡ ಮಾಧ್ಯಮ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳ ಒಟ್ಟು ಫಲಿತಾಂಶ ಶೇ.ನೂರಕ್ಕೆ ನೂರರಷ್ಠಾಗಿದೆ. ಒಟ್ಟು 45 ವಿದ್ಯಾರ್ಥಿಗಳಲ್ಲಿ 20 ಡಿಸ್ಟಿಂಗ್ಷನ್, 24 ಪ್ರಥಮ ಹಾಗೂ 1 ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾಗಿದ್ದಾರೆ.
ಶಾಲೆಗೆ 604 (ಶೇ.97.12) ಅಂಕ ಪಡೆದು ದೀಪಾ ಮುತ್ತಗಿ ಪ್ರಥಮ, 582 (ಶೇ.93.12) ಅಂಕ ಪಡೆದು ರಚನಾ ಯಂಡಿಗೇರಿ ದ್ವಿತೀಯ, 580 (ಶೇ.92.80) ಅಂಕ ಪಡೆದು ಸ್ನೇಹಾ ಅಥಣಿ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಚೇರಮನ್ ಕಮಲಕಿಶೋರ ಮಾಲಪಾಣಿ, ಮುಖ್ಯಗುರು ಆರ್.ಎನ್.ಕಾಟವಾ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದೆ.