ರಾಣೆಬೆನ್ನೂರ

ಗ್ರಾಪಂ ಚುನಾವಣೆ ಅಧ್ಯಕ್ಷರಾಗಿ ವೆಂಕಟೇಶ್ ದೊಡ್ಡಮನಿ

ಗ್ರಾಪಂ ಚುನಾವಣೆ ಅಧ್ಯಕ್ಷರಾಗಿ ವೆಂಕಟೇಶ್ ದೊಡ್ಡಮನಿ

ರಾಣೇಬೆನ್ನೂರು 01:  ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರ ಆಯ್ಕೆ ಚುನಾವಣಾ ಪ್ರಕ್ರಿಯೆ ಗುರುವಾರ ನಡೆಯಿತು. ಲೋಕಾಪುರ ಗ್ರಾಮದ ವೆಂಕಟೇಶ ದೊಡ್ಡಮನಿ ಅವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.. ಹಿಂದೆ ಅಧ್ಯಕ್ಷರಾಗಿದ್ದ ಗೀತಾ ಓಲೆಕಾರ್, ಅವರು, ತಮ್ಮ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದರಿಂದ, ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದು, ದೊಡ್ಡಮನಿ ಆಯ್ಕೆಯಾಗಿದ್ದಾರೆ. ಪಂಚಾಯಿತಿಯಲ್ಲಿ ಒಟ್ಟು 16 ಸದಸ್ಯ ಬಲವಿದ್ದು,  ಆಯ್ಕೆಯು ಸಾಮಾನ್ಯ ಸ್ಥಾನದಿಂದ ನಡೆದಿರುವದಾಗಿ, ಚುನಾವಣಾ ಅಧಿಕಾರಿಯಾಗಿದ್ದ, ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಎಸ್ ಪಿ, ಸುಮಲತಾ ಅವರು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ಟಿ.ಬಿ. ಮೂಗಾನವರ್, ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. 


ಸುದ್ದಿ ಓದಿ