ರಾಣೆಬೆನ್ನೂರ

ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ

ವೀರವನಿತೆ ಒನಕೆ ಓಬವ್ವ ಜಯಂತ್ಯೋತ್ಸವ

ರಾಣೇಬೆನ್ನೂರ: ತಾಲ್ಲೂಕಾಡಳಿತ ರಾಣೇಬೆನ್ನೂರು ಮತ್ತು ಛಲವಾದಿ ಮಹಾಸಭಾ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಸಂಸ್ಥೆಯು, ಇಂದು  ರಾಣೇಬೆನ್ನೂರು ತಾಲ್ಲೂಕ ಕಚೇರಿಯಲ್ಲಿ ವೀರವನಿತೆ ಒನಕೆ ಓಬವ್ವ ಜಯಂತೋತ್ಸವವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಆಚರಣೆ ಮಾಡಲಾಯಿತು.

ತಾಲ್ಲೂಕ ಶಿರಸ್ತೇದಾರರಾದ  ವೀಣಾ ಕಲ್ಲಮ್ಮನವರ ಹಾಗೂ ಚಲವಾದಿ ಮಹಾಸಭಾದ ತಾಲ್ಲೂಕ ಅಧ್ಯಕ್ಷ ಬಸವರಾಜ ಸಾವಕ್ಕನವರ, ಸಮಾಜದ ಹಿರಿಯ ಮುಖಂಡರಾದ ಕುಬೇರಪ್ಪ ಆಟವಾಳಗಿ ಅಂಬೇಡ್ಕರ್ ಸೇವಾ ಸಂಸ್ಥೆ ಮತ್ತು ಎಸ್ಎಫ್ಐ ಅಧ್ಯಕ್ಷ ಶ್ರೀಧರ್ ಚಲವಾದಿ ಹಾಗೂ ಸಂಸ್ಥೆಯ ಕಾರ್ಯಕರ್ತರು ಚಲವಾದಿ ಸಮಾಜದ  ಮಹಿಳೆಯರು ಯುವಕರು ಹಿರಿಯ ಮುಖಂಡರು  ಸೇರಿದಂತೆ ತಾಲ್ಲೂಕಾಡಳಿತದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸುದ್ದಿ ಓದಿ